ಎಂಥಾ ಕಾಲ ಬಂತಪ್ಪ: LPG ಸಿಲಿಂಡರ್​​ಗಳ ವಿತರಣೆ ವೇಳೆ ಪೊಲೀಸ್​​ ಭದ್ರತೆ!

ಎಂಥಾ ಕಾಲ ಬಂತಪ್ಪ:  LPG ಸಿಲಿಂಡರ್​​ಗಳ ವಿತರಣೆ ವೇಳೆ ಪೊಲೀಸ್​​ ಭದ್ರತೆ!


ಎಂಥಾ ಕಾಲ ಬಂತಪ್ಪ: LPG ಸಿಲಿಂಡರ್ ವಿತರಣೆ ವೇಳೆ ಪೊಲೀಸ್ ಭದ್ರತೆ!

ಬೆಂಗಳೂರು, ಮಾರ್ಚ್ 18: ಎಲ್ಪಿಜಿ ಸಿಲಿಂಡರ್ಗಳ ಬಿಕ್ಕಟ್ಟುಬೆಂಗಳೂರಿನಲ್ಲಿ ತೀವ್ರಗೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆತಂಕ ಇದೀಗ ಗೃಹಬಳಕೆಯ ಸಿಲಿಂಡರ್‌ಗಳ ಬಳಕೆದಾರರಿಗೂ ಹಬ್ಬಿದೆ. ಸಿಲಿಂಡರ್‌ಗಳು ಸಿಗುವುದಿಲ್ಲ ಎಂಬ ಭಯದಲ್ಲಿ ಜನಸಾಮಾನ್ಯರು, ವಿಶೇಷವಾಗಿ ಗೃಹಬಳಕೆಯ ಗ್ರಾಹಕರು, ಏಜೆನ್ಸಿಗಳ ಬಳಿ ಮುಗಿಬೀಳುತ್ತಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ದೊಡ್ಡ ಸಂಖ್ಯೆಯ ಗ್ರಾಹಕರು ಸಿಲಿಂಡರ್‌ಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ. ಸಾಮಾನ್ಯವಾಗಿ ಏಜೆನ್ಸಿಗಳು ಮನೆಗಳಿಗೆ ಸಿಲಿಂಡರ್ಗಳನ್ನು ಪೂರೈಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೆ ವಿತರಣೆ ವಿಳಂಬವಾಗುತ್ತಿರುವ ಗ್ರಾಹಕರು ತಾವೇ ಖಾಲಿ ಸಿಲಿಂಡರ್‌ಗಳನ್ನು ಭರ್ತಿ ಮಾಡಿದ ಸಿಲಿಂಡರ್‌ಗಳನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ನೂಕು ನುಗ್ಗಲು ಉಂಟಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಹಾಜರಿದ್ದು ಗಮನ ಸೆಳೆದಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *