
ಭಾರತೀಯ ಸನಾತನ ಧರ್ಮ ಮತ್ತು ಶಾಸ್ತ್ರಗಳ ಪ್ರಕಾರ, ಪ್ರತಿಯೊಂದು ಜೀವಿಗೂ ತನ್ನದೇ ಆದ ವಿಶೇಷ ಮಹತ್ವವಿದೆ. ಅದರಲ್ಲಿಯೂ ಮನೆಯ ಗೋಡೆಗಳ ಮೇಲೆ ಚಲಿಸುವ ಹಲ್ಲಿಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸಂಕೇತವೆಂದೆನಿಸಿದೆ. ಕೇವಲ ಕೀಟಗಳನ್ನು ತಿಂದು ಮನೆಯನ್ನು ತಿನ್ನುವ ಜೀವಿಯಷ್ಟೇ ಅಲ್ಲದೆ, ನಮ್ಮ ಭವಿಷ್ಯದ ಏಳುಬೀಳುಗಳ ಬಗ್ಗೆ ಮುನ್ಸೂಚನೆ ನೀಡುವ ಸಂಕೇತವೂ ಹೌದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಲ್ಲಿಯು ಮೈಮೇಲೆ ಬೀಳುವ ಜಾಗ ಮತ್ತು ಅದು ಕಾಣಿಸಿಕೊಳ್ಳುವ ಸಮಯದ ಮೇಲೆ ಶುಭ-ಅಶುಭ ಫಲಗಳು ನಿರ್ಧಾರವಾಗುತ್ತವೆ.
ವಿಶೇಷವಾಗಿ ನಿಮ್ಮ ಮನೆಯ ಪೂಜಾ ಮಂಟಪದಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ಅತ್ಯಂತ ಮಂಗಳಕರ ಸಂಗತಿ. ಇದು ಲಕ್ಷ್ಮೀಯ ಕಟಾಕ್ಷ ನಿಮ್ಮ ಮೇಲಿದೆ ಎಂದು ಸೂಚಿಸುವುದಲ್ಲದೆ, ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ ಮತ್ತು ಆರ್ಥಿಕ ಸಂಕಷ್ಟಗಳು ದೂರವಾಗಲಿವೆ ಎಂಬ ಪರೋಕ್ಷ ಸಂದೇಶವನ್ನು ನೀಡಲಾಗುತ್ತದೆ. ಆದರೆ, ಮನೆಯಲ್ಲಿ ಎರಡು ಹಲ್ಲಿಗಳು ಜಗಳವಾಡುವುದನ್ನು ನೋಡುವುದು ಅಷ್ಟು ಒಳ್ಳೆಯದಲ್ಲ. ಇದು ಕುಟುಂಬದ ಸದಸ್ಯರ ನಡುವೆ ಮನಸ್ತಾಪ ಅಥವಾ ಕಲಹ ಉಂಟಾಗುವ ಸಾಧ್ಯತೆಯಿದೆ ಎಂದು ಶಕುನ ಶಾಸ್ತ್ರ ಹೇಳುತ್ತದೆ.
ಇನ್ನು ಹಲ್ಲಿಯು ಮೈಮೇಲೆ ಬೀಳುವ ವಿಚಾರಕ್ಕೆ ಬಂದರೆ, ಕಾಲುಗಳ ಮೇಲೆ ಬೀಳುವ ಹಳ್ಳಿಯು ವಿಶೇಷ ಅರ್ಥವನ್ನು ಪಡೆದುಕೊಳ್ಳುತ್ತದೆ. ಒಂದು ವೇಳೆ ಹಲ್ಲಿ ನಿಮ್ಮ ಬಲ ಪಾದದ ಮೇಲೆ ಬಿದ್ದರೆ, ಶೀಘ್ರದಲ್ಲೇ ನಿಮಗೆ ದೀರ್ಘ ಪ್ರಯಾಣ ಅಥವಾ ಪ್ರವಾಸದ ಯೋಗವಿದೆ ಹಾಗೂ ಪ್ರಯಾಣದಿಂದ ಧನಲಾಭ ಎಂದರ್ಥ. ಅದೇ ಹಲ್ಲಿ ಎಡಗಾಲಿನ ಮೇಲೆ ಬಿದ್ದರೆ, ಮುಂದೆ ಬರಲಿರುವ ಯಾವುದೋ ಸಂಕಷ್ಟ ಅಥವಾ ಅನಾರೋಗ್ಯದ ಬಗ್ಗೆ ಅದು ನಿಮ್ಮನ್ನು ಎಚ್ಚರಿಸುತ್ತಿದೆ ಎಂದರ್ಥ. ಒಂದು ವೇಳೆ ಹೊಸ ಮನೆಗೆ ಪ್ರವೇಶಿಸುವಾಗ ಸತ್ತ ಹಲ್ಲಿ ಕಂಡುಬಂದರೆ, ಮನೆಯ ವಾಸ್ತು ದೋಷ ಅಥವಾ ಮುಖ್ಯಸ್ಥರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಶಾಸ್ತ್ರಗಳು ಸೂಚಿಸುತ್ತವೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಬೇಕು ಯಾಕೆ ಗೊತ್ತಾ?
ಕೇವಲ ವಾಸ್ತವದಲ್ಲಿ ಕಂಡರೆ, ಕನಸಿನಲ್ಲಿ ಹಲ್ಲಿ ನಿಮ್ಮನ್ನು ಹೆದರಿಸುವ ಹಾಗೆ ಅಥವಾ ದಾಳಿ ಮಾಡುವಂತೆ ಕಂಡರೆ, ಅದು ಆರ್ಥಿಕ ಮುಗ್ಗಟ್ಟು ಅಥವಾ ಮಾನಸಿಕ ನೆಮ್ಮದಿಗೆ ಭಂಗ ತರುವ ಸೂಚನೆ. ಹಲ್ಲಿಯ ಈ ನಕಾರಾತ್ಮಕ ಪರಿಣಾಮಗಳನ್ನು ಹೋಗಲಾಡಿಸಲು ನಮ್ಮ ಹಿರಿಯರು ಒಂದು ಸರಳ ಪರಿಹಾರವನ್ನು ಸೂಚಿಸಿದ್ದಾರೆ. ಹಲ್ಲಿ ಮೈಮೇಲೆ ಬಿದ್ದ ತಕ್ಷಣ ಅಭ್ಯಂಗ ಸ್ನಾನ ಮಾಡಿ, ಇಷ್ಟ ದೇವರನ್ನು ಪ್ರಾರ್ಥಿಸುವುದರಿಂದ ಮನಸ್ಸಿನ ಭಯ ದೂರವಾಗಿ, ದೋಷದ ತೀವ್ರತೆ ಎಂಬ ನಂಬಿಕೆಯಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ