Headlines

ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ


ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್‌ಪಿಜಿ ಸಮಸ್ಯೆಗೆ ಎಚ್‌ಸಿಎಲ್‌ನಿಂದ ವರ್ಕ್ ಫ್ರಂ ಮನೆ ಪರಿಹಾರ

ಜನವರಿ, ಮಾರ್ಚ್ 12: ಅಡುಗೆ ಅನಿಲದ ಕೊರತೆ ಭಾರತಾದ್ಯಂತ ಕಾಡುತ್ತಿದೆ. ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ (LPG ಸಿಲಿಂಡರ್) ದುಬಾರಿಯಾಗಿರುವುದು, ಅವು ಸಿಗುವುದೇ ದುಸ್ತರವಾಗಿದೆ. ಬೆಂಗಳೂರಿನ ಅನೇಕ ಹೋಟೆಲ್‌ಗಳು ಈ ಬಿಕ್ಕಟ್ಟು ಬಗೆಹರಿಯುವವರೆಗೂ ಬಾಗಿಲು ಬಂದ್ ಮಾಡಲು ನಿರ್ಧರಿಸಿವೆ. ಕಾರ್ಪೋರೇಟ್ ಸಂಸ್ಥೆಗಳೂ ಕೂಡ ಈ ಬಿಸಿ ತಾಕಿಸಿಕೊಂಡಿವೆ. ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳು ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುವುದು ಕಷ್ಟ. ಹೀಗಾಗಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಲು ಯೋಜಿಸಿವೆ. ವರದಿಗಳ ಪ್ರಕಾರ ಎಚ್‌ಸಿಎಲ್‌ಟೆಕ್ (HCLTech) ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿವೆ.

ಇಂದು ಮತ್ತು ನಾಳೆ, ಮಾರ್ಚ್ 12 ಮತ್ತು 13 ರಂದು ಎಚ್‌ಸಿಎಲ್‌ಕೆ ಕಚೇರಿಯ ಉದ್ಯೋಗಿಗಳಿಗೆ ಮನೆಯ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಮಿಂಟ್ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಎಲ್ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆಯ ಬಗ್ಗೆ ಘೋಷಣೆ

ಎಚ್‌ಸಿಎಲ್‌ಟೆಕ್‌ನಂತಹ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಟ್ಟರೆ, ಇತರ ಹಲವು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೇಫ್ಟಿ ಪ್ರೋಟೋಕಾಲ್‌ಗಳನ್ನು ಅಳವಡಿಸಿವೆ. ಇಂಟರ್ನಲ್ ವಾರ್ ರೂಮ್‌ಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಲೈವ್ ಆಗಿ ನಿಭಾಯಿಸುವ ಪ್ರಯತ್ನ ಮಾಡುತ್ತಿದೆ.

ಇನ್ಫೋಸಿಸ್ ಸಂಸ್ಥೆಯು ಬೆಂಗಳೂರಿನಲ್ಲಿರುವ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಲ್ಪಿಜಿ ಕೊರತೆಯಿಂದ ಕೆಫೆಟೇರಿಯಾದಲ್ಲಿ ಆಹಾರದ ಕೊರತೆ ಇರುವ ವಿಚಾರವನ್ನು ಮನದಟ್ಟು ಮಾಡಿದೆ. ಲೈವ್ ಫುಡ್ ಕೌಂಟರ್‌ಗಳನ್ನು ನಿಲ್ಲಿಸಲಾಗಿದೆ. ಮನೆಯಿಂದಲೇ ಅಡುಗೆ ಮಾಡಿಕೊಂಡು ಪಾರ್ಸಲ್ ತರಬೇಕೆಂದು ಕಂಪನಿ. ಚೆನ್ನೈನಲ್ಲಿರುವ ಇನ್ಫೋಸಿಸ್ ಕಚೇರಿಯ ಉದ್ಯೋಗಿಗಳಿಗೆ ಸಲಹೆ ನೀಡಲಾಗಿರುವುದು.

ಇದನ್ನೂ ಓದಿ: ಯುದ್ಧವನ್ನು ನಿಲ್ಲಿಸಲು ಇರಾನ್ 3 ಷರತ್ತುಗಳು; ಭಾರತದ ಆರ್ಥಿಕತೆ ಏನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಅಡುಗೆ ಅನಿಲದ ಪೂರೈಕೆಯಲ್ಲಿ ಸದ್ಯ ಯಾವ ಸಮಸ್ಯೆಯೂ ಇಲ್ಲ ಎಂದು ಸರ್ಕಾರ ಹೇಳಿದ್ದರೂ ದೇಶದ ಹೆಚ್ಚಿನ ಕಡೆ ಎಲ್ಪಿಜಿ ಸಿಲಿಂಡರ್ ಸರಬರಾಜಿಗೆ ಧಕ್ಕೆಯಾಗಿದೆ. ಕಮರ್ಷಿಯಲ್ ಗ್ಯಾಸ್ ಮತ್ತು ಗೃಹಬಳಕೆ ಎಲ್ಪಿಜಿ ಎರಡೂ ಕೂಡ ಅಡುಗೆ ಅನಿಲಗಳೇ ಆಗಿವೆ. ಗೃಹಬಳಕೆ ಗ್ಯಾಸ್ ಕೂಡ ಸಿಗುವುದು ದುಸ್ತರವೆನಿಸಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *