Headlines

ಶಾಂತಂ ಪಾಪಂನಲ್ಲಿ ಲೀಲಾ ಮಂಜು ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ

ಶಾಂತಂ ಪಾಪಂನಲ್ಲಿ ಲೀಲಾ ಮಂಜು ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ

ಶಾಂತಂ ಪಾಪಂನಲ್ಲಿ ಲೀಲಾ ಮಂಜು ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ

ಕೆಲ ದಿನಗಳ ಹಿಂದೆ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಲೀಲಾ ಹಾಗೂ ಮಂಜು ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಶಾಂತಂ ಪಾಪಂ ಎಪಿಸೋಡ್.

ಲೀಲಾ ಮಂಜು (Leela Manju) ವಿಷ್ಯ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅದಕ್ಕೆ ಕಾರಣ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಶಾಂತಂ ಪಾಪಂ ಕಥೆ. ಕಲರ್ಸ್ ಕನ್ನಡ ಶಾಂತಂ ಪಾಪಂ ಹೊಸ ಎಪಿಸೋಡ್ ಗಳನ್ನು ಪ್ರಸಾರ ಮಾಡ್ತಿದೆ. ಅಲ್ಲಿ ಲೀಲಾ ಹಾಗೂ ಮಂಜು ಸ್ಟೋರಿ ಪ್ರಸಾರವಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಲರ್ಸ್ ಕನ್ನಡ, ಮೊದಲೇ ಕಥೆಯ ಬಗ್ಗೆ ಹಾಗೂ ಇದಕ್ಕೆ ನಾವು ಹೊಣೆಯಲ್ಲ ಎನ್ನುವ ಸ್ಪಷ್ಟನೆ ನೀಡುತ್ತದೆ. ನೈಜ ಕಥೆಯಾಗಿದ್ರೂ ಹೆಸರು ಬದಲಿಸಿಕೊಂಡು ಸ್ಟೋರಿಯನ್ನು ಪ್ರಸಾರ ಮಾಡುತ್ತೆ. ಲೀಲಾ ಮಂಜು ಕಥೆಯನ್ನೇ ಕಲರ್ಸ್ ಕನ್ನಡ ಪ್ರಸಾರ ಮಾಡಿದ್ರೂ, ಅದ್ರಲ್ಲಿ ಎಲ್ಲೂ ಲೀಲಾ ಹಾಗೂ ಮಂಜು ಹೆಸರಿಲ್ಲ. ಆದ್ರೆ ಶಾಂತಂ ಪಾಪಂ ಎಪಿಸೋಡ್ ಪ್ರಸಾರ ಆದ್ಮೇಲೆ ಮತ್ತೆ ಲೀಲಾ – ಮಂಜು ಟ್ರೋಲ್ ಆಗ್ತಿದ್ದಾರಂತೆ.

ಕಲರ್ಸ್ ಕನ್ನಡದಲ್ಲಿ ಶಾಂತಂ ಪಾಪಂ ಎಪಿಸೋಡ್ ಪ್ರಸಾರ ಆದ್ಮೇಲೆ ಮತ್ತಷ್ಟು ಟ್ರೋಲ್ ಆಗ್ತಿದ್ದೇವೆ ಅನ್ನೋದು ಲೀಲಾ ಹಾಗೂ ಮಂಜು ಆರೋಪ. ಇದೇ ಮತ್ತೆ ಸಂಸಾರದಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇದೆ. ಲೀಲಾ ಕಣ್ಣೀರಿಡ್ತಾ, ಮಂಜು ಹಾಗೂ ಟ್ರೋಲರ್ ಮೇಲೆ ಆರೋಪ ಮಾಡ್ತಿದ್ದ ವಿಡಿಯೋ ಒಂದು ವೈರಲ್ ಆಗಿತ್ತು. ಈಗ ಇನ್ನೊಂದು ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಲೀಲಾ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಲೀಲಾ ಹಾಗೂ ಮಂಜು ಇಬ್ಬರನ್ನೂ ನೀವು ಕಾಣ್ಬಹುದು. ಸಂಧ್ಯಾ ಎಂಬುವವರು ಲೀಲಾ ಹಾಗೂ ಮಂಜು ಸಹಾಯಕ್ಕೆ ಬಂದಿದ್ದಾರೆ. ಸಮಾಜಸೇವಕಿ ಕೆಲ್ಸ ಮಾಡ್ತಿರುವ ಸಂಧ್ಯಾ, ವಿಡಿಯೋದಲ್ಲಿ ಕಲರ್ಸ್ ಕನ್ನಡ ಹಾಗೂ ಕೆಟ್ಟ ಕಮೆಂಟ್ ಹಾಕಿದ ಬಳಕೆದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಲೀಲಾ ಹಾಗೂ ಮಂಜು ವಿಷ್ಯ ಕರ್ನಾಟಕದ ಜನತೆಗೆ ಗೊತ್ತಿರಲಿಲ್ಲ. ಅವರೇ ಮೀಡಿಯಾ ಮುಂದೆ ಬಂದು ಕಣ್ಣೀರಿಟ್ಟಿದ್ದರು. ಮಂಜು ಮನೆ ವಿಷ್ಯವನ್ನು ಬೀದಿಗೆ ತಂದಿದ್ದರು. ಅದಾದ್ಮೇಲೆ ಮೀಡಿಯಾ, ಸೋಶಿಯಲ್ ಮೀಡಿಯಾದಲ್ಲಿ ಈ ವಿಷ್ಯ ಸಾಕಷ್ಟು ಚರ್ಚೆಯಾಗಿತ್ತು. ನಂತ್ರ ಮಕ್ಕಳಿಗಾಗಿ ಇಬ್ಬರೂ ಒಂದಾಗಿರುವ ನಿರ್ಧಾರಕ್ಕೆ ಬಂದಿದ್ದರು. ಸದ್ಯ ಇಬ್ಬರು ಒಂದಾಗಿ ಒಂದಿಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಅವರಿಗೆ ಅನೇಕ ಪೇಡ್ ಪ್ರಮೋಶನ್ ಗಳು ಬರ್ತಿದೆಯಂತೆ.

ಸಂಧ್ಯಾ ಪ್ರಕಾರ ಈಗ ಸಂಸಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಸೋಶಿಯಲ್ ಮೀಡಿಯಾದಿಂದ ಇಬ್ಬರ ನೆಮ್ಮದಿ ಹಾಳಾಗಿದೆಯಂತೆ. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ, ಫೋಟೋಗಳನ್ನು ಪೋಸ್ಟ್ ಮಾಡಿದ್ರೆ ಏನು ತೊಂದ್ರೆ, ಕೆಟ್ಟ ಕಮೆಂಟ್ ಮಾಡುವ ಅಗತ್ಯ ಏನಿದೆ, ಅವರನ್ನು ಆರಾಮಾಗಿರಲು ಬಿಡಿ ಅಂತ ಸಂಧ್ಯಾ ಹೇಳಿದ್ದಾರೆ. ಅಷ್ಟೇ ಅಲ್ಲ ಅವರ ಕಥೆಯನ್ನು ಶಾಂತಂ ಪಾಪಂನಲ್ಲಿ ಬಳಸಿಕೊಳ್ಳುವ ಹಕ್ಕನ್ನು ಯಾರು ನೀಡಿದ್ರು ಅಂತ ಪ್ರಶ್ನೆ ಮಾಡಿದ್ದಾರೆ.

ಸಂಧ್ಯಾ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಅನೇಕರು ಲೀಲಾ ಹಾಗೂ ಮಂಜು ಪರ ಮಾತನಾಡಿದ್ರೆ ಮತ್ತೆ ಕೆಲವರು ಕಲರ್ಸ್ ಕನ್ನಡ ವಾಹಿನಿ ಪರ ಮಾತನಾಡಿದ್ದಾರೆ. ಮನೆ ವಿಷ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕೋದೇ ತಪ್ಪು. ಅದಕ್ಕೆ ಕೆಟ್ಟ ಕಮೆಂಟ್ ಬಂದಾಗ ಸಹಿಸಿಕೊಳ್ಳಬೇಕು ಎನ್ನುವವರೂ ಇಲ್ಲಿದ್ದಾರೆ. ಲೀಲಾ ಹಾಗೂ ಮಂಜು, ಸಂಧ್ಯಾ ಹೇಳಿದಂತೆ ಕಲರ್ಸ್ ಕನ್ನಡ ಹಾಗೂ ಶಾಂತಂ ಪಾಪಂ ಶೋ ವಿರುದ್ಧ ಕಾನೂನು ಕ್ರಮಕೈಗೊಳ್ತಾರಾ ಅನ್ನೋದನ್ನು ಕಾದು ನೋಡ್ಬೇಕಿದೆ.

Source link

Leave a Reply

Your email address will not be published. Required fields are marked *