
ಮೆಗಾಸ್ಟಾರ್ (ಮೆಗಾಸ್ಟಾರ್) ಕುಟುಂಬದ ಸೊಸೆ, ಜನಪ್ರಿಯ ನಟಿಯಾಗಿರುವ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಲಾವಣ್ಯಾ ತ್ರಿಪಾಠಿ, ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಅವರೊಡನೆ ವಿವಾಹವಾಗಿದ್ದು, ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ನಟಿ ಲಾವಣ್ಯಾ ತ್ರಿಪಾಠಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ದೂರು ನೀಡಿರುವುದು ಕುಟುಂಬದವರ ವಿರುದ್ಧ ಅಲ್ಲ ಬದಲಾಗಿ ಆನ್ಲೈನ್ನಲ್ಲಿ ತಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ಬಗ್ಗೆ.
ಲಾವಣ್ಯಾ ತ್ರಿಪಾಠಿ ಅವರು ಹಾಗೂ ಅವರ ಕುಟುಂಬದವರನ್ನು ಗುರಿಯಾಗಿಸಿಕೊಂಡು ಆನ್ಲೈನ್ನಲ್ಲಿ ಕೆಲವು ವ್ಯಕ್ತಿಗಳು ತೀವ್ರ ನಿಂದನೆ, ಅಶ್ಲೀಲ ಕಮೆಂಟ್ಗಳು, ಫೋಟೊ ತಿದ್ದಿ ಹಂಚಿಕೊಳ್ಳುವ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಈ ಆನ್ಲೈನ್ ದೌರ್ಜನ್ಯ, ಹಿಂಸೆಯ ವಿರುದ್ಧದ ನಟಿ ಲಾವಣ್ಯಾ, ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರಾಬಾದ್ ನ ಸೈಬರ್ ಪೊಲೀಸರಿಗೆ ನಟಿ ಲಾವಣ್ಯಾ ತ್ರಿಪಾಠಿ ದೂರು ನೀಡಿದ್ದು, ಕಿರುಕುಳ ನೀಡುತ್ತಿರುವವರ ಖಾತೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪರ್ಪಲ್ ಕ್ರೇಯಾನ್ (ಪರ್ಪಲ್ ಕ್ರಯೋನ್00) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಿಂದ ತಮಗೆ ಸತತ ಕಿರುಕುಳ ನೀಡಲಾಗುತ್ತಿದೆ ಎಂದು ನಟಿ ಲಾವಣ್ಯಾ ತ್ರಿಪಾಠಿ ಹೇಳಿದ್ದಾರೆ. ಈ ಖಾತೆಯು ತಮ್ಮ ವಿರುದ್ಧ ಕೀಳು ಮಟ್ಟದ ಹೇಳಿಕೆಗಳು, ಜೊತೆಗೆ ತಮ್ಮ ಕುಟುಂಬದವರ ಜೊತೆಗೆ ಸಹ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿರುವ ನಟಿ. ಕಳೆದ ಕೆಲವು ತಿಂಗಳುಗಳಿಂದಲೂ ಪರ್ಪಲ್ ಕ್ರೇಯಾನ್ ಖಾತೆಯಿಂದ ನಟಿಯ ಸಂದೇಶಗಳು, ನಟಿಯ ಪೋಸ್ಟ್ಗಳಿಗೆ ಕಮೆಂಟ್ಗಳನ್ನು ಮಾಡಲಾಗುತ್ತಿದೆ.
ಇದನ್ನೂ ಓದಿ:ರಶ್ಮಿಕಾ, ವಿಜಯ್ ಆರತಕ್ಷತೆ: ನವದಂಪತಿಗೆ ಆಶೀರ್ವಾದ ಮಾಡಿದ ಚಿರಂಜೀವಿ
ಲಾವಣ್ಯಾ ತ್ರಿಪಾಠಿ ಮೂಲತಃ ಉತ್ತರ ಪ್ರದೇಶದವರಾಗಿದ್ದು ನಟನೆ ಆರಂಭಿಸಿದ್ದು ತೆಲುಗು ಸಿನಿಮಾ ಮೂಲಕ. ಉತ್ತರ ಭಾರತ ಮೂಲದ ನಟಿ ಆಗಿದ್ದರೂ ಸಹ ಲಾವಣ್ಯಾ ನಟಿಸಿರುವುದು ಕೇವಲ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ. ಲಾವಣ್ಯಾ ತ್ರಿಪಾಠಿ ಮತ್ತು ವರುಣ್ ತೇಜ್ ಅವರು 2017 ರಲ್ಲಿ ‘ಮಿಸ್ಟರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಬಳಿಕ 2018 ರಲ್ಲಿ ‘ಅಂತರಿಕ್ಷಂ 9000 ಕೆಂಪಿಎಚ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿದ್ದು 2023 ರಲ್ಲಿ ಈ ಜೋಡಿ ಮದುವೆ ಆದರು. ಇದೀಗ ಗಂಡು ಮಗುವಿನ ಪೋಷಕರಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ