Headlines

Video: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್

Video: ಸ್ಟೇಜ್ ಮೇಲೆ ಹೊಗೆ ಕಂಡು ಭಯದಲ್ಲೇ ಅಳುತ್ತಾ ಓಡಿಹೋದ ಪುಟಾಣಿ ಡ್ಯಾನ್ಸರ್ಸ್


ಪುಟಾಣಿಗಳು (ಮಕ್ಕಳು) ಏನು ಮಾಡಿದ್ರು ಅದಕ್ಕೂ ನೋಡೋಕೆ ಚಂದ. ಈ ಮಕ್ಕಳ ಆಟ ತುಂಟಾಟಗಳನ್ನು ಹೆತ್ತವರು ಕಣ್ತುಂಬಿಸಿಕೊಳ್ತಾರೆ. ಇಬ್ಬರೂ ಮುದ್ದಾದ ಪುಟಾಣಿಗಳು ನೃತ್ಯ (ನೃತ್ಯ) ಮಾಡಲು ವೇದಿಕೆ ಹತ್ತಿದ್ದಾರೆ. ಹಾಡು ಪ್ಲೇ ಆಗುತ್ತಿದ್ದಂತೆ ಪುಟಾಣಿಯೊಂದು ಅಳಲು ಶುರು ಮಾಡಿದೆ. ಈ ಪುಟ್ಟ ಹುಡುಗಿಯ ಅಳಲು ಶುರು ಮಾಡಿದ್ದು, ವೇದಿಕೆಯಲ್ಲಿನ ಹೊಗೆ ನೋಡಿ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಲಾಕಾರ್ಸ್ (ಕಲಾಕಾರರು) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ನರ್ಸರಿಯ ವಾರ್ಷಿಕೋತ್ಸವವಾಗಿದ್ದು, ಇಬ್ಬರೂ ಪುಟಾಣಿ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಡ್ಯಾನ್ಸ್ ಮಾಡಲು ವೇದಿಕೆ ಹತ್ತಿದ್ದಾರೆ. ಮಕ್ಕಳು ರೆಡಿಯಾಗಿರುವುದರಿಂದ ಹಿಂದಿನಿಂದ ಟುಸ್ ಹೋಗಿದೆ. ಈ ಸ್ಟೇಜ್ ಮೇಲಿದ್ದ ಒಂದು ಪುಟಾಣಿ ಹೆದರಿ ಓಡಿ ಹೋಗಿದೆ. ಇತ್ತ ಇನ್ನೊಂದು ಪುಟಾಣಿ ಜೋರಾಗಿ ಅಳಲು ಪ್ರಾರಂಭಿಸಿದ್ದು, ಅಲ್ಲೇ ಇದ್ದ ಹೆತ್ತವರು ಬಂದು ಪುಟ್ಟ ಹುಡುಗಿಯನ್ನು ಸಮಾಧಾನ ಪಡಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಮಗಳ ಡ್ಯಾನ್ಸ್ ಸೆರೆನ್ನು ಕೀಪ್ಯಾಡ್ ಮೊಬೈಲ್‌ನಲ್ಲಿ ಹಿಡಿದ ತಂದೆ, ವೈರಲ್ ಆಯ್ತು ದೃಶ್ಯ

ಈ ವಿಡಿಯೋ ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ ನನ್ನ ಮಗಳು ಚಿಕ್ಕವಳಿದ್ದಾಗ ಹೀಗೆ ಮಾಡುತ್ತಿದ್ದಳು. ಮತ್ತೊಬ್ಬರು, ಅಯ್ಯೋ ಎಷ್ಟು ಮುಗ್ಧತೆ ನೋಡಿ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಮಕ್ಕಳಿಗೆ ಪ್ರಾಕ್ಟೀಸ್ ಮಾಡುವಾಗ ಈ ರೀತಿ ಹೋಗಿ ಬಿಡಿ, ಇಲ್ಲದಿದ್ದರೆ ಹೀಗೆ ಆಗುತ್ತೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:55 pm, ಬುಧವಾರ, 4 ಫೆಬ್ರವರಿ 26



Source link

Leave a Reply

Your email address will not be published. Required fields are marked *