17

Image Credit : Instagram
ವಿಶ್ವನ ರಕ್ಷಣೆ
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಸದ್ಯ ಜಾಹ್ನವಿ ಹಾಗೂ ಹೀಗೂ ವಿಶ್ವನ ಮನೆಯಲ್ಲಿ ಇದ್ದಾಳೆ. ವಿಶ್ವ ಆಕೆಯನ್ನು ಎಲ್ಲಾ ರೀತಿಯಿಂದಲೂ ರಕ್ಷಣೆ ಮಾಡುತ್ತಿದ್ದಾರೆ. ಆಕೆಯನ್ನು ಕಣ್ಣಲ್ಲಿ ಕಣ್ಣು ಇಟ್ಟು ನೋಡಿಕೊಳ್ತಿದ್ದಾನೆ.
27
Image Credit : Instagram
ಪಣ ತೊಟ್ಟ ಜಯಂತ್
ಅದೇ ಇನ್ನೊಂದೆಡೆ, ಸೈಕೋ ಜಯಂತ್ ಮಾತ್ರ ಪತ್ನಿಯ ಹುಡುಕಾಟ ಬಿಟ್ಟಿಲ್ಲ. ಕೈಗೆ ಸಿಕ್ಕ ಪತ್ನಿ ವಿಶ್ವನ ಕಾರಣದಿಂದ ಪದೇ ಪದೇ ತಪ್ಪಿಸಿಕೊಳ್ಳುತ್ತಿರುವುದು ಅವನಿಗೆ ನುಂಗಲಾಗದ ತುತ್ತಾಗಿದೆ. ಹೇಗಾದರೂ ಆಕೆಯನ್ನು ಕಂಡುಹಿಡಿದೇ ತೀರುತ್ತೇನೆ ಎನ್ನುವ ಪಣ ತೊಟ್ಟಿದ್ದಾನೆ.
37
Image Credit : Instagram
ಜಾಹ್ನವಿ ಬಚಾವ್
ಜಯಂತ್ ಕಣ್ಣುಗಳಿಂದ ವಿಶ್ವ ಜಾಹ್ನವಿಯನ್ನು ಹಲವಾರು ಬಾರಿ ಬಚಾವ್ ಮಾಡಿದ್ದಾನೆ. ಆದರೆ ಇದಾಗಲೇ ವಿಶ್ವನ ಭಾವಿ ಪತ್ನಿ ತನುಗೆ ಜಾಹ್ನವಿ ಮತ್ತು ವಿಶ್ವನ ಮೇಲೆ ಡೌಟ್ ಬಂದಿದೆ. ಇದನ್ನು ಜಾಹ್ನವಿ ಬಗೆಹರಿಸಿದ್ದರೂ ಅನುಮಾನ ಎನ್ನುವುದು ಅಷ್ಟು ಬೇಗ ಹೋಗಲ್ಲ ಅಲ್ವಾ?
47
Image Credit : Instagram
ತನುವಿನ ಸಂದೇಹ
ಇದೀಗ ಅದೇ ಡೌಟ್ ಅನ್ನು ವಿಶ್ವನ ಅಮ್ಮನ ತಲೆಗೂ ಹಾಕಿದ್ದಾಳೆ ತನು. ಸಂಬಳ ಇಲ್ಲದೇ ಜಾಹ್ನವಿ ಮನೆಯಲ್ಲಿ ಕೆಲಸ ಮಾಡುವುದು ಹೇಗೆ ಸಾಧ್ಯ, ಅವಳ ಹಿನ್ನೆಲೆ ಏನೋ ಇರಬೇಕಲ್ವಾ? ಯಾವುದೋ ಉದ್ದೇಶ ಇಟ್ಟುಕೊಂಡೇ ಬಂದಿರಬೇಕಲ್ವಾ ಎಂದು ತನು ವಿಶ್ವನ ಅಮ್ಮನ ತಲೆ ತುಂಬಿದ್ದಾಳೆ. ಜಾಹ್ನವಿ ತನ್ನ ಮನೆಯವರ ಬಗ್ಗೆ ಹೇಳದೇ ಇರುವುದು ಕೂಡ ಈಗ ಅನುಮಾನಕ್ಕೆ ಕಾರಣವಾಗಿದೆ.
57
Image Credit : Instagram
ತಲೆಹೊಕ್ಕೆ ಅನುಮಾನ
ಒಮ್ಮೆ ಅನುಮಾನ ತಲೆಗೆ ಹೊಕ್ಕಿತು ಎಂದರೆ ಅದು ಸುಲಭದಲ್ಲಿ ಹೋಗುವ ಮಾತಲ್ಲವಲ್ಲ, ವಿಶ್ವನ ಅಮ್ಮನಿಗೂ ಈಗ ಜಾಹ್ನವಿ ಬಗ್ಗೆ ಡೌಟ್ ಶುರುವಾಗಿದೆ. ಎಷ್ಟೇ ದುಡ್ಡು ಕೊಟ್ಟರೂ ಸಾಕಾಗಲ್ಲ ಎನ್ನುವ ಕೆಲಸದವರೇ ಇರುವಾಗ, ಇವಳು ಪುಕ್ಕಟೆ ಯಾಕೆ ಕೆಲಸ ಮಾಡುತ್ತಿದ್ದಾಳೆ ಎನ್ನುವುದು ಆಕೆಯ ತಲೆಯಲ್ಲಿ ಈಗ ಕೊರೆಯಲು ಶುರುವಾಗಿದೆ.
67
Image Credit : Instagram
ತನಿಖೆ ಶುರು
ಹೇಗಾದರೂ ಮಾಡಿ ಜಾಹ್ನವಿಯ ಹಿನ್ನೆಲೆ, ಕುಟುಂಬದವರ ಬಗ್ಗೆ, ಆಕೆ ಬಂದಿದ್ಯಾಕೆ ಎನ್ನುವ ಬಗ್ಗೆ ತನಿಖೆಯನ್ನು ಶುರುವಿಟ್ಟುಕೊಂಡಿದ್ದಾಳೆ ವಿಶ್ವನ ಅಮ್ಮ. ಅದಕ್ಕೆ ತನು ಸಾಥ್ ಕೊಟ್ಟಿದ್ದಾಳೆ.
77
Image Credit : Instagram
ಜಾಹ್ನವಿ ಕಥೆ ಏನು?
ಇನ್ನು ಜಾಹ್ನವಿ ಕಥೆ ಏನು? ವಿಶ್ವನ ಅಮ್ಮನಿಗೇ ಡೌಟ್ ಬಂತು ಎಂದರೆ ಅವಳಿಗೆ ಅಲ್ಲಿಯೂ ನೆಲೆ ಇಲ್ಲ ಎಂದೇ ಅರ್ಥ. ಬೇರೆ ಕಡೆ ಹೋದರೆ ಸೈಕೋ ಗಂಡನ ಕೈಗೆ ಸಿಕ್ಕಿಬೀಳ್ತಾಳೆ. ಜಾಹ್ನವಿ ಕಥೆ ಏನು? ಊಹಿಸಲಾಗದ ತಿರುವು ಪಡೆದುಕೊಳ್ಳಲಿದೆ ಸೀರಿಯಲ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.