
‘ಲವ್ ಮಾಕ್ಟೇಲ್ 3’ ಸಿನಿಮಾ (ಲವ್ ಮಾಕ್ಟೇಲ್ 3) ‘ಧುರಂಧರ 2’ ಅಬ್ಬರದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೊದಲು ಏಪ್ರಿಲ್ನಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿದೆ. ಆದರೆ, ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡ ನಂತರ ಆ ದಿನಾಂಕಕ್ಕೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ತರೋದಾಗಿ ಘೋಷಿಸಿದರು. ಮಾರ್ಚ್ 19 ರಂದು ‘ಲವ್ ಮಾಕ್ಟೇಲ್ 3’ ಸಿನಿಮಾ ತೆರೆಗೆ ಬಂದಿದೆ. ಡಾರ್ಲಿಂಗ್ ಕೃಷ್ಣ ನಟನೆಯ ಈ ಸಿನಿಮಾ ಗಮನ ಸೆಳೆದಿದೆ.
ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆ ಭಾವನಾತ್ಮಕವಾಗಿ ಸಾಗುತ್ತದೆ. ಮೊದಲು ಹಾಗೂ ಎರಡನೇ ಭಾಗಕ್ಕಿಂತ ಭಿನ್ನವಾಗಿಯೇ ಮೂಡಿ ಬಂದಿದೆ. ಈ ಸಿನಿಮಾನ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುತ್ತಿದ್ದಾರೆ. ಎಲ್ಲ ಕಡೆ ಧುರಂಧರ 2 ಅಬ್ಬರಿಸುತ್ತಿರುವ ಮಧ್ಯೆಯೂ ‘ಲವ್ ಮಾಕ್ಟೇಲ್ 3’ ಸಿನಿಮಾ ಗಮನ ಸೆಳೆದಿದೆ.
sacnilk ವರದಿ ಪ್ರಕಾರ ಮೊದಲ ದಿನ 1.2 ಕೋಟಿ ರೂಪಾಯಿ, ಎರಡನೇ ದಿನ 1 ಕೋಟಿ ರೂಪಾಯಿ, ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 1.4 ಕೋಟಿ ರೂಪಾಯಿ ಹಾಗೂ 1.76 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಭಾರತದ ಚಿತ್ರ 5.36 ಕೋಟಿ ರೂಪಾಯಿ ಆಗಿದೆ. ಇನ್ನು, ವಿಶ್ವ ಮಟ್ಟದಲ್ಲಿ 6.23 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿಯಾಗಿದೆ. ಇಂದು ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದರೆ ಚಿತ್ರ ಗೆದ್ದಂತೆ.
ಇದನ್ನೂ ಓದಿ: ‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?
‘ಲವ್ ಮಾಕ್ಟೇಲ್ 3’ ಸಿನಿಮಾ ಸಣ್ಣ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಈಗ ಆಗುತ್ತಿರುವ ಗಳಿಕೆ ನಿರ್ಮಾಪಕರಿಗೆ ಲಾಭವನ್ನೇ ತಂದುಕೊಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಧುರಂಧರ್ 2’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿರುವಾಗ ಈ ಚಿತ್ರದ ಕಲೆಕ್ಷನ್ ಇಷ್ಟು ಆಗಿರೋದು ಖುಷಿ ಕೊಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.