16

Image Credit : Facebook
ಸೈಕೋ ಗಂಡ ಜಯಂತ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಗಂಡ ಜಯಂತನ ಸಹವಾಸವೇ ಸಾಕು ಎಂದು ಶ್ರೀಲಂಕಾದಲ್ಲಿ ಗಂಡನೊಂದಿಗೆ ಪ್ರವಾಸಕ್ಕೆ ಹೋದಾಗ ಸಮುದ್ರಕ್ಕೆ ಬಿದ್ದಿದ್ದ ಚಿನ್ನುಮರಿ ಜಾಹ್ನವಿ ನಂತರ ಬದುಕಿ ಬಂದಿದ್ದಳು.
26
Image Credit : Facebook
ವಿಶ್ವನ ಮನೆಯಲ್ಲಿಯೇ ಇದ್ದಾಳೆ
ಆದರೆ, ಇದೀಗ ಪುನಃ ತನ್ನ ಹೆಂಡತಿ ಬದುಕಿದ್ದಾಳೆ ಎಂಬ ಸುಳಿವನ್ನು ಅರಿತುಕೊಂದ ಗಂಡ ಜಯಂತ್, ಜಾಹ್ನವಿಯನ್ನು ಕಾಲೇಜಿನಲ್ಲಿ ಪ್ರೀತಿ ಮಾಡುತ್ತಿದ್ದ ವಿಶ್ವನ ಮನೆಯಲ್ಲಿಯೇ ಇದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.
36
Image Credit : Facebook
ತಾಕತ್ತಿದ್ದರೆ ಹುಡುಕಿ ಕರೆದುಕೊಂಡು ಹೋಗು
ಸ್ವತಃ ವಿಶ್ವನೇ ಜಾಹ್ನವಿಯ ಕಂಡ ಜಯಂತನಿಗೆ ನೀನು ನಿನ್ನ ಹೆಂಡತಿಯನ್ನು ತಾಕತ್ತಿದ್ದರೆ ಹುಡುಕಿ ಕರೆದುಕೊಂಡು ಹೋಗು ಎಂದು ಸವಾಲು ಹಾಕಿದ್ದಾನೆ.
ಇದರಿಂದ ಜಾಹ್ನವಿಯನ್ನು ಹುಡುಕಲು ವಿಶ್ವನ ಕಾಲೇಜು ಸ್ನೇಹಿತರನ್ನು ಕರೆಸುವುದು, ಜಾಹ್ನವಿ ಅವರ ಅಪ್ಪನ ಮನೆಗೆ ಹೋಗಿ ಬರುವುದು ಹಾಗೂ ಇತರೆ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ, ಇದ್ಯಾವುದೂ ತನಗೆ ವರ್ಔಟ್ ಆಗದ ಕಾರಣ ಇದೀಗ ತಾನೇ ಸ್ವತಃ ಚಿನ್ನುಮರು ಹುಡುಕಲು ಮುಂದಾಗಿದ್ದಾರೆ.
46
Image Credit : Facebook
ಜಾಹ್ನವಿ ರಕ್ಷಣೆಗಾಗಿ ಥಿಯೇಟರ್‌ನಲ್ಲಿ ಬೆಂಕಿ
ಈಗಾಗಲೇ ಒಮ್ಮೆ ಸಿನಿಮಾ ಥಿಯೇಟರ್‌ನಲ್ಲಿ ತನ್ನ ಹೆಂಡತಿ ಚಿನ್ನುಮರಿ ಬಂದಿದ್ದಾಳೆ ಎಂಬ ಸುಳಿವನ್ನು ಹಿಡಿದು ಇನ್ನೇನು ಹೆಂಡತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದೇ ಬಿಟ್ಟ ಎನ್ನುವಾಗ ವಿಶ್ವ ಆಕೆಯನ್ನು ರಕ್ಷಣೆ ಮಾಡುತ್ತಾನೆ. ಜಾಹ್ನವಿ ರಕ್ಷಣೆಗಾಗಿ ಥಿಯೇಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಂತೆ ಮಾಡಿ ಎಲ್ಲರನ್ನೂ ಕಳಿಸಿ, ಜಾಹ್ನವಿ ಜಯಂತನ ಕೈಗೆ ಸಿಗದಂತೆ ಹೊರಗೆ ಕರೆದುಕೊಂಡು ಬರುತ್ತಾನೆ.
56
Image Credit : Facebook
ಸೈಕೋ ಜಯಂತ ವೇಷ ಬದಲು
ಇದೀಗ ಎಲ್ಲರ ಆಲೋಚನೆಗೂ ಮೀರಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸೈಕೋ ಜಯಂತ ವೇಷ ಬದಲಿಸಿಕೊಂಡು ವೃದ್ಧನಂತೆ ನಾಟಕವಾಡುತ್ತಾ ಸಹಾಯ ಕೇಳಿಕೊಂಡು ವಿಶ್ವನ ಮನೆಗೆ ಹೋಗಿದ್ದಾನೆ. ಈ ಮೂಲಕ ವಿಶ್ವನ ಮನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಚಿನ್ನುಮರಿಯನ್ನು ಹುಡುಕುವುದಕ್ಕೆ ಮುಂದಾಗಿದ್ದಾನೆ.
66
Image Credit : Facebook
ಸೈಕೋ ಗಂಡನ ಕಣ್ಣಿಗೆ ಸಿಕ್ಕಿಬಿದ್ದ ಚಿನ್ನುಮರಿ
ಕೆಲಸಕ್ಕೆ ಸೇರಿಕೊಂಡ ದಿನವೇ ಚಿನ್ನುಮರಿ ತನ್ನ ಸೈಕೋ ಗಂಡನ ಕಣ್ಣಿಗೆ ಸಿಕ್ಕಿಬೀಳುತ್ತಾಳೆ. ತನ್ನ ಹೆಂಡತಿ ಜೀವಂತವಾಗಿದ್ದಾಳೆ ಎಂಬುದನ್ನು ಕಂಡ ಜಯಂತ್ ಜಾಹ್ನವಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡು ಮನೆಗೆ ಕರೆದುಕೊಂಡು ಹೋಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.