ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು

ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು


ಜನವರಿ, ಮಾರ್ಚ್ 1: ಕಮರ್ಷಿಯಲ್ ಎಲ್ಪಿಜಿ ದರಗಳು (ವಾಣಿಜ್ಯ ಎಲ್ಪಿಜಿ ಬೆಲೆಗಳು) ಸತತ ಮೂರನೇ ತಿಂಗಳ ಏರಿಕೆ ಆಗಿವೆ. ಕಳೆದ ಆರು ತಿಂಗಳಿನಲ್ಲಿ ನಾಲ್ಕನೇ ಬಾರಿ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಾಗಿತ್ತು. ತಿಂಗಳ ಮೊದಲ ದಿನವಾದ ಮಾರ್ಚ್ 1 ರಂದು ಭಾರತದಲ್ಲಿ 19 ಕಿಲೋ ಕಮರ್ಷಿಯಲ್ ಎಲ್ಪಿಜಿ ದರಗಳು 28 ರಿಂದ 31 ರೂವರೆಗೆ ಏರಿವೆ. ದೆಹಲಿ, ಮುಂಬೈ ಮೊದಲಾದೆಡೆ ಇದರ ಬೆಲೆ 28 ರೂ ಹೆಚ್ಚಿದೆ, ಕೋಲ್ಕತಾದಲ್ಲಿ 31 ರೂ ಹೆಚ್ಚಿದೆ. 47.5 ಕಿಲೋ ಕಮರ್ಷಿಯಲ್ ಎಲ್ಪಿಜಿ ದರಗಳೂ ಕೂಡ ಭರ್ಜರಿ ಏರಿವೆ. ಆದರೆ, 14.2 ಕಿಲೋ ಹಾಗೂ 5 ಕಿಲೋ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಯಥಾಸ್ಥಿತಿ ಮುಂದುವರಿದಿದೆ.

ಬೆಂಗಳೂರಿನಲ್ಲಿ ಎಲ್ಪಿಜಿ ದರಗಳು (ಮಾರ್ಚ್ 1ಕ್ಕೆ)

  • 14.2 ಕಿಲೋ ಗೃಹಬಳಕೆ ಎಲ್ಪಿಜಿ ಸಿಲಿಂಡರ್: 855.50 ರೂ
  • 5 ಕಿಲೋ ಗೃಹಬಳಕೆ ಎಲ್ಪಿಜಿ ಸಿಲಿಂಡರ್: 318.50 ರೂ
  • 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್: 1,842.50 ರೂ (28.50 ರೂ ಏರಿಕೆ)
  • 47.5 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್:

ಇದನ್ನೂ ಓದಿ: ಇಂದು ಚಿನ್ನದ ದರ: ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಜನವರಿಯಲ್ಲಿ 110.50 ರೂ, ಫೆಬ್ರುವರಿಯಲ್ಲಿ 49.50 ರೂ ಹೆಚ್ಚಿತ್ತು. 47.5 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಫೆಬ್ರುವರಿಯಲ್ಲಿ 125 ರೂ ನಷ್ಟು ಏರಿ 4,532 ರೂ ಇದೆ. ಮಾರ್ಚ್ ತಿಂಗಳಿನಲ್ಲಿ ಈ ಬೃಹತ್ ಸಿಲಿಂಡರ್ ಬೆಲೆ 4,600 ರೂ ದಾಟಿ ಹೋಗಿದೆ.

2025 ರ ಏಪ್ರಿಲ್ 1 ರಂದು 14.2 ಕಿಲೋ ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆಯಾಗುತ್ತಿದೆ. ಅದಾದ ಬಳಿಕ ಮತ್ತೆಂದೂ ಇದರ ಬೆಲೆ ಏರಿಕೆ ಆಗಿಲ್ಲ. ಇನ್ನೊಂದೆಡೆ, ಈ ಹಣಕಾಸು ವರ್ಷದ ಮೊದಲ ಆರು ತಿಂಗಳು ಸತತವಾಗಿ ಇಳಿಕೆ ಕಂಡಿದ್ದ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಕಂಡಿವೆ.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್ : ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಈಗ ಮಧ್ಯಪ್ರಾಚ್ಯ ಭಾಗದಲ್ಲಿ ಯುದ್ಧ ಪ್ರಾರಂಭವಾಗಿ ಮುಂದಿನ ದಿನಗಳಲ್ಲಿ ಪೆಟ್ರೋಲ್, ಎಲ್ಪಿಜಿ ಸೇರಿದಂತೆ ಪೆಟ್ರೋಲಿಯಂ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆ ಆಗುವ ಸಂಭವವಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *