
ಚಾಮರಾಜನಗರ, ಮಾರ್ಚ್ 11: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಬೆಟ್ಟದ ಆನೆ ತಲೆದಿಂಬದ ಬಳಿ ಚಿರತೆ ಸೆರೆ ಹಿಡಿದಿದ್ದು, ರಸ್ತೆಯ ಇಳಿಜಾರಿನ ತಿರುವಿನಲ್ಲಿ ತಡೆಗೋಡೆ ಪಕ್ಕದಲ್ಲಿ ಚಿರತೆ ಕುಳಿತಿರುವ ದೃಶ್ಯ ವಾಹನದಲ್ಲಿ ತೆರಳುತ್ತಿದ್ದವರ ಮೊಬೈಲ್ ಕ್ಯಾಮರಾದಲ್ಲಿ ಕಂಡುಬಂದಿದೆ. ಶಿವರಾತ್ರಿ ಜಾತ್ರೆ ವೇಳೆ ಪಾದಯಾತ್ರಿಕನನ್ನು ಚಿರತೆ ಕೊಂಡು ತಿಂದಿತ್ತು. ಈಗ ಮತ್ತೆ ಅದೇ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.