ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ


ಎಲ್ಪಿಜಿ ಈಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರನ್ನು ಮಾತ್ರ ಅನ್ವಯಿಸಿ, ಗಮನಿಸಿ

ಜನವರಿ, ಮಾರ್ಚ್ 17: ಎಲ್ಪಿಜಿ ಗ್ರಾಹಕರು ಇಕೆವೈಸಿ (ಬಯೋಮೆಟ್ರಿಕ್ ಆಧಾರ್ ದೃಢೀಕರಣ) ಮಾಡುವುದು ಕಡ್ಡಾಯವಾದಂತಹ ಸುದ್ದಿ ಎರಡು ದಿನಗಳಿಂದ ಕೇಳಿಬರುತ್ತಿದೆ. ಇದೇ ವೇಳೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದೆ, ಆಧಾರ್ ಬಯೋಮೆಟ್ರಿಲ್ ದೃಢೀಕರಣ ಅಥವಾ ಇಕೆವೈಸಿಯು ಎಲ್ಲಾ ಎಲ್ಪಿಜಿ ಗ್ರಾಹಕರಿಗೆ ಕಡ್ಡಾಯವಾಗಿದೆ. ಇಕೆವೈಸಿ ಮಾಡಿಸಿಲ್ಲದ ಎಲ್ಪಿಜಿ ಗ್ರಾಹಕರು ಮಾತ್ರ ಈ ಗ್ಯಾಸ್ ಪಡೆಯಲು ಇಕೆವೈಸಿ ಮಾಡುವುದು ಕಡ್ಡಾಯ ಎಂದು ಸಚಿವಾಲಯವು ಹೇಳಿದೆ.

ಎಲ್ಪಿಜಿ ಗ್ರಾಹಕರು ಆಧಾರ್ ದೃಢೀಕರಣದ ವಿಚಾರದಲ್ಲಿ ಹೊಸದೇನೂ ನಿರ್ದೇಶನ ಹೊರಡಿಸಲಾಗಿಲ್ಲ. ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಪೂರ್ಣಗೊಳಿಸುವಂತೆ ಎಲ್ಪಿಜಿ ಗ್ರಾಹಕರನ್ನು ಪ್ರೋತ್ಸಾಹಿಸುವ ಕ್ರಮ ಜಾರಿಯಲ್ಲಿದೆ.

ಎಲ್ಪಿಜಿ ಈಕೆವೈಸಿ ವಿಚಾರದಲ್ಲಿ ತಿಳಿಯಬೇಕಾದ ಸಂಗತಿಗಳು…

  • ಎಲ್ಪಿಜಿ ಗ್ರಾಹಕರು ಇದೂವರೆಗೆ ಇಕೆವೈಸಿ ಮಾಡಿಸಿಲ್ಲದೇ ಇದ್ದರೆ ಅವರು ಈಗ ಮಾಡಿಸುವುದು ಕಡ್ಡಾಯ.
  • ಪಿಎಂ ಉಜ್ವಲ್ ಯೋಜನೆ ಯೋಜನೆಗಳು ಪ್ರತೀ ಹಣಕಾಸು ವರ್ಷಕ್ಕೆ ಒಮ್ಮೆ ಇಕೆವೈಸಿ ಅಪ್‌ಡೇಟ್ ಮಾಡಬೇಕು. ಅದೂ 7 ಸಿಲಿಂಡರ್ ಪೂರೈಕೆಗೆ ಸಬ್ಸಿಡಿ ಪಡೆದು, 8 ಮತ್ತು 9ನೇ ಸಿಲಿಂಡರ್ ಪಡೆಯುವಾಗ ಇಕೆವೈಸಿ ಅಪ್ಡೇಟ್ ಮಾಡಬೇಕು.
  • ಪಿಎಂ ಉಜ್ವಲ್ ಯೋಜನೆಗೆ ಒಳಪಡದ ಇತರ ಎಲ್ಪಿಜಿ ಗ್ರಾಹಕರು ಒಮ್ಮೆ ಇಕೆವೈಸಿ ಮಾಡಿಸಿದರೆ ಸಾಕು, ಮತ್ತೆ ಅಪ್‌ಡೇಟ್ ಮಾಡುವ ಅವಶ್ಯಕತೆ ಇದೆ.
  • ಮನೆಯಲ್ಲೇ ಕುಳಿತು, ಉಚಿತವಾಗಿ ಈಕೆವೈಸಿಯನ್ನು ಮಾಡಬಹುದು.

ಇದನ್ನೂ ಓದಿ: ಪಿಎನ್‌ಜಿ ಗ್ಯಾಸ್‌ಗೂ ಎಲ್‌ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್ ಜಿ ಕನೆಕ್ಷನ್ ಪಡೆಯುವುದು ಹೇಗೆ?
ಸರ್ಕಾರದಿಂದ ಬಂದ ಸ್ಪಷ್ಟನೆ

ಎಲ್ಪಿಜಿ ಗ್ರಾಹಕರು ಇಕೆವೈಸಿ ಅಪ್ಡೇಟ್ ಮಾಡುವುದು ಹೇಗೆ?

ಎಲ್ಪಿಜಿ ಗ್ರಾಹಕರು ತಮ್ಮ ವಿತರಕರ ಕಚೇರಿಗೆ ಹೋಗಿ ಅಲ್ಲಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಕೊಡಬಹುದು. ಇದು ಒಂದು ವಿಧಾನ.

ಮತ್ತೊಂದು ವಿಧಾನ ಆನ್‌ಲೈನ್‌ನದ್ದು. ಆಧಾರ್ ಫೇಸ್ ಆರ್ಡಿ ಆಯಪ್ ಅನ್ನು ಡೌನ್ ಲೋಡ್ ಮಾಡಬೇಕು. ನಿಮ್ಮ ಗ್ಯಾಸ್ ನ ಕಂಪನಿಯ ಆಯಪ್ ಅನ್ನೂ ಡೌನ್ ಲೋಡ್ ಮಾಡಬೇಕು. ಉದಾಹರಣೆಗೆ, ಇಂಡೇನ್ ಗ್ರಾಹಕರು ಐಒಸಿಎಲ್ನ ಆಯಪ್ ಡೌನ್ ಲೋಡ್ ಮಾಡಬೇಕು. ಹಾಗೆಯೇ, ಬೈಪಿಸಿಲ್ ಅಥವಾ ಎಚ್‌ಪಿಸಿಎಲ್ ಬಳಕೆದಾರರು ಆಯಾ ಕಂಪನಿಗಳ ಆಪ್‌ಗಳನ್ನು ಬಳಸಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಮಾಡಬಹುದಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *