Headlines

Love Mocktail 3: ನಮ್ಮ ಚಿತ್ರ ಚೆನ್ನಾಗಿದೆ, ದೊಡ್ಡ ಚಿತ್ರದ ಭಯ ನಮಗಿಲ್ಲ: ಡಾರ್ಲಿಂಗ್‌ ಕೃಷ್ಣ

Love Mocktail 3: ನಮ್ಮ ಚಿತ್ರ ಚೆನ್ನಾಗಿದೆ, ದೊಡ್ಡ ಚಿತ್ರದ ಭಯ ನಮಗಿಲ್ಲ: ಡಾರ್ಲಿಂಗ್‌ ಕೃಷ್ಣ

Love Mocktail 3: ನಮ್ಮ ಚಿತ್ರ ಚೆನ್ನಾಗಿದೆ, ದೊಡ್ಡ ಚಿತ್ರದ ಭಯ ನಮಗಿಲ್ಲ: ಡಾರ್ಲಿಂಗ್‌ ಕೃಷ್ಣ

ನಾನು ಬರೆದ ಕತೆಗೆ ಪ್ರತಿಯೊಬ್ಬರು ಜೀವ ತುಂಬಿದ್ದಾರೆ. ತುಂಬಾ ಚೆನ್ನಾಗಿ ಬಂದಿದೆ. ಆ ಧೈರ್ಯದಿಂದಲೇ ಮಾರ್ಚ್‌ 19ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು ಡಾರ್ಲಿಂಗ್‌ ಕೃಷ್ಣ.

ಡಾರ್ಲಿಂಗ್‌ ಕೃಷ್ಣ ನಟನೆ, ನಿರ್ದೇಶನ, ನಿರ್ಮಾಣದ ‘ಲವ್‌ ಮಾಕ್ಟೇಲ್‌ 3’ ಚಿತ್ರ ಮಾರ್ಚ್‌ 19ಕ್ಕೆ ತೆರೆಗೆ ಬರುತ್ತಿದ್ದು, ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ.

ಡಾರ್ಲಿಂಗ್‌ ಕೃಷ್ಣ, ‘ಆಕಸ್ಮಿಕ ಗಳಿಗೆಯಲ್ಲಿ ಈ ಸಿನಿಮಾದ ಕತೆ ಸಾಲು ಹೊಳೆಯಿತು. ಅದರ ಗುಂಗು ಹತ್ತಿಸಿಕೊಂಡ ನಂತರ ಮನೆಯಲ್ಲಿ ಕತೆ ಬರೆಯಲು ಸಾಧ್ಯವಿಲ್ಲ ಅನಿಸಿ ಮೂರು ದಿನಗಳ ಕಾಲ ಗೋವಾಗೆ ಹೋಗಿದ್ದೆ. ಅಲ್ಲಿಯೇ ಕತೆ. ಚಿತ್ರಕಥೆ ಮಾಡಿಕೊಂಡು ಬಂದೆ.

ನಾನು ಬರೆದ ಕತೆಗೆ ಪ್ರತಿಯೊಬ್ಬರು ಜೀವ ತುಂಬಿದ್ದಾರೆ. ತುಂಬಾ ಚೆನ್ನಾಗಿ ಬಂದಿದೆ. ಆ ಧೈರ್ಯದಿಂದಲೇ ಮಾರ್ಚ್‌ 19ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಮಿಲನಾ ನಾಗರಾಜ್‌, ‘ಲ್ಲರೂ ಇಷ್ಟೊಂದು ಆತ್ಮವಿಶ್ವಾಸದಿಂದ ದೊಡ್ಡ ಸಿನಿಮಾದ ಮುಂದೆ ಬಿಡುಗಡೆ ಮಾಡುತ್ತಿರುವ ಬಗ್ಗೆ ಕೇಳುತ್ತಿದ್ದಾರೆ. ನಮ್ಮ ಈ ಧೈರ್ಯಕ್ಕೆ ಕಾರಣ ಸಿನಿಮಾ ಮೂಡಿ ಬಂದಿರುವ ರೀತಿ. ‘ಲವ್‌ ಮಾಕ್ಟೇಲ್‌ 3’ ಚಿತ್ರ ಅಷ್ಟೊಂದು ಚೆನ್ನಾಗಿ ಮೂಡಿ ಬಂದಿದೆ.

ಈ ಹಿಂದಿನ ಎರಡು ಸರಣಿಗಳಿಗೆ ಕೊಟ್ಟಷ್ಟೇ ಪ್ರೀತಿ, ಪ್ರೋತ್ಸಾಹವನ್ನು ಪ್ರೇಕ್ಷಕರು ಈ ಮೂರನೇ ಪಾರ್ಟ್‌ಗೂ ಕೊಡುತ್ತಾರೆಂಬ ನಂಬಿಕೆ ಇದೆ ಎಂದರು. ದಿಲೀಪ್‌ ರಾಜ್‌, ಶ್ವೇತಾ ಪ್ರಸಾದ್‌, ಅಮೃತಾ ಅಯ್ಯಂಗಾರ್‌, ರೆಚೆಲ್‌ ಡೇವಿಡ್‌ ಇದ್ದರು.

Source link

Leave a Reply

Your email address will not be published. Required fields are marked *