ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಯೋಜನೆಯಾದ ಡಾ. ಬಸವರಾಜ ಗುರೂಜಿಅವರು 2026ರ ಕೇತುಗ್ರಸ್ತ ಚಂದ್ರಗ್ರಹಣ ಮಿಥುನ ರಾಶಿಯವರ ಮೇಲೆ ಹೇಗಿರಲಿದೆ ಎಂಬುದರ ಕುರಿತು ಮಾಹಿತಿ ನೀಡಲಾಗಿದೆ. ಈ ಚಂದ್ರಗ್ರಹಣವು ಮಿಥುನ ರಾಶಿಯವರಿಗೆ “ಡಬಲ್ ಧಮಾಕ” ಫಲಿತಾಂಶಗಳು ತರಲಿವೆ. ಮೃಗಶಿರ, ಆರಿದ್ರ ಮತ್ತು ಪುನರ್ವಸು ನಕ್ಷತ್ರದವರು ಈ ಪ್ರಭಾವಕ್ಕೆ ಒಳಪಡುತ್ತಾರೆ. ಮಿಥುನ ರಾಶಿಯಿಂದ ಮೂರನೇ ಮನೆಯಲ್ಲಿ ಗ್ರಹಣ ಸಂಭವಿಸಿದೆ
ಈ ಗ್ರಹದ ಪ್ರಭಾವದಿಂದ ಮಿಥುನ ರಾಶಿಯವರ ಆಲೋಚನೆಗಳು ಸ್ಪಷ್ಟ, ನಿರ್ಧಾರಗಳು ಉತ್ತಮ ಪರಿಣಾಮ ಮತ್ತು ಆರ್ಥಿಕ ಪ್ರಗತಿಯನ್ನು ಕಾಣಬಹುದು. ತಪ್ಪು ತಿಳುವಳಿಕೆಗಳಿಂದ ಹೊರಬಂದು, ನ್ಯಾಯಾಲಯದ ವಿಷಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು. ಕುಟುಂಬದ ಸದಸ್ಯರೊಂದಿಗೆ ಆಸ್ತಿ ವಿವಾದಗಳು ಇತ್ಯರ್ಥವಾಗುವ ಸಾಧ್ಯತೆಯಿದೆ. ವಿಶ್ವಾಸಾರ್ಹ ಮತ್ತು ವಾಹನ, ಮನೆ ಅಥವಾ ನಿವೇಶನ ಖರೀದಿಯ ಹೊಸ ಯೋಗವಿದೆ. ಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶಗಳು ಒದಗಿ ಬರುತ್ತವೆ. ಆರೋಗ್ಯದಲ್ಲಿ ಚೇತರಿಕೆ ಮತ್ತು ಹಳೆಯ ಹೂಡಿಕೆಗಳಿಂದ ಲಾಭ ಸಿಗುತ್ತದೆ.
ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?
ಹೊಸ ವ್ಯಾಪಾರ ಆರಂಭಿಸಲು ಇದು ಉತ್ತಮ ಸಮಯ. ಐಟಿ ಅಥವಾ ಜಿಎಸ್‌ಟಿ ಸಂಬಂಧಿತ ಒತ್ತಡಗಳಿದ್ದವರಿಗೆ ನಿರಾಳತೆ ಸಿಗುತ್ತದೆ. ವಿವಾಹ ವಿಷಯಗಳಲ್ಲಿ ಫಲ ಶುಭಗಳು. ಆದಾಗ್ಯೂ, ಶೇರ್ ಅಥವಾ ಟ್ರೇಡಿಂಗ್‌ನಲ್ಲಿ ಇತರರನ್ನು ನಂಬಿ ಹಣ ಕಳೆದುಕೊಳ್ಳದಂತೆ ಎಚ್ಚರ ವಹಿಸಬೇಕು. ಗ್ರಹಣದ ಸಮಯದಲ್ಲಿ ಮೌನ ಆಚರಿಸುವುದು, ಕೃಷ್ಣ ಜಪ ಮತ್ತು ಕೃಷ್ಣ ದೇವಾಲಯಗಳಿಗೆ ಭೇಟಿ ನೀಡುವುದು ಹೆಚ್ಚು ಶುಭ ತರುತ್ತದೆ ಎಂದು ಗುರೂಜಿ ಸಲಹೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 12:39 pm, ಬುಧವಾರ, 25 ಫೆಬ್ರವರಿ 26