Headlines

ಪ್ರೀತಿಯಲ್ಲಿ ನಂಬಿಕೆ ದ್ರೋಹದ ಕಥೆ? ‘ಲವ್ ಸೀಸನ್ಸ್’ ಕನ್ನಡ ಸಿನಿಮಾ ಟೀಸರ್ ನೋಡಿ

ಪ್ರೀತಿಯಲ್ಲಿ ನಂಬಿಕೆ ದ್ರೋಹದ ಕಥೆ? ‘ಲವ್ ಸೀಸನ್ಸ್’ ಕನ್ನಡ ಸಿನಿಮಾ ಟೀಸರ್ ನೋಡಿ


ಶೀರ್ಷಿಕೆ ಮೂಲಕವೇ ‘ಲವ್ ಸೀಸನ್’ (ಪ್ರೀತಿಯ ಋತುಗಳು) ಸಿನಿಮಾ ಗಮನ ಸೆಳೆದಿದೆ. ಇದು ಹೊಸಬರ ತಂಡದ ಸಿನಿಮಾ. ತಿಂಗಳ ಹಿಂದಷ್ಟೇ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈಗ ಟೀಸರ್ (ಲವ್ ಸೀಸನ್ ಟೀಸರ್) ಬಿಡುಗಡೆ ಮಾಡಲಾಗಿದೆ. ಅದರ ಜೊತೆಗೆ ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ ಅವರು ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಅವರು ನಾಯಕಿಯರಾಗಿ ನಟಿಸಿದ್ದಾರೆ.

ರಂಗಭೂಮಿ ಹಿನ್ನೆಲೆ ಹೊಂದಿರುವ ಕೃತ್ವಿಕ್ ಅವರು ‘ಲವ್ ಸೀಸನ್ಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕ್ಷತ್ರಿಯ’, ‘ಬುದ್ಧಿವಂತ 2’, ‘ಗುರುದೇವ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಎನ್.ಆರ್. ಮಂಜುನಾಥ (ನೀಲೇರಿ) ಅವರು ‘ಲವ್ ಸೀಸನ್ಸ್’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

‘ಲವ್ ಸೀಸನ್ಸ್’ ಸಿನಿಮಾದ ಟೀಸರ್:

ಹಿರಿಯ ಕಲಾವಿದ ರಾಜೇಶ್ ನಟರಂಗ ಅವರು ‘ಲವ್ ಸೀಸನ್ಸ್’ ಚಿತ್ರದ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ದೇಶಕರ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಜವಾಬ್ದಾರಿಯುತ ತಂದೆಯ ಪಾತ್ರವನ್ನು ಅವರು ಈ ಚಿತ್ರದಲ್ಲಿ ನಿಭಾಯಿಸಿದ್ದಾರೆ. ಪ್ರೀತಿ ಯಾವ ಕಾಲಕ್ಕೂ ಹಳತಾಗದ ವಿಷಯ. ಆ ಕಾನ್ಸೆಪ್ಟ್‌ನಲ್ಲಿ ಸಿನಿಮಾ ಸಿದ್ಧವಾಗಿದೆ ಎಂಬ ಸುಳಿವನ್ನು ಅವರು ತೋರಿಸಿದ್ದಾರೆ.

ಲವ್ ಸೀಸನ್ ಚಿತ್ರ ತಂಡ

ಲವ್ ಸೀಸನ್ ಚಿತ್ರ ತಂಡ

ಈ ಸಿನಿಮಾಗೆ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ, ಭಜರಂಗಿ ಮೋಹನ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಮಂಡ್ಯ ರಮೇಶ್, ಸಂಗೀತಾ ಅನಿಲ್, ಜಯತೀರ್ಥ, ಕಾಮಿಡಿ ಕಿಲಾಡಿ ಸದಾನಂದ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಕೂಡ ಪಾತ್ರವರ್ಗದಲ್ಲಿದ್ದಾರೆ.

ಇದನ್ನೂ ಓದಿ: ಯಶಸ್ವಿಯಾಗಿ 25 ದಿನ ಪೂರೈಸಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಹ್ಯಾಟ್ರಿಕ್ ಗೆಲುವು

‘ಲವ್ ಸೀಸನ್ಸ್’ ಸಿನಿಮಾ ಜೂನ್ ತಿಂಗಳಿನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಸದ್ಯದಲ್ಲೇ ಹಾಡು ಮತ್ತು ಟ್ರೇಲರ್ ಬಿಡುಗಡೆ ಆಗಲಿದೆ. ಸಿನಿಮಾದ ಕಥೆ ಏನು ಸುಳಿವು ಟೀಸರ್ ನಲ್ಲಿ ಸಿಕ್ಕಿದೆ. ‘ಹುಡುಗಿಯರನ್ನು ಅಷ್ಟು ಸುಲಭವಾಗಿ ನಂಬಬೇಡ’, ‘ನಮ್ ಹುಡುಗಿ ಸರಿಯಾಗಿದ್ದಾಳೆ ಎಂಬ ನಂಬಿಕೆ ನನಗೆ ಇದೆ’ ಎಂಬಿತ್ಯಾದಿ ಡೈಲಾಗ್‌ಗಳು ಟೀಸರ್‌ನಲ್ಲಿವೆ. ಆ ಮೂಲಕ ಇದು ಪ್ರೀತಿ, ನಂಬಿಕೆ ಮತ್ತು ದ್ರೋಹಕ್ಕೆ ಸಂಬಂಧಿಸಿದ ಕಥೆ ಇರುತ್ತದೆ ಎಂಬ ಸುಳಿವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *