ನವದೆಹಲಿ, ಫೆಬ್ರುವರಿ 13: ಜಗತ್ತು ಈಗ ಹೆಚ್ಚೆಚ್ಚು ಐಮಯವಾಗುತ್ತಿದೆ. ಎಲ್ಲಾ ಕ್ಷೇತ್ರಗಳಲ್ಲಿ ಐ ಅಳವಡಿಕೆ ಕ್ಷಿಪ್ರವಾಗಿ ನಡೆಯುತ್ತಿದೆ. ಬಹಳ ಅನುಕೂಲಕರ ಪ್ರಕಾರ ಎಐನಿಂದ ಎಲ್ಲಾ ಸೆಕ್ಟರ್ ಉದ್ಯೋಗಗಳು ಬಾಧಿತವಾಗಬಹುದು. ಅದರಲ್ಲೂ ಟೆಕ್ ಸೆಕ್ಟರ್ ಅಂತೂ ಎಐ ಜೊತೆ ನಿಕಟ ಸಂಬಂಧ ಹೊಂದಿದೆ. ಎಐ ಅಭಿವೃದ್ಧಿಯಲ್ಲಿ ತೊಡಗಿರುವ ಗೂಗಲ್‌ನಂತಹ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಈಗ ಎಐ ಭೀತಿ ಶುರುವಾಗಿದೆ. ಗೂಗಲ್‌ನಲ್ಲಿ ಭಾರೀ ಮಟ್ಟದಲ್ಲಿ ಲೇ ಆಫ್‌ಗಳು ನಡೆಯುತ್ತಿವೆ. ಆದರೆ, ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ ಮೊದಲು ಅವರಿಗೆ ಎಐ ಕಲಿಯಿರಿ ಇಲ್ಲ ತೊರೆಯಿರಿ ಎಂಬ ಒಂದು ಆಯ್ಕೆಯನ್ನು ಕೊಡುತ್ತಿದೆ ಎಂದು ವರದಿಗಳು ಹೇಳುತ್ತವೆ.
ಗೂಗಲ್ ಈಗ ಎಲ್ಲಾ ಉದ್ಯೋಗಿಗಳಿಗೆ ವಾಲಂಟರಿ ಅನ್ನು ಎಕ್ಸಿಡ್ ಸ್ಕೀಮ್ ಆಫರ್ ಮಾಡಿದೆ. ಅಂದರೆ, ಸ್ವಯಂ ತೊರೆಯುವಿಕೆಗೆ ಅವಕಾಶ ಕೊಟ್ಟಿದೆ. ಪ್ರತಿಯೊಬ್ಬರು ಕೂಡ ಈ ಪರಿಣಿತಿ ಹೊಂದಿರಬೇಕು. ಎಲ್ಲವೂ ತಿಳಿದಿರಬೇಕು. ಇದಕ್ಕೆ ಸಿದ್ಧರಿಲ್ಲದವರು ಕಂಪನಿಯನ್ನು ತಾವಾಗಿಯೇ ಬಿಟ್ಟುಹೋಗಬಹುದು. ಅವರಿಗೆ ಒಂದಷ್ಟು ಪರಿಹಾರಗಳನ್ನು ಕೊಟ್ಟು ಕಳುಹಿಸಲಾಗುವುದು. ಇದು ಗೂಗಲ್ ತನ್ನ ಉದ್ಯೋಗಿಗಳಿಗೆ ಕೊಟ್ಟಿರುವ ವಾಲಂಟರಿ ಎಕ್ಸಿಟ್ ಪ್ಯಾಕೇಜ್ನ ಆಫರ್.
ಇದನ್ನೂ ಓದಿ: ಮೂರೂವರೆ ಲಕ್ಷ ಕೋಟಿ ರೂ ಮೌಲ್ಯದ ಕ್ಷಿಪಣಿ, ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ
ಎಐ ಬಹಳ ವೇಗವಾಗಿ ಅಭಿವೃದ್ದಿಗೊಳ್ಳುತ್ತಿದೆ. ಆರ್ಟಿಫಿಶಿಯಲ್ ಜೆನರೇಟಿವ್ ಇಂಟೆಲಿಜೆನ್ಸ್ ಆಗಮನವಾಗುತ್ತಿದೆ. ಜಗತ್ತಿನ ಟೆಕ್ ಲೋಕ ಕ್ಷಿಪ್ರವಾಗಿ ಬದಲಾವಣೆಗಳನ್ನು ಕಾಣುತ್ತಿದೆ. ಈ ವೇಗಕ್ಕೆ ಉದ್ಯೋಗಗಳು ಹೊಂದಿಕೊಳ್ಳದಿದ್ದರೆ ತಾವಾಗಿಯೇ ತೊರೆದು ಹೋಗಬೇಕು ಎಂಬುದು ಗೂಗಲ್‌ನ ಕಟ್ಟಳೆ.
ಈ ವಾಲಂಟರಿ ಎಕ್ಸಿಟ್ ಪ್ಯಾಕ್ ನಿಂದ ಗೂಗಲ್ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಬಹುದು. ಮೊದಲೆಯದು, ಲೇ ಆಫ್ ಮಾಡದೆಯೇ ಉದ್ಯೋಗಿಗಳ ಸಂಖ್ಯೆಯನ್ನು ಇಳಿಸಬಹುದು. ಎರಡನೆಯದು, ಎಐ ಪರಿಣಿತಿ ಹಾಗೂ ಎಲ್ಲವನ್ನೂ ಮಾಡಬಲ್ಲ ಪ್ರಬಲ ಉದ್ಯೋಗ ಸಮೂಹವು ಗೂಗಲ್‌ಗೆ ಸಿಕ್ಕಂತಾಗುತ್ತದೆ.
ಜೊತೆಗೆ, ಉದ್ಯೋಗಿಗಳಿಗೆ ಗೌರವಯುತವಾಗಿ ಕಂಪನಿ ತೊರೆಯುವ ಅವಕಾಶ ಸಿಗುತ್ತದೆ. ವಾಲಂಟರಿ ಎಕ್ಸಿಟ್ ಪ್ಯಾಕೇಜ್ ಪಡೆದು, ತಾನಾಗಿಯೇ ನಿರ್ಗಮಿಸಿದ್ದು ಎಂದು ಸಮಾಧಾನಪಟ್ಟುಕೊಳ್ಳಬಹುದು. ನಿರ್ದಿಷ್ಟ ತಿಂಗಳ ಸಂಬಳದ ಹಣವನ್ನು ಪರಿಹಾರವಾಗಿ ಪಡೆಯಬಹುದು.
ಇದನ್ನೂ ಓದಿ: ಭಾರತದಲ್ಲಿ ಹಣದುಬ್ಬರಕ್ಕೆ ಹೊಸ ಸ್ವರೂಪ; ಮೂಲ ವರ್ಷ ಬದಲಾವಣೆ; ಜನವರಿಯಲ್ಲಿ ಶೇ. 2.8 ಇನ್ಫ್ಲೇಶನ್ ದಾಖಲು
ವರದಿ ಪ್ರಕಾರ, ವಿಐಪಿ ಪ್ಯಾಕ್‌ನಲ್ಲಿ ಉದ್ಯೋಗಿಗಳಿಗೆ ಕನಿಷ್ಠ 14 ವಾರದ ಸಂಬಳವನ್ನು ಪರಿಹಾರವಾಗಿ ಕೊಡಲಾಗುತ್ತಿದೆ. ಇದರ ಜೊತೆಗೆ, ಅವರು ಮಾಡಿದ ಹಲವಾರು ವರ್ಷಗಳ ವೇತನವನ್ನು ಹೆಚ್ಚುವರಿಯಾಗಿ ಕೊಡದಿದ್ದರೆ. ಉದಾಹರಣೆಗೆ, ಒಬ್ಬ ವ್ಯಕ್ತಿ ಗೂಗಲ್‌ನಲ್ಲಿ 10 ವರ್ಷ ಕೆಲಸ ಮಾಡಿದರೆ 14 ವಾರ + 10 ವಾರ, ಒಟ್ಟು 24 ವಾರಗಳು ಸಂಬಳ ಪಡೆಯಬಹುದು. 14 ವಾರಗಳು ಸುಮಾರು ನಾಲ್ಕು ತಿಂಗಳಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ