ದೇಗುಲದ ಹುಂಡಿಯಲ್ಲಿ ಚಿತ್ರ ವಿಚಿತ್ರ ಪತ್ರಗಳು ಪತ್ತೆ.
ಚಿಕ್ಕಬಳ್ಳಾಪುರ, ಡಿಸೆಂಬರ್ 02: ನಂದಿ ಹಿಲ್ಸ್… ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರೋ ಈ ಪ್ರದೇಶ ಪ್ರೇಮಿಗಳ ಫೆವರೇಟ್ ಜಾಗ. ವೀಕೆಂಡ್ ಬಂತಂದ್ರೆ ಸಾಕು ಎಲ್ಲಿ ನೋಡಿದ್ರೂ ಬರಿ ಕಪಲ್ಸ್ ಕಾಣುವ ಈ ಜಾಗದ ಸಮೀಪವೇ ಪುರಾಣ ಪ್ರಸಿದ್ದ ಶಿವನ ದೇವಸ್ಥಾನ ಇದೆ. ಹೀಗಾಗಿ ನಂದಿ ಹಿಲ್ಸ್‌ಗೆ ಹೋಗುವವರೆಗೂ ಇಲ್ಲಿಗೆ ಭೇಟಿ ನೀಡ್ತಾರೆ. ಇದೇ ದೇವಾಲಯದ ಹುಂಡಿಯಲ್ಲೀಗ ಪ್ರೇಮಿಗಳ ಪೋಟೋ, ಲವ್ ಲೆಟರ್ ಸೇರಿದಂತೆ ಚಿತ್ರ ವಿಚಿತ್ರ ನಿವೇದನೆಗಳ ಪತ್ರಗಳು ಇವೆ.
ಪ್ರೇಮ ವಿವಾಹಕ್ಕೆ ಖ್ಯಾತಿ ಪಡೆದಿರೋ ನಂದಿ ಗಿರಿಧಾಮದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯಕ್ಕೆ ಆಡಳಿತ ಮಂಡಳಿ ಮುಂದಾಗಿದೆ. ಸುಮಾರು 15 ಲಕ್ಷ ರೂಪಾಯಿ ಕಾಣಿಕೆಯ ಜೊತೆಗೆ ಪ್ರೇಮ ನಿವೇದನೆ ಸೇರಿ ದೇವರಿಗೆ ಸಲ್ಲಿಸಿರುವ ಹಲವು ಬೇಡಿಕೆಯ ಪತ್ರಗಳು ಕಂಡುಬಂದಿವೆ. ಮಹಿಳೆಯೋರ್ವರ ಫೋಟೋ ಹಿಂದೆ ಪದ್ಮಾ ಮತ್ತೆ ತಿರುಗಿ ಬಾ ಎನ್ನುವ ಪ್ರೇಮ ನಿವೇದನೆಯ ಬರಹ ಇದೆ. ಚೀಟಿಯಲ್ಲಿ, ನಾನು ಪ್ರೀತಿಸುತ್ತಿರುವ ಹುಡುಗಿಯ ತಂದೆ-ತಾಯಿ ನಮ್ಮ ಸಂಪೂರ್ಣ ಮುಕ್ತ ಮನಸ್ಸಿನಿಂದ ಒಪ್ಪುವಂತೆ ಮತ್ತೊಂದು ಮಾಡು ಭಗವಂತ. ನಾನು ಅವಳನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ, ಯಾವುದೇ ತೊಂದರೆ ಆಗದೇ ಒಪ್ಪುವಂತೆ ಮಾಡು ಎಂದು ಬರೆಯಲಾಗಿದೆ. ಮತ್ತೊಂದಿಷ್ಟು ಚೀಟಿಯಲ್ಲಿ ನನ್ನ ಗಂಡನಿಗೆ ಒಳ್ಳೆಯ ಕೆಲಸ ಸಿಗಲಿ, ನನ್ನ ಮಗ ಚೆನ್ನಾಗಿ ಓದಲಿ ಎಂದು ಬರೆದಿರೋದು ಕಂಡುಬಂದಿದೆ.
ಇದನ್ನೂ ಓದಿ: ಪ್ರೀತಿಸುತ್ತಿರುವ ಹುಡುಗಿಯ ತಂದೆ ತಾಯಿಗೆ ಒಳ್ಳಿ ಬುದ್ದಿ ಕೊಡಿ, ದೇವಸ್ಥಾನ ಹುಂಡಿಯಲ್ಲಿ ವಿಚಿತ್ರ ಪತ್ರಗಳ ಪತ್ತೆ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ದೇಗುಲದ ಕಾರ್ಯನಿರ್ವಹಣಾ ಅಧಿಕಾರಿ ರುಕ್ಮಿಣಿ, ಹರಕೆ ಕಾಣಿಕೆಯ ಜೊತೆ ಕೆಲವು ಭಕ್ತರು ತಮ್ಮ ಬೇಡಿಕೆಗಳನ್ನು ಬರಹದ ಮುಖೇನ ಸಲ್ಲಿಸಿದ್ದು ಕಂಡುಬಂದಿದೆ. ಕೆಲವು ಭಕ್ತರು ಬರೆದಿರುವ ಬರಹಗಳು ನಮಗೆ ನಗಣ್ಯ ಅನಿಸಬಹುದು. ಆದರೆ ಅದು ಅವರ ಪಾಲಿಗೆ ದೊಡ್ಡದಿರಬಹುದು. ಹುಂಡಿಯಲ್ಲಿ ಸಿಕ್ಕ ಎಲ್ಲ ಚೀಟಿಗಳನ್ನು ನಾವು ನೋಡಿಲ್ಲ. ಅವರನ್ನು ಎತ್ತಿಟ್ಟಿದ್ದೇವೆ. ಸಣ್ಣ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯ ಹುಂಡಿಯಲ್ಲಿ ಇನ್ನೂ ಹಲವು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.