₹5 plant fertilizer hack: ಗಾರ್ಡನಿಂಗ್ ಮಾಡುವ ಪ್ರತಿಯೊಬ್ಬರಿಗೂ ಗಿಡಗಳಲ್ಲಿ ಹಣ್ಣು-ಹೂವುಗಳು ರಾಶಿ ರಾಶಿಯಾಗಿ ಬಿಡಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಪೋಷಕಾಂಶಗಳ ಕೊರತೆಯಿಂದ ಹೂವು ಬಿಡದೆ ಬಾಡಬಹುದು. ಇನ್ಮೇಲೆ ದುಬಾರಿ ಗೊಬ್ಬರ ಬಳಸುವ ಮೊದಲು ಕೇವಲ 5 ರೂ.ನ ಈ ಮ್ಯಾಜಿಕ್ ವಸ್ತು ಬಳಸಿ ನೋಡಿ…

ಅನೇಕ ಜನರು ತಮ್ಮ ಗಿಡಗಳಲ್ಲಿ ಹೂವು ಅಥವಾ ಹಣ್ಣುಗಳು ಬಿಡದಿದ್ದಾಗ ದುಬಾರಿ ಗೊಬ್ಬರ ಅಥವಾ ಔಷಧಿ ಬಳಸುತ್ತಾರೆ. ಆದರೆ ಅಂತಹ ಸಂದರ್ಭದಲ್ಲಿ ಕೇವಲ 5 ರೂಪಾಯಿಯ ಈ ಒಂದು ಪುಟ್ಟ ವಸ್ತು ನಿಮ್ಮ ಗಿಡದ ಲಕ್ ಬದಲಾಯಿಸಬಹುದು. ಅದು ಟೊಮೆಟೊ, ಮೆಣಸಿನಕಾಯಿ ಅಥವಾ ಗುಲಾಬಿ ಗಿಡವೇ ಆಗಿರಲಿ, ಈ ವಸ್ತುವನ್ನು ಹಾಕುವುದರಿಂದ ಗಿಡದಲ್ಲಿ ಭರಪೂರ ಇಳುವರಿ ಪಡೆಯಬಹುದು.

ಈಗ ನಾವು ಹೇಳುತ್ತಿರುವ ಆ ವಸ್ತು’ಸುಣ್ಣ’. ಕೇವಲ 5 ರೂಪಾಯಿಗೆ ಸಿಗುವ ಈ ಸುಣ್ಣವು ಗಿಡಗಳಿಗೆ ಕೇವಲ ಗೊಬ್ಬರವಷ್ಟೇ ಅಲ್ಲ, ಒಂದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ ಗಿಡಗಳು ಬಾಡುತ್ತವೆ. ಸುಣ್ಣವು ಗಿಡಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ನೀಡುತ್ತದೆ.

ಬಿಳಿ ಸುಣ್ಣವು ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಮಣ್ಣಿಗೆ ಸುಣ್ಣ ಸೇರಿಸುವುದರಿಂದ ಶಿಲೀಂಧ್ರ ಮತ್ತು ಸಣ್ಣಪುಟ್ಟ ಕೀಟಗಳು ಸಾಯುತ್ತವೆ. ಮುಖ್ಯವಾಗಿ ಟೊಮೆಟೊ ಮತ್ತು ಮೆಣಸಿನಕಾಯಿ ಗಿಡದ ಕಾಯಿಗಳು ಕೆಳಗಿನಿಂದ ಕೊಳೆಯುವುದನ್ನು ಇದು ತಡೆಯುತ್ತದೆ.

ತರಕಾರಿಗಳ ಪೈಕಿ ಟೊಮೆಟೊ, ಮೆಣಸು, ಬದನೆ ಮತ್ತು ನಿಂಬೆ ಗಿಡಗಳಿಗೆ ಇದು ಬಹಳ ಉಪಯುಕ್ತ. ಹೂವಿನ ಗಿಡಗಳಾದ ಗುಲಾಬಿ, ದಾಸವಾಳ ಮತ್ತು ಮಲ್ಲಿಗೆ ಗಿಡಗಳಿಗೆ ಹಾಕಿದರೆ ಹೂವುಗಳು ದೊಡ್ಡದಾಗಿ ಮತ್ತು ಹೊಳೆಯುವಂತೆ ಅರಳುತ್ತವೆ.

ಸುಮಾರು 4 ಲೀಟರ್ ನೀರಿಗೆ ಒಂದು ಚಮಚ ಸುಣ್ಣ ಹಾಕಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಗಿಡದ ಬೇರುಗಳ ಭಾಗಕ್ಕೆ ಹಾಕಿ. ತಿಂಗಳಿಗೆ ಒಮ್ಮೆ ಅಥವಾ ಅಗತ್ಯವಿದ್ದಾಗ ಮಾತ್ರ ಇದನ್ನು ಬಳಸಿ.

ಹಸಿ ಸುಣ್ಣವನ್ನು ನೇರವಾಗಿ ಗಿಡಕ್ಕೆ ಹಾಕಬೇಡಿ. ಅದು ಬೇರುಗಳನ್ನು ಸುಡಬಹುದು. ಅತಿಯಾದ ಪ್ರಮಾಣದಲ್ಲಿ ಬಳಸಬೇಡಿ. ವರ್ಷದಲ್ಲಿ 2-3 ಬಾರಿ ಈ ರೀತಿ ಮಾಡುವುದರಿಂದ ಗಿಡದ ಆರೋಗ್ಯ ಚೆನ್ನಾಗಿರುತ್ತದೆ.

Source link
5 ರೂ.ಗೆ ಸಿಗುವ ಈ ವಸ್ತುವನ್ನ ಯಾವುದೇ ಗಿಡಕ್ಕೆ ಹಾಕಿದ್ರೂ ರಾಶಿ ರಾಶಿ ಹೂವು, ಹಣ್ಣು ಬಿಡುತ್ತವೆ