ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆಯ ಭೀತಿ ಎದುರಾಗಿದ್ದು, ಪುಣೆಯ ಶವಾಗಾರವು ಎಲೆಕ್ಟ್ರಿಕ್ ಅಂತ್ಯಸಂಸ್ಕಾರಕ್ಕೆ ಮೊರೆಹೋಗಿದೆ. ಈ ಸಂಘರ್ಷವು ‘ಜಲಯುದ್ಧ’ವಾಗಿ ಮಾರ್ಪಟ್ಟಿದ್ದು, ಇರಾನ್-ಅಮೆರಿಕ ನೀರಿನ ಘಟಕಗಳ ಮೇಲೆ ದಾಳಿ ನಡೆಸಿವೆ. ದುಬೈನಲ್ಲಿ ತೀವ್ರ ಆಹಾರದ ಕೊರತೆ ಉಂಟಾಗಿದೆ.

ಮಧ್ಯಪ್ರಾಚ್ಯ ಯುದ್ಧದಿಂದ ಎಲ್‌ಪಿಜಿ ಕೊರತೆಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಬೃಹತ್ ಶವಾಗಾರವಾಗಿರುವ ಪುಣೆ ವೈಕುಂಠ ಧಾಮವು ಎಲ್‌ಪಿಜಿ ಬದಲಿಗೆ ಎಲೆಕ್ಟ್ರಿಕ್ ಯಂತ್ರಗಳ ಮೂಲಕ ಶವಗಳ ಅಂತ್ಯಸಂಸ್ಕಾರಕ್ಕೆ ನಿರ್ಧರಿಸಿದೆ.

ಪುಣೆಯ ನವಿ ಪೇಠದಲ್ಲಿ 17 ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಶವಾಗಾರದಲ್ಲಿ ದಿನಕ್ಕೆ ಕನಿಷ್ಠ 20 ಶವಗಳ ದಹನಕ್ರಿಯೆ ನಡೆಯುತ್ತದೆ. ಇದೀಗ ಎಲ್‌ಪಿಜಿ ಕೊರತೆಯ ಆತಂಕ ಎದುರಾಗಿರುವುದರಿಂದ ಅದರ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬದಲಿದೆ ಎಲೆಕ್ಟ್ರಿಕ್ ಯಂತ್ರದ ಮೂಲಕ ಶವಗಳ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ನೆಲೆ, ರಾಯಭಾರ ಕಚೇರಿ, ತೈಲ ಡಿಪೋ, ಸರ್ಕಾರಿ ಕಚೇರಿಗಳ ಮೇಲಿನ ದಾಳಿಯ ಬಳಿಕ ಮಧ್ಯಪ್ರಾಚ್ಯದ ಯುದ್ಧವೀಗ ಜಲಯುದ್ಧವಾಗಿ ಮಾರ್ಪಟ್ಟಿದೆ. ಮಧ್ಯಪ್ರಾಚ್ಯದಲ್ಲಿ ಪೆಟ್ರೋಲ್‌ಗಿಂತಲೂ ಹೆಚ್ಚಿನ ಬೆಲೆ ಹೊಂದಿರುವ ನೀರಿನ ಘಟಕಗಳ ಮೇಲೆ ಇರಾನ್- ಅಮೆರಿಕ ಪರಸ್ಪರ ದಾಳಿ ನಡೆಸಿದ್ದು ಭಾರೀ ಆತಂಕ ಹುಟ್ಟುಹಾಕಿದೆ. ಬಹ್ರೇನ್‌ನ ನೀರು ಘಟಕ ಮೇಲೆ ಇರಾನ್, ಇರಾನ್‌ನ ನೀರು ಘಟಕದ ಮೇಲೆ ಅಮೆರಿಕ ದಾಳಿ ಮಾಡಿದೆ.

ಇರಾನ್ ಜತೆಗಿನ ಸಂಘರ್ಷ 3 ತಿಂಗಳಾದರೂ ನಡೆಯುತ್ತದೆ ಎಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, ಇದೀಗ ಇಸ್ರೇಲ್‌ಗೆ 6000 ಕೋಟಿ ರು. ಮೌಲ್ಯದ 20,000 ಬಾಂಬ್‌ಗಳನ್ನು ಇಸ್ರೇಲ್‌ಗೆ ರವಾನಿಸುವಂತೆ ತಮ್ಮ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಅಮೆರಿಕ, ಇರಾನ್ ಮತ್ತು ಇಸ್ರೇಲ್ ಸಂಘರ್ಷದಿಂದ ಕೊಲ್ಲಿ ರಾಷ್ಟ್ರಗಳು ಬಲಿಪಶುಗಳಾಗುತ್ತಿದ್ದು, ದುಬೈನಲ್ಲಿ ತಾಜಾ ಆಹಾರಕ್ಕೂ ಸಂಚಕಾರ ಬಂದೊದಗಿದೆ. ಇಲ್ಲಿ ಕೇವಲ 8 ದಿನಗಳಿಗೆ ಆಗುವಷ್ಟು ಮಾತ್ರವೇ ಆಹಾರ ದಾಸ್ತಾನುಗಳಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ.

Source link
ಯುದ್ಧದಿಂದ ಎಲ್‌ಪಿಜಿ ಅಭಾವ: ಶವಾಗಾರದಲ್ಲಿ LPG ಬದಲು ಎಲೆಕ್ಟ್ರಿಕ್ ಅಂತ್ಯಕ್ರಿಯೆ!