ಚಿಕ್ಕಬಳ್ಳಾಪುರ, ಅಕ್ಟೋಬರ್ 28: ಟಿಪ್ಪು ಅರಮನೆ ಮೇಲೆ ಬಿಷ್ಣೋಯ್ (ಲಾರೆನ್ಸ್ ಬಿಷ್ಣೋಯ್) ಹೆಸರು ಬರೆದು ವಿಕೃತಿ ಸಂಬಂಧ ಪ್ರಕರಣ ಟಿವಿ9 ವರದಿ ಬೆನ್ನಲ್ಲೇ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ನಂದಿಗಿರಿಧಾಮದಲ್ಲಿರುವ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದ ಟಿಪ್ಪು ಸುಲ್ತಾನ್ ಸಮ್ಮರ್ ಪ್ಯಾಲೇಸ್ ಮೇಲೆ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ದೊಡ್ಡದಾಗಿ ಬರೆಯಲಾಗಿದೆ. ಇದರಿಂದ ಟಿಪ್ಪು ಸುಲ್ತಾನ್ ಅಭಿಮಾನಿಗಳು ಹಾಗೂ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸದ್ಯ ತಿಹಾರ್ ಜೈಲಿನಲ್ಲಿರುವ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಎಂಬ ಹೆಸರಿನ ಟಿಪ್ಪು ಅರಮನೆ ಮೇಲೆ ಬರೆದಿರುವ ಬಗ್ಗೆ ಟಿವಿ9 ವರದಿ ಮಾಡಿದೆ. ಈ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರದಿಗಾರರ ಪಟ್ಟಿಗೆ ಹಾಜರಾಗಿದ್ದು, ಎಸ್ಪಿ ಕುಶಲ್ ಚೌಕ್ಸೆ ಸೂಚನೆ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ. ದುಷ್ಕರ್ಮಿಗಳು ಒಂದು ತಿಂಗಳ ಹಿಂದೆಯೇ ಬಿಷ್ಣೋಯ್ ಹೆಸರು ಬರೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ, ಪಿಡಿಎಲ್ ಪಿ ಹಾಗೂ ಬಿಎನ್ ಎಸ್ ಆಯಕ್ಟ್ 324(2), 329(3)ರಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಟಿಪ್ಪು ಸುಲ್ತಾನ್ ಪ್ಯಾಲೇಸ್ ಮೇಲೆ ಕುಖ್ಯಾತ ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಹೆಸರು: ಭುಗಿಲೆದ್ದ ಆಕ್ರೋಶ
ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಹೇಳಿದ್ದೇನು?
ಅಳಿಸಿದ ಇಲಾಖೆ ಸಿಬ್ಬಂದಿ
ಟಿಪ್ಪು ಅರಮನೆಯ ಮೇಲೆ ದುಷ್ಕರ್ಮಿಗಳು ಬರೆದಿದ್ದ ಬರಹವನ್ನು ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆ ಸಿಬ್ಬಂದಿ ಅಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಹೆಸರಿನ ಮೇಲೆ ಬಣ್ಣ ಬಳಿಯಲಾಗಿದೆ. ಘಟನೆ ಸಂಬಂಧ ಸ್ಥಳ ಸಿಸಿ ಕ್ಯಾಮರಾಗಳ ಪರಿಶೀಲನೆಯನ್ನು ನಡೆಸುತ್ತಿರುವಾಗ, ಶೀಘ್ರ ಆರೋಪಿಗಳ ಪತ್ತೆಗೆ ಕಠಿಣ ಕ್ರಮದ ಭರವಸೆಯನ್ನು ನೀಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.