Headlines

ಎಲ್​ಐಸಿ ಎರಡು ಹೊಸ ಪ್ಲಾನ್​ಗಳು ಬಿಡುಗಡೆ; ಮಾರ್ಕೆಟ್ ಲಿಂಕ್ ಆದ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಬಗ್ಗೆ ಮಾಹಿತಿ

ಎಲ್​ಐಸಿ ಎರಡು ಹೊಸ ಪ್ಲಾನ್​ಗಳು ಬಿಡುಗಡೆ; ಮಾರ್ಕೆಟ್ ಲಿಂಕ್ ಆದ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಬಗ್ಗೆ ಮಾಹಿತಿ


ನವೆಂಬರ್, ಡಿಸೆಂಬರ್ 5: ಭಾರತೀಯ ಜೀವ ವಿಮಾನ ನಿಗಮ (LIC) ಎರಡು ಹೊಸ ಇನ್ಷೂರೆನ್ಸ್ ಯೋಜನೆಗಳು (ವಿಮೆ) ಬಿಡುಗಡೆ ಮಾಡಿದೆ. ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ (ಎಲ್ಐಸಿ ಪ್ರೊಟೆಕ್ಷನ್ ಪ್ಲಸ್) ಮತ್ತು ಬಿಮಾ ಕವಚ (ಎಲ್ಐಸಿ ಬಿಮಾ ಕವಚ) ಯೋಜನೆಗಳನ್ನು ಎಲ್ ಐಸಿಯ ಸಿಐಒ ಮತ್ತು ಎಂಡಿ ಆರ್ ದೊರೈಸ್ವಾಮಿ ಅನಾವರಣಗೊಳಿಸಿದ್ದಾರೆ. ಇದರ ಪ್ರೊಟೆಕ್ಷನ್ ಪ್ಲಸ್ ಜೀವ ವಿಮೆ ಜೊತೆಗೆ ಉಳಿತಾಯಕ್ಕೆ ನೆರವಾಗುವ ಯೋಜನೆಯಾಗಿದೆ. ಬಿಮಾ ಕವಚ ಯೋಜನೆ ಪೂರ್ಣವಾಗಿ ರಿಸ್ಕ್ ಪ್ಲಾನ್ ಆಗಿದೆ.

ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಯೋಜನೆ

ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಎಂಬುದು ಲೈಫ್ ಇನ್ಶೂರೆನ್ಸ್ ಕಮ್ ಸೇವಿಂಗ್ಸ್ ಪ್ಲಾನ್ ಆಗಿದೆ. ಮಾರುಕಟ್ಟೆಗೂ ಜೋಡಿತವಾಗಿರುವ ಸ್ಕೀಮ್ ಆಗಿದೆ. ನೀವು ನಿಮ್ಮ ಹಣವನ್ನು ಯಾವ ಫಂಡ್‌ನಲ್ಲಿ ಇರಿಸಬಹುದು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಖಾತ್ರಿ ಹಣವನ್ನು ಹೆಚ್ಚಿಸುವುದು, ಇಳಿಸುವುದು, ಅಥವಾ ಹೆಚ್ಚುವರಿ ಪ್ರೀಮಿಯಂ ಕಟ್ಟುವುದು ಇತ್ಯಾದಿ ಅನೇಕ ಸೌಲಭ್ಯಗಳು ಮತ್ತು ಅವಕಾಶಗಳಿವೆ.

ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್

ಎಲ್ ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ 65 ವರ್ಷ ಇದೆ. ಇಲ್ಲಿ ಪಾಲಿಸಿ ಮೆಚ್ಯುರಿಟಿ ಆಗುವ ಅವಧಿ 10, 15, 20 ಮತ್ತು 25 ವರ್ಷಗಳು ಈ ನಾಲ್ಕು ಆಯ್ಕೆಗಳಿವೆ.

10 ವರ್ಷದ ಪಾಲಿಸಿದರೆ ನೀವು 5 ವರ್ಷ ಪ್ರೀಮಿಯಂ ಕಟ್ಟಬೇಕು. 15 ವರ್ಷದ ಟರ್ಮ್ ಆಗಿದ್ದರೆ ಪ್ರೀತಿಯಿಂದ ಪಡೆಯುವುದು 7 ವರ್ಷ ಮಾತ್ರ. 20 ವರ್ಷವಾದರೆ 10 ವರ್ಷ ಪ್ರೀಮಿಯಂ; 25 ವರ್ಷವಾದರೆ 15 ವರ್ಷ ಪ್ರೀಮಿಯಂ ಕಟ್ಟುವ ಆಯ್ಕೆ ಇರುತ್ತದೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್‌ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್‌ನಲ್ಲಿ ಕನಿಷ್ಠ ಮೂಲ ಖಾತ್ರಿ ಹಣವು ಪ್ರೀಮಿಯಂ ಪಾವತಿ ಅವಧಿ ಮತ್ತು ವಯಸ್ಸಿನ ಮೇಲೆ ಇರುತ್ತದೆ. 50 ವರ್ಷದ ವಯಸ್ಸಿನಲ್ಲಿ ಪಾಲಿಸಿ ಪಡೆದ ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ. ಅಂದರೆ, ಕನಿಷ್ಠ ಖಾತ್ರಿ ಹಣ. 50 ವರ್ಷ ಮೇಲ್ಪಟ್ಟ ವಯಸ್ಸಿನಲ್ಲಿ ಪಾಲಿಸಿ ಪಡೆದರೆ ವಾರ್ಷಿಕ ಪ್ರೀಮಿಯಂನ ಐದು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ.

ಮ್ಯೂಚುವಲ್ ಫಂಡ್‌ನಲ್ಲಿ ಸ್ಟೆಪ್ಯಾಪ್‌ನಂತೆ ಪಾಲಿಸಿ ಅವಧಿಯಲ್ಲಿ ಪ್ರೀಮಿಯಂ ಹೆಚ್ಚಿಸಬಹುದು. ಇದರಿಂದ ಹೆಚ್ಚಿನ ರಿಟರ್ನ್ ಪಡೆಯುವ ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *