ಹೋಟೆಲ್‌ ಗ್ರಾಹಕರಿಗೆ ಮತ್ತೊಂದು ಶಾಕ್: ಇನ್ಮುಂದೆ ಊಟ-ತಿಂಡಿಗೆ ಹೆಚ್ಚು ಹೊತ್ತು ಕಾದು ಕುಳಿತುಕೊಳ್ಳುವುದು ಅನಿವಾರ್ಯ!

ಹೋಟೆಲ್‌ ಗ್ರಾಹಕರಿಗೆ ಮತ್ತೊಂದು ಶಾಕ್: ಇನ್ಮುಂದೆ ಊಟ-ತಿಂಡಿಗೆ ಹೆಚ್ಚು ಹೊತ್ತು ಕಾದು ಕುಳಿತುಕೊಳ್ಳುವುದು ಅನಿವಾರ್ಯ!


ಹೋಟೆಲ್ ಗ್ರಾಹಕರು ಮತ್ತೊಂದು ಶಾಕ್: ಇನ್ಮುಂದೆ ಊಟ-ತಿಂಡಿಗೆ ಹೆಚ್ಚು ಹೊತ್ತು ಕಾದು ಕುಳಿತುಕೊಳ್ಳುವುದು ಅನಿವಾರ್ಯ!

ಬೆಂಗಳೂರು, ಏಪ್ರಿಲ್ 13: ಹೋಟೆಲ್‌ಗೆ (ಹೋಟೆಲ್‌ಗಳು) ಹೋದ ತಕ್ಷಣ ಬಿಸಿ ಬಿಸಿ ತಿಂಡಿ ಅಥವಾ ಊಟ ಸಿಗುತ್ತದೆ ಎಂಬ ಕಾಲ ಈಗ ಬದಲಾಗುತ್ತಿದೆ! ಇರಾನ್, ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಅಭಾವ ಸಂಭವಿಸಿದೆ, ಬೆಂಗಳೂರಿನಲ್ಲಿ (ಬೆಂಗಳೂರು) ಹೋಟೆಲ್‌ಗಳಲ್ಲಿ ಸರ್ವೀಸ್ ಸಮಯವನ್ನು ಹೆಚ್ಚಿಸಲಾಗಿದೆ. ಇನ್ಮುಂದೆ ನೀವು ಆರ್ಡರ್ ಮಾಡಿದ ತಿಂಡಿ ನಿಮ್ಮ ಕೈ ಸೇರಲು ಕನಿಷ್ಠ 15 ರಿಂದ 20 ನಿಮಿಷ ಕಾಯುವುದು ಅನಿವಾರ್ಯ ಪರಿಸ್ಥಿತಿ.

ಸಿಲಿಂಡರ್ ಅಭಾವಕ್ಕೆ ಸೌದೆ ಓಲೆ ಪರ್ಯಾಯ

ಕೆಲವು ದಿನಗಳಷ್ಟೇ ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ ಊಟದ ದರ ಹೆಚ್ಚಾಯಿತು. ಈಗ ಬೆಲೆ ಹೆಚ್ಚಳದ ಜೊತೆಗೆ ಸಿಲಿಂಡರ್‌ಗಳ ಲಭ್ಯತೆ ಇಲ್ಲ. ಈ ಅಭಾವವನ್ನು ನೀಗಿಸಲು ಹೋಟೆಲ್ ಸೌದೆ ಓಲೆ ಹಾಗೂ ಎಲಿಟಿಕ್ ಸ್ಟೌವ್‌ಗಳ ಮೊರೆ ಹೋಗುತ್ತಿದೆ. ಎಲ್‌ಪಿಜಿ ಒಲೆಗಳಿಗೆ ಸೌದೆ ಅಥವಾ ಎಲೆಕ್ಟಿಕ್ ಸ್ಟೌವ್‌ಗಳಲ್ಲಿ ಅಡುಗೆ ಮಾಡಲು ಹೆಚ್ಚಿನ ಸಮಯ ತಗಲುತ್ತದೆ. ಇದೇ ಕಾರಣಕ್ಕೆ ಗ್ರಾಹಕರಿಗೆ ತಕ್ಷಣ ಊಟ-ತಿಂಡಿ ನೀಡಲು ಹೋಟೆಲ್‌ಗಳು ಹೈರಾಣಾಗುತ್ತಿವೆ.

ಗ್ರಾಹಕರಿಗೆ ತಪ್ಪಿದ ಸಂಕಷ್ಟ

ತುರ್ತಾಗಿ ಕೆಲಸಕ್ಕೆ ಹೋಗುವವರು ಅಥವಾ ಹಸಿವಿನಿಂದ ಹೋಟೆಲ್‌ಗೆ ಬರುವವರು ಈಗ ಅನಿವಾರ್ಯವಾಗಿ ವೈಟಿಂಗ್ ರೂಮ್‌ನಲ್ಲಿ ಕಾಯಬೇಕಾಗಿದೆ. ಗಲ್ಫ್ ರಾಷ್ಟ್ರಗಳ ಯುದ್ಧ ತಂದೊಡ್ಡಿರುವ ಈ ಅನಿಶ್ಚಿತತೆ ಹೋಟೆಲ್ ಉದ್ಯಮವನ್ನೇ ಅಸ್ತವ್ಯಸ್ತಗೊಳಿಸಿದೆ. ‘ಹೆಚ್ಚು ಹಣ ಕೊಟ್ಟರೂ ಊಟಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ಯುದ್ಧದ ಪರಿಣಾಮ ಸಾಮಾನ್ಯ ಜನರ ತಟ್ಟೆಯವರೆಗೂ ತಲುಪಿದೆ.

ಇದನ್ನೂ ಓದಿ: ಕರ್ನಾಟಕ ಎಲ್‌ಪಿಜಿ ಬಿಕ್ಕಟ್ಟು: ಬೆಂಗಳೂರಿನಲ್ಲಿ ಆಟೋ ಗ್ಯಾಸ್‌ಗಾಗಿ ಕಿ.ಮೀ ದೂರ ಫುಲ್ ಕ್ಯೂ!

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *