ಬೆಂಗಳೂರು, (ನವೆಂಬರ್ 26): ಕರ್ನಾಟಕದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಅದರಲ್ಲೂ ಬಿಯರ್ ಮಾರಾಟವಂತೂ ಪಾತಾಳಕ್ಕೆ ಕುಸಿದಿದೆ. 2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ವಿಸ್ಕಿ, ಬ್ರಾಂದಿ, ರಾಮ್, ಜಿನ್ ಸೇರಿ 407.40 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ಗೆ 8.64 ಲೀಟರ್) ಐಎಂಎಲ್ ಮದ್ಯ ಮಾರಾಟವಾಗಿ, ಪ್ರಸಕ್ತ ಸಾಲಿನಲ್ಲಿ 403.04 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿ 4.36 ಲಕ್ಷ ಬಾಕ್ಸ್ ಕೊರತೆ ಕಂಡುಬಂದಿದೆ. ಪ್ರಾಥಮಿಕ ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲವಾದ ಅಬಕಾರಿ ಇಲಾಖೆಯಿಂದ ನಿರೀಕ್ಷೆಯಂತೆ ಆದಾಯ ಸಂಗ್ರಹ ಆಗುತ್ತಿಲ್ಲ. ಹೀಗಾಗಿ ಸರ್ಕಾರವೇ ಕಂಗಾಲಾಗಿದೆ.
ಕಳೆದ 7 ತಿಂಗಳ ಅಂಕಿಅಂಶಗಳಂತೆ ಬಿಯರ್ ಹಾಗೂ IML ಮಾರಾಟ ಫುಲ್ ಡಲ್ ಆಗಿದೆ. 2024ರಲ್ಲಿ 279 ಲಕ್ಷ ಬಾಕ್ಸ್ ಬಿಯರ್ ಮಾರಾಟ, 2025ರಲ್ಲಿ ಕೇವಲ 228 ಲಕ್ಷ ಬಾಕ್ಸ್‌ಗಳಷ್ಟೇ ಮಾರಾಟವಾಗಿದೆ. ಅಂದರೆ ಬರೋಬ್ಬರಿ 51 ಲಕ್ಷ ಬಾಕ್ಸ್‌ಗಳಷ್ಟು ಬಿಯರ್ ಮಾರಾಟ ಕುಸಿತವಾಗಿದೆ. ಇದೇ ರೀತಿ ವಿಸ್ಕಿ, ಬ್ರಾಂದಿ, ರಾಮ್, ಜಿನ್ ಸೇರಿದಂತೆ ಎಲ್ಲಾ ಇಂಡಿಯನ್ ಮೇಡ್ ಲಿಕ್ಕರ್ ಮಾರಾಟದಲ್ಲೂ ಇಳಿಕೆ ಕಂಡುಬಂದಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ: ಕಾರಣ ಏನು ಗೊತ್ತೇ?
2024ರ ನವೆಂಬರ್ ಅವಧಿಯವರೆಗೆ 407 ಲಕ್ಷ ಬಾಕ್ಸ್ ಐಎಮ್ ಎಲ್ ಮಾರಾಟ ಆಗಿದ್ರೆ ಈ ವರ್ಷ 403 ಲಕ್ಷ ಬಾಕ್ಸ್ ಗಳಿಗೆ ಇಳಿದಿದೆ. ಅಂದರೆ 4.36 ಲಕ್ಷ ಬಾಕ್ಸ್‌ಗಳ ಮಾರಾಟ ಕುಸಿದಿದೆ. ಎಣ್ಣೆ ಮಾರಾಟ ಕುಸಿತದಿಂದ ಅಬಕಾರಿ ಇಲಾಖೆ ತಲೆ ಕೆಡಿಸಿಕೊಂಡಿದೆ. ಸರ್ಕಾರ ಅವವಾಗ ಮದ್ಯದ ಬೆಲೆ ಏರಿಸುವುದರಿಂದ ಮದ್ಯಪ್ರಿಯರು ಪರ್ಯಾಯ ಮಾರ್ಗ ಹುಡುಕಿಕೊಂಡ್ರಾ ಅನ್ನೋ ಪ್ರಶ್ನೆಯೂ ಎದುರಾಗಿದೆ. ಗಾಂಜಾ-ಅಫೀಮು ಹಾವಳಿಯಿಂದ ಮದ್ಯ ಮಾರಾಟ ಕುಸಿದಿದೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೂರ್ನಾಲ್ಕು ಬಾರಿ ಮದ್ಯದ ದರ ಏರಿಕೆಯಾಗಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಗಾಗಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡುವ ಸಲುವಾಗಿ ಬೆಲೆ ಏರಿಕೆಯಾಗಿತ್ತು. ಇದರಿಂದ 2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು 35,530 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಅದರ ಹಿಂದಿನ ಸಾಲಿನಲ್ಲಿ 34,629 ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು 2025-26ನೇ ಸಾಲಿನಲ್ಲಿ 40,000 ಕೋಟಿ ರೂಪಾಯಿ ಆದಾಯದ ಗುರಿಯನ್ನು ಅಬಕಾರಿ ಇಲಾಖೆ ನೀಡಿದೆ. ಆದರೆ, ಕಳೆದ ಏಳು ತಿಂಗಳಿನಿಂದ ಮದ್ಯ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಈ ವರ್ಷದ ಗುರಿ ತಲುಪುವುದು ಕಷ್ಟ.
ವರ್ಷದಿಂದ ವರ್ಷಕ್ಕೆ ಐಎಂಎಲ್ ಮದ್ಯ ಮಾರಾಟ ಕುಸಿತ
3 ವರ್ಷದ ಅಂಕಿ ಅಂಶ, ವರ್ಷದಿಂದ ವರ್ಷಕ್ಕೆ ಐಎಂಎಲ್ ಮದ್ಯ ಮಾರಾಟ ಕಡಿಮೆ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕಾಂಗ್ರೆಸ್ ಸರ್ಕಾರಕ್ಕೆ ಬಂದ ಮೇಲೆ ಮೂರ್ನಾಲ್ಕು ಬಾರಿ ಮದ್ಯದ ಮೇಲೆ ದರ ಏರಿಕೆ ಮಾಡಿರುವುದು ಮದ್ಯ ಮಾರಾಟಗಾರರು.
ಈ ವರ್ಷ 51 ಲಕ್ಷ ಬಾಕ್ಸ್ ಬಿಯರ್ ಮಾರಾಟ ಕಡಿಮೆಯಾಗಿದೆ. 2024ರಲ್ಲಿ 278.79 ಲಕ್ಷ ಬಾಕ್ಸ್ (ಒಂದು ಬಾಕ್ಸ್‌ನಲ್ಲಿ 7.80 ಲೀಟರ್) ಬಿಯರ್ ಮಾರಾಟವಾಗಿತ್ತು. 2025ರಲ್ಲಿ ಇದು 227.62 ಲಕ್ಷ ಬಾಕ್ಸ್‌ಗೆ ಕುಸಿದಿದೆ. ಅಂದರೆ ಬರೋಬ್ಬರಿ 51.17 ಲಕ್ಷ ಬಾಕ್ಸ್ ಬಿಯರ್ ಮಾರಾಟ ಕಡಿಮೆಯಾಗಿದೆ.
2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೂ ವಿಸ್ಕಿ, ಬ್ರಾಂದಿ, ರಾಮ್, ಜಿನ್ ಸೇರಿ 407.40 ಲಕ್ಷ ಬಾಕ್ಸ್ (ಒಂದು ಬಾಕ್‌ಗೆ 8.64 ಲೀಟರ್) ಐಎಂ ಮದ್ಯ ಮಾರಾಟವಾಗಿದೆ, ಈ ವರ್ಷ 403.04 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದೆ. ಇದರೊಂದಿಗೆ 4.36 ಲಕ್ಷ ಬಾಕ್ಸ್ ವ್ಯಾಪಾರ ಕಡಿಮೆಯಾಗಿದೆ. 2023ರಲ್ಲಿ ಈ ಪ್ರಮಾಣ 410.78 ಲಕ್ಷ ಬಾಕ್ಸ್ ಮಾರಾಟವಾಗಿತ್ತು.
ಒಟ್ಟಿನಲ್ಲಿ ಈ ಹಿಂದೆ ಹೋಲಿಕೆ ಮಾಡಿದ್ರೆ ಈ ವರ್ಷ 30%ರಷ್ಟು ಮದ್ಯ ಮಾರಾಟ ಕುಸಿತವಾಗಿದೆ.