ಬೆಳಗಾವಿ, ಡಿಸೆಂಬರ್ 11: ಬೆಳಗಾವಿ ನಗರದ ಟಿಳಕವಾಡಿ ಲೀಲೆ ಮೈದಾನದಲ್ಲಿ ಶಾಸಕ ಅಭಯ್ ಪಾಟೀಲ್ ನಡೆಸಿದ್ದ ಬಾಲ್ಯದ ಗ್ರಾಮೀಣ ಕ್ರೀಡೆಗಳ ಕಾರ್ಯಕ್ರಮಕ್ಕೆ ವಿಧಾನ ಸಭೆ ಸ್ಪೀಕರ್ ಯು.ಟಿ. ಖಾದರ್ಚಾಲನೆ ನೀಡಲಾಗಿದೆ. ಗೋಲಿ ಆಡುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಿ, ಚಿನ್ನಿ ದಾಂಡು ಸೇರಿ ಕೆಲ ಕ್ರೀಡೆಗಳನ್ನು ತಾವೇ ಆಡಿ ಸಂತಸ ಪಟ್ಟರು. ಇತ್ತೀಚೆಗೆ ಇಂತಹ ಕ್ರೀಡೆಗಳು ಮರೆಯಾಗುತ್ತಿರುವ ಹಿನ್ನಲೆ ಯುವ ಜನತೆಗೆ ಪರಿಚಯಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಗೋಲಿ, ರಿಂಗ್ ಆಟ, ಚಿನ್ನಿ ದಾಂಡು, ಲಗೋರಿ ಸೇರಿದಂತೆ ವಿವಿಧ ಬಾಲ್ಯದ ಕ್ರೀಡೆಗಳನ್ನು ಆಡಿ ನೆರೆದಿದ್ದವರು ಖುಷಿಪಟ್ಟರು.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.