Video: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

Video: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ


ಮಕ್ಕಳು ಬಿಡಿ, ದೊಡ್ಡವರು ಕೂಡ ಎಷ್ಟೋ ಬಾರಿ ಈ ಲಿಫ್ಟ್‌ನಲ್ಲಿ ಸಿಲುಕಿ ಪರದಾಡುವ ಘಟನೆಗಳ ವಿಡಿಯೋ ವೈರಲ್ ಆಗುತ್ತಿರುತ್ತವೆ. ಆದರೆ ಈ ದೃಶ್ಯದಲ್ಲಿ ಪುಟಾಣಿಗಳಿಬ್ಬರು (ಚಿಕ್ಕ ಮಕ್ಕಳು) ಲಿಫ್ಟ್‌ನಲ್ಲಿ ಸಿಲುಕಿದ್ದಾರೆ. ಆದರೆ ಇದೆ ವೇಳೆ ಪುಟ್ಟ ಬಾಲಕಿಯೊಬ್ಬಳು (ಪುಟ್ಟ ಹುಡುಗಿ) ಸಮಯ ಪುಸ್ತಕ ಮೆರೆದು ಕಂದಮ್ಮಗಳನ್ನು ರಕ್ಷಿಸಿ ಅಪಾಯದಿಂದ ಪಾರು ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು ಈ ಪುಟ್ಟ ಬಾಲಕಿಯ ಕೆಲಸಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ತತ್ವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊದಲ್ಲಿ ಇಬ್ಬರು ಪುಟ್ಟ ಮಕ್ಕಳು ಒಳಗಿರುವಾಗಲೇ ಇದ್ದಕ್ಕಿದ್ದಂತೆ ಲಿಫ್ಟ್ ಸ್ಥಗಿತಗೊಂಡು ಬಾಗಿಲು ಮುಚ್ಚಿದೆ. ಇದೇ ವೇಳೆ ಪುಟ್ಟ ಬಾಲಕಿ ಲಿಫ್ಟ್‌ನ ನಡುವೆ ಕೈ ಹಾಗೂ ಕಾಲನ್ನು ತೂರಿ ಲಿಫ್ಟ್ ಓಪನ್ ಮಾಡಿದ್ದಾಳೆ. ಅಲ್ಲೇ ಇದ್ದ ಮಹಿಳೆಯರು ಈ ಪುಟಾಣಿ ಮಕ್ಕಳನ್ನು ರಕ್ಷಿಸುವಲ್ಲಿ ಸಹಾಯ ಮಾಡಿರುವುದನ್ನು ಕಾಣಬಹುದು. ಮಹಿಳೆಯರಿಬ್ಬರ ಸಹಾಯ ಪಡೆದು ಬಾಲಕಿ ಸೇರಿ ಲಿಫ್ಟ್ ನಿಂದ ಪುಟ್ಟ ಮಕ್ಕಳನ್ನು ರಕ್ಷಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನವವಿವಾಹಿತ ಜೋಡಿಯನ್ನು ಕಂಡೊಡನೆ ಶುಭಾಶಯ ಕೋರಿದ ಶಾಲಾ ಬಸ್ಸಿನಲ್ಲಿದ್ದ ಪುಟಾಣಿಗಳು

ಈ ವಿಡಿಯೋವನ್ನು ಹೆಚ್ಚಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ಪುಟ್ಟ ಮಕ್ಕಳನ್ನು ಹತ್ರ ಬಿಡ್ಬೇಡಿ ಎಂದು ಹೇಳಿದ್ದಾರೆ. ಇತರರು, ದೇವರ ರೂಪದಲ್ಲಿ ಬಂದು ಪುಟಾಣಿ ರಕ್ಷಿಸಿದ ಬಾಲಕಿ, ಮೈ ಜುಮ್ ಎನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಧೈರ್ಯ ಎಲ್ಲರಿಗೂ ಕಾಣ ಸಿಗಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 7:48 pm, ಭಾನುವಾರ, 22 ಫೆಬ್ರವರಿ 26





Source link

Leave a Reply

Your email address will not be published. Required fields are marked *