Headlines

ಮಾರ್ಚ್ 2ರವರೆಗೂ ಎಲ್​ಐಸಿ ಸ್ಪೆಷನ್ ರಿವೈವಲ್ ಕೆಂಪೇನ್; ಲ್ಯಾಪ್ಸ್ ಆದ ಪಾಲಿಸಿಗಳನ್ನು ಸಕ್ರಿಯಗೊಳಿಸಲು ಭರ್ಜರಿ ಆಫರ್

ಮಾರ್ಚ್ 2ರವರೆಗೂ ಎಲ್​ಐಸಿ ಸ್ಪೆಷನ್ ರಿವೈವಲ್ ಕೆಂಪೇನ್; ಲ್ಯಾಪ್ಸ್ ಆದ ಪಾಲಿಸಿಗಳನ್ನು ಸಕ್ರಿಯಗೊಳಿಸಲು ಭರ್ಜರಿ ಆಫರ್


ಜನವರಿ 2: ಲ್ಯಾಪ್ಸ್ ಆಗಿರುವ ಅಥವಾ ಅವಧಿಮೀರಿದ ಇನ್ಷೂರೆನ್ಸ್ ಪಾಲಿಸಿಗಳನ್ನು (ಲ್ಯಾಪ್ಸ್ಡ್ ವಿಮೆ ನೀತಿಗಳು) ಸಕ್ರಿಯಗೊಳಿಸಲು ಎಲ್ಐಸಿ ಆಕರ್ಷಕ ಕೊಡುಗೆಯನ್ನು ಮುಂದಿಟ್ಟಿದೆ. ಅದಕ್ಕಾಗಿ ಎರಡು ತಿಂಗಳ ವಿಶೇಷ ಅಭಿಯಾನ ನಡೆಸುತ್ತಿದೆ. ಜನವರಿ 1 ರಂದು ಪ್ರಾರಂಭವಾದ ಈ ವಿಶೇಷ ರಿವೈವಲ್ ಕೆಂಪೇನ್ (ವಿಶೇಷ ಪುನರುಜ್ಜೀವನ ಅಭಿಯಾನ) 2026 ರ ಮಾರ್ಚ್ 2 ರವರೆಗೂ ಇರಲಿದೆ. ಇನ್ಷೂರೆನ್ಸ್ ಪಾಲಿಸಿಗಳನ್ನು ರಿವೈವಲ್ ಮಾಡಲು ಇರುವ ತಡಪಾವತಿ ಶುಲ್ಕದಲ್ಲಿ (ಲೇಟ್ ಫೀ) 5,000 ರೂವರೆಗೂ ವಿನಾಯಿತಿ ನೀಡಲಾಗುತ್ತಿದೆ.

ಶೇ. 30ರಷ್ಟು ಲೆಟ್ ಫೀ ಡಿಸ್ಕೌಂಟ್

ಲ್ಯಾಪ್ಸ್ ಆದ ಎಲ್ ಐಸಿ ಪಾಲಿಸಿಗಳನ್ನು ರಿವೈವ್ ಮಾಡಬೇಕೆಂದರೆ ಲೇಟ್ ಫೀ ಕಟ್ಟಬೇಕು. ಈ ಶುಲ್ಕದಲ್ಲಿ ಮುಂದಿನ ಎರಡು ತಿಂಗಳ ಶೇ. 30ರಷ್ಟು ಡಿಸ್ಕೌಂಟ್ ಸಿಗಲಿದೆ. ತಡಪಾವತಿ ಶುಲ್ಕ 10,000 ರೂ ಇದ್ದಲ್ಲಿ 3,000 ರೂ ವಿನಾಯಿತಿ ಕೊಡದಿದ್ದರೆ. ಗರಿಷ್ಠ 5,000 ರೂವರೆಗೂ ಈ ರೀತಿ ವಿನಾಯಿತಿ ಇರುತ್ತದೆ.

ಇದನ್ನೂ ಓದಿ: ಎಲ್ ಐಸಿ ಎರಡು ಹೊಸ ಯೋಜನೆಗಳು ಬಿಡುಗಡೆ; ಮಾರುಕಟ್ಟೆ ಲಿಂಕ್ ಆದ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಬಗ್ಗೆ ಮಾಹಿತಿ

ಪಾಲಿಸಿ ಪ್ರೀಮಿಯಂ 1,00,000 ರೂ ಮೊತ್ತವಾದರೆ ಲೇಟ್ ಫೀಯಲ್ಲಿ ಶೇ. 30ರಷ್ಟು ವಿನಾಯಿತಿ ಇರುತ್ತದೆ. ಗರಿಷ್ಠ ವಿನಾಯಿತಿ 3,000 ರೂ ಇರುತ್ತದೆ.

1 ಲಕ್ಷ ರೂನಿಂದ 3 ಲಕ್ಷ ರೂ ಮೊತ್ತದ ಪ್ರೇಮಿಯಮ್ ಆಗಿದ್ದರೆ ತಡಪಾವತಿ ಶುಲ್ಕದಲ್ಲಿ ಶೇ. 30 ಅಥವಾ 4,000 ರೂವರೆಗೆ ವಿನಾಯಿತಿ ಸಿಗುತ್ತದೆ.

3 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಪ್ರೀಮಿಯಂ ಆದರೆ ಶುಲ್ಕದಲ್ಲಿ 5,000 ರೂವರೆಗೆ ಕನ್ಸಿಶನ್ ಇರುತ್ತದೆ.

ಮೈಕ್ರೋ ಇನ್‌ಶೂರೆನ್ಸ್ ಪ್ಲಾನ್ ಆದರೆ ತಡಪಾವತಿ ಶುಲ್ಕದಲ್ಲಿ ನೂರಕ್ಕೆ ನೂರು ವಿನಾಯಿತಿ ಇರುತ್ತದೆ.

ಎಷ್ಟು ವರ್ಷದಿಂದ ಲ್ಯಾಪ್ಸ್ ಆದ ಪಾಲಿಸಿಗಳನ್ನು ರಿವೈವ್ ಮಾಡಲು ಸಾಧ್ಯ?

ಪ್ರಸ್ತುತ ವಿಶೇಷ ಅಭಿಯಾನದಲ್ಲಿ 5 ವರ್ಷದಿಂದ ಲ್ಯಾಪ್ಸ್ ಆದ ಪಾಲಿಸಿಗಳನ್ನು ರಿವೈವ್ ಮಾಡಲು ಅವಕಾಶವಿದೆ. ಪ್ರೀಮಿಯಂ ಪಾವತಿಯನ್ನು ನಿಲ್ಲಿಸಿ 5 ವರ್ಷಗಳವರೆಗೆ ಆಗಿದ್ದರೆ ಅಂತಹ ಪಾಲಿಸಿಯನ್ನು ಈ ಕೆಂಪೇನ್ ವೇಳೆ ರಿವೈವ್ ಮಾಡಲು ಬಳಸಲಾಗುತ್ತದೆ.

ಇದನ್ನೂ ಓದಿ: ಕ್ಲೀಮ್ ಆಗದೇ ಉಳಿದಿದೆ ಲಕ್ಷ ಕೋಟಿ ರೂ; ಜನರಿಗೆ ಹಣ ಮರಳಿಸಲು ಸರ್ಕಾರ ಹರಸಾಹಸ

ಜನರು ಬೇರೆ ಬೇರೆ ಕಾರಣಗಳಿಂದ ಎಲ್ ಐಸಿ ಪಾಲಿಸಿಯ ಪ್ರೀಮಿಯಂ ಕಟ್ಟದೇ ನಿಲ್ಲಿಸಿರಬಹುದು. ಇನ್ಷೂರೆನ್ಸ್ ಎಂಬುದು ಬಹಳ ಅಗತ್ಯವಾಗಿರುವ ಹಣಕಾಸು ರಕ್ಷಣಾ ವ್ಯವಸ್ಥೆಯಾಗಿರುವುದರಿಂದ ಅದು ವ್ಯರ್ಥವಾಗಲು ಬಿಡಬಾರದು. ಹೀಗಾಗಿ, ಇನ್ಶೂರೆನ್ಸ್ ಪಾಲಿಸಿ ಹೊಂದುವುದು ಬಹಳ ಮುಖ್ಯ. ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಅದನ್ನು ತಪ್ಪದೇ ರಿವೈವ್ ಮಾಡುವುದು ಇನ್ನೂ ಮುಖ್ಯ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *