ಲವ್ ಮಾಕ್ಟೇಲ್ 1 ಮತ್ತು 2 ಸಿನಿಮಾಗಳಲ್ಲಿ ನಟಿಸಿ, ಗಮನ ಸೆಳೆದ ನಟಿ ಖುಷಿ ಆಚಾರ್, ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡು ಕಾಯುತ್ತಿದ್ದೇವೆ ಎಂದಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾದ ಮುರನೇ ಭಾಗ ಇದೀಗ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಲವ್ ಮಾಕ್ಟೇಲ್ ಚಿತ್ರದ ಮೊದಲನೇ ಹಾಗೂ ಎರಡನೇ ಭಾಗದಲ್ಲಿ ನಟಿಸಿದ್ದ ನಟಿ ಖುಷಿ ಆಚಾರ್ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ.

ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನಾ ನಾಗರಾಜ್ ಅಭಿನಯದ ಸೂಪರ್ ಹಿಟ್ ಸಿನಿಮಾ ಲವ್ ಮಾಕ್ಟೇಲ್ ನಲ್ಲಿ ಕೃಷ್ಣ ಬೆಸ್ಟ್ ಫ್ರೆಂಡ್ ಆಗಿ ಖುಷಿ ಆಚಾರ್ ನಟಿಸಿದ್ದರು. ಈ ಸಿನಿಮಾದಲ್ಲಿ ಸುಷ್ಮಾ ಮತ್ತು ವಿಜಯ್ ಜೋಡಿ ಸಖತ್ ಆಗಿದ್ದು, ಈ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.

ಲವ್ ಮಾಕ್ಟೇಲ್ ಸಿನಿಮಾದಲ್ಲಿ ಆದಿಯ ಬೆಸ್ಟ್ ಫ್ರೆಂಡ್ ವಿಜಯ್, ವಿಜಯ್ ಸ್ಕೂಲ್ ಟೈಮ್ ಗರ್ಲ್ ಫ್ರೆಂಡ್, ಹೆಂಡತಿ ಸುಷ್ಮಾ ಪಾತ್ರದಲ್ಲಿ ನಟಿಸಿದ್ದು ಖುಷಿ ಆಚಾರ್. ವಿಜಯ್ ಮತ್ತು ಸುಷ್ಮಾ ಆದಿಯ ಜೀವನದಲ್ಲಿ ಎಲ್ಲಾ ಹಂತದಲ್ಲೂ ಜೊತೆಯಾಗಿ ನಿಲ್ಲುವ ಜೋಡಿ ಇವರು. ಬ್ರೇಕಪ್ ನೋವಲ್ಲಿದ್ದ ಆದಿಗೆ ಮದುವೆ ಮಾಡಿಸಿದ್ದೇ ಇವರು. ಹಾಗಾಗಿ ಈ ಜೋಡಿಯನ್ನು ಜನ ಇಷ್ಟಪಟ್ಟಿದ್ದರು.

ಖುಷಿ ಕಳೆದ ವರ್ಷ ಹರ್ಷ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಖುಷಿ ತಾಯಿಯಾಗುತ್ತಿದ್ದು, ಈ ಖುಷಿಯನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಮೆಟರ್ನಿಟಿ ಫೋಟೊ ಶೂಟ್ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.

ನಟಿ ಮತ್ತು ಬರಹಗಾರ್ತಿಯಾಗಿರುವ ಖುಷಿ ಆಚಾರ್, ಪ್ರೆಗ್ನೆನ್ಸಿ ಫೋಟೊ ಶೂಟ್ ಹಂಚಿಕೊಂಡು, ಶಾಶ್ವತವಾಗಿ ಉಳಿಯುವ ನೆನಪು. ನಮ್ಮದೇ ಆದ ಕುಟುಂಬವನ್ನು ರಚಿಸುವುದು ವಿಭಿನ್ನ ಭಾವನೆ ಎಂದು ಬರೆದುಕೊಂಡಿದ್ದಾರೆ. ಗಂಡನ ಜೊತೆಗಿನ ಮುದ್ದಾದ ಫೋಟೊಗಳನ್ನು ಸಹ ನಟಿ ಶೇರ್ ಮಾಡಿದ್ದಾರೆ.

ಖುಷಿ ಆಚಾರ್ ಕೇವಲ್’ ಲವ್ ಮಾಕ್ಟೇಲ್’ 1 ಮತ್ತು 2ರಲ್ಲಿ ಮಾತ್ರ ನಟಿಸಿದ್ದಾರೆ. ಬೇರೆ ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಇತ್ತೀಚೆಗೆ ಲವ್ ಮಾಕ್ಟೇಲ್ 2 ಸಿನಿಮಾ ನಟಿ ಸುಷ್ಮಿತಾ ತಾಯಿಯಾಗಿದ್ದರು. ಇದೀಗ ಎರಡು ಸಿನಿಮಾಗಳಲ್ಲಿ ಮಿಂಚಿರುವ ಖುಷಿ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ.

Source link
ಚೊಚ್ಚಲ ತಾಯ್ತನದ ಸಂಭ್ರಮದಲ್ಲಿ 'ಲವ್ ಮಾಕ್ಟೇಲ್' ನಟಿ ಖುಷಿ ಆಚಾರ್