
ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಇಂದು (ಏಪ್ರಿಲ್ 12) ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೆ ಅವರ ತೀವ್ರ ಸಮಸ್ಯೆ ಮತ್ತೆ ಎದೆನೋವಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸಿದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನರಾದರು. ಬ್ರೀಚ್ ಆಸ್ಪತ್ರೆಯ ವೈದ್ಯ, ಡಾ. ಪ್ರತೀಕ್ ಸಂಧಾನಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು, ‘ಆಶಾ ಭೋಸ್ಲೆ ಅವರು ಬಹುಾಂಗ ವೈಫಲ್ಯದಿಂದ ನಿಧನರಾದರು’.