Headlines

Lakshmi Nivasa ರೋಚಕ ಟ್ವಿಸ್ಟ್​: ಲಲಿತಾ ಮ*ರ್ಡರ್​? ಸಾಯಿಸೋರು ಜಯಂತನಾ, ಸಂತೋಷ​ನಾ?

Lakshmi Nivasa ರೋಚಕ ಟ್ವಿಸ್ಟ್​: ಲಲಿತಾ ಮ*ರ್ಡರ್​? ಸಾಯಿಸೋರು ಜಯಂತನಾ, ಸಂತೋಷ​ನಾ?

Lakshmi Nivasa ರೋಚಕ ಟ್ವಿಸ್ಟ್​: ಲಲಿತಾ ಮ*ರ್ಡರ್​? ಸಾಯಿಸೋರು ಜಯಂತನಾ, ಸಂತೋಷ​ನಾ?

ಲಕ್ಷ್ಮೀ ನಿವಾಸ ಧಾರಾವಾಹಿಯು ಯಾರೂ ಊಹಿಸದ ಟ್ವಿಸ್ಟ್​ ಪಡೆದುಕೊಂಡಿದೆ. ಜಯಂತ್ ಮತ್ತು ವಿಶ್ವನ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಜಾಹ್ನವಿ ಅಣ್ಣ ಸಂತೋಷ್ ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾನೆ. ಈ ನಡುವೆ, ಲಲಿತಾ ಪಾತ್ರ ಅಂತ್ಯವಾಗುವುದು ಖಚಿತವಾಗಿದೆ.

ಲಕ್ಷ್ಮೀ ನಿವಾಸ (Lakshmi Nivasa) ಈಗ ಯಾರೂ ಊಹಿಸದ ಟ್ವಿಸ್ಟ್​ ಪಡೆದುಕೊಂಡಿದೆ. ಜಯಂತ್​, ಪತ್ನಿ ಜಾಹ್ನವಿಗಾಗಿ ವೆಂಕಿ ಮತ್ತು ಚೆಲುವಿಯನ್ನು ಕಿಡ್​ನ್ಯಾಪ್​ ಮಾಡಿ, ಜಾಹ್ನವಿಯನ್ನು ಕರೆದುಕೊಂಡು ಬರದಿದ್ರೆ ಇವರಿಬ್ಬರ ಕಥೆ ಮುಗಿಸುವುದಾಗಿ ವಿಶ್ವನಿಗೆ ಧಮ್ಕಿ ಹಾಕಿದ್ದ.

ಆದರೆ ವಿಶ್ವ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಜಾಹ್ನವಿಯನ್ನು ಕಟ್ಟಿಹಾಕುವಂತೆ ನಾಟಕ ಮಾಡಿ, ಜಯಂತ್​ಗೆ ವಿಡಿಯೋ ಕಾಲ್​ನಲ್ಲಿ ಅವರಿಬ್ಬರನ್ನೂ ಬಿಡದಿದ್ದರೆ ಜಾಹ್ನವಿ ಕಥೆ ಮುಗಿಸುವುದಾಗಿ ಹೇಳಿದ.

ಇದರಿಂದ ತಲ್ಲಣಗೊಂಡಿರೋ ಜಯಂತ್​, ಈಗ ಚಿನ್ನುಮರಿಯನ್ನು ಹುಡುಕಿಕೊಂಡು ನೇರವಾಗಿ ವಿಶ್ವನ ಮನೆಗೆ ಬಂದಿದ್ದಾನೆ. ಆದರೆ ಎಲ್ಲವನ್ನೂ ಬಲ್ಲ ವಿಶ್ವನ ಅಮ್ಮ ಲಲಿತಾ, ಜಯಂತ್​ನನ್ನು ಒಳಗೆ ಬಿಡಲಿಲ್ಲ. ನೀನು ಬಂದೇ ಬರ್ತಿಯಾ ಎಂದು ತಿಳಿದಿತ್ತು. ಆದರೆ ನಾನು ಬದುಕಿರುವವರೆಗೂ ಅವಳು ನಿನಗೆ ಸಿಗುವುದಿಲ್ಲ ಎಂದಿದ್ದಾಳೆ.

ಅದೇ ಇನ್ನೊಂದೆಡೆ, ಇದೆಲ್ಲವನ್ನೂ ಜಾಹ್ನವಿ ಅಣ್ಣ ಸಂತೋಷ್​ ವಿಡಿಯೋ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಪ್ರೊಮೋ ಬಿಡುಗಡೆಯಾಗಿದೆ. ಅಲ್ಲಿಗೆ ಲಲಿತಾ ಸಾವು ನಿಶ್ಚಿತವಾಗಿದೆ.

ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಲಲಿತಾ ಪಾತ್ರಧಾರಿಯಾಗಿರುವ ನಟಿ ವಿಜಯಲಕ್ಷ್ಮಿ ಅವರು ತಮ್ಮ ಸೋಷಿಯಲ್​ಮೀಡಿಯಾ ಖಾತೆಯಲ್ಲಿ ತಮ್ಮ ಪಾತ್ರವನ್ನು ಅನ್ಯಾಯವಾಗಿ ಸಾಯಿಸಿರುವ ಬಗ್ಗೆ ನೋವು ತೋಡಿಕೊಂಡಿದ್ದರು. ತಮಗೆ ತಿಳಿಸದೇ ಇಡೀ ಸೀರಿಯಲ್​ ತಂಡ ಅನ್ಯಾಯ ಮಾಡಿದೆ, ಇದ್ಯಾವ ನ್ಯಾಯ ಎಂದು ತುಂಬಾ ದುಃಖದಿಂದ ನುಡಿದಿದ್ದರು. ಆದ್ದರಿಂದ ಇಲ್ಲಿಗೆ ಅವರ ಪಾತ್ರ ಅಂತ್ಯ ಕಾಣುವುದು ಖಚಿತವಾಗಿದೆ.

ಆದರೆ ಅವರ ಕೊ*ಲೆ ಮಾಡುವುದು ಜಯಂತ್​ನೋ ಅಥ್ವಾ ಸಂತೋಷನೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಜಯಂತ್​ ಎಂಥ ಸೈಕೋ ಎನ್ನುವುದು ತಿಳಿದಿದೆ. ತನ್ನ ಚಿನ್ನುಮರಿಗಾಗಿ ಆತ ಎಂಥ ಹೇಯ ಕೆಲಸವನ್ನೂ ಮಾಡಬಲ್ಲ. ಆದ್ದರಿಂದ ಲಲಿತಮ್ಮನ ಸಾಯಿಸೋದು ಅವನಿಗೆ ಕಷ್ಟದ ವಿಷಯವೇ ಅಲ್ಲ.

ಅದೇ ಇನ್ನೊಂದೆಡೆ, ಹೇಗಾದರೂ ಮಾಡಿ ಹಣ ಸಂಪಾದನೆ ಮಾಡುವ ನೀಚತನಕ್ಕೆ ಇಳಿದಿರೋ ಸಂತೋಷ್​, ಇವೆಲ್ಲಾ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದಾನೆ. ತಾನೇ ಲಲಿತಾಳನ್ನು ಸಾಯಿಸಿ, ಇದನ್ನು ಜಯಂತ್​ ತಲೆ ಮೇಲೆ ಕಟ್ಟಿ ಬ್ಲ್ಯಾಕ್​ಮೇಲ್ ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಕೊ*ಲೆ ಮಾಡುವುದು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ​

Source link

Leave a Reply

Your email address will not be published. Required fields are marked *