Headlines

Chandra Grahan 2026: ಗ್ರಹಣ ಕಾಲದಲ್ಲಿ ಮಾಂಸಾಹಾರ ಸೇವಿಸಬಹುದೇ? ಜ್ಯೋತಿಷ್ಯ ಮತ್ತು ವಿಜ್ಞಾನ ಹೇಳುವುದೇನು?

Chandra Grahan 2026: ಗ್ರಹಣ ಕಾಲದಲ್ಲಿ ಮಾಂಸಾಹಾರ ಸೇವಿಸಬಹುದೇ? ಜ್ಯೋತಿಷ್ಯ ಮತ್ತು ವಿಜ್ಞಾನ ಹೇಳುವುದೇನು?


ಗ್ರಹಣ ಕಾಲದಲ್ಲಿ ಮಾಂಸಾಹಾರಚಿತ್ರ ಕ್ರೆಡಿಟ್ ಮೂಲ: Pinterest

2026 ರ ಮೊದಲ ಸೂರ್ಯಗ್ರಹಣ ವರ್ಷದ ಫೆಬ್ರವರಿ 17 ರಂದು ಸಂಭವಿಸಿದ್ದು, ಇದೀಗ ಕೆಲವೇ ದಿನಗಳ ಅಂತರದಲ್ಲಿ ಇಂದು ಮೊದಲ ಚಂದ್ರಗ್ರಹಣವು ಸಂಭವಿಸಲಿದೆ. ಮಧ್ಯಾಹ್ನ 3:20ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 6:47ಕ್ಕೆ ಕೊನೆಗೊಳ್ಳಲಿದೆ. ಭಾರತದಲ್ಲಿ ಚಂದ್ರೋದಯ ಸಂಜೆ 6:22 ಕ್ಕೆ ಕಂಡುಬಂದಿದೆ. ಗ್ರಹಣವು ಸಂಜೆ 6:47 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯದಲ್ಲಿ ಮಂತ್ರ ಪಠಣ, ದಾನ-ಧರ್ಮಗಳಿಗೆ ವಿಶೇಷ ಮಹತ್ವವಿದೆ. ಆದರೆ, ಅನೇಕರಲ್ಲಿ ಕಾಡುವ ಒಂದು ದೊಡ್ಡ ಪ್ರಶ್ನೆ ಎಂದರೆ ಗ್ರಹಣದ ದಿನ ಮಾಂಸಹಾರ ಸೇವಿಸಬಹುದೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಆಧುನಿಕ ವಿಜ್ಞಾನದ ಭಿನ್ನ ದೃಷ್ಟಿಕೋನಗಳು ಇಲ್ಲಿವೆ.

ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನ:

ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಗ್ರಹಣದ ಸಮಯ ‘ಅಶುಭ ಕಾಲ’ ಅಥವಾ ‘ಸೂತಕ ಕಾಲ’ ಎಂದಾಗಿದೆ. ರಾಹು ಮತ್ತು ಕೇತುಗಳ ಪ್ರಭಾವದಿಂದ ಈ ಸಮಯದಲ್ಲಿ ಪರಿಸರದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನಂಬಿಕೆಯಿದೆ. ಮಾಂಸಾಹಾರವನ್ನು ‘ತಾಮಸಿಕ’ ಎಂದು ವರ್ಗೀಕರಿಸಲಾಗಿದೆ. ಇದು ಮನುಷ್ಯನಲ್ಲಿ ಆಲಸ್ಯ, ಅಶಾಂತಿ ಮತ್ತು ಕೋಪವನ್ನು ಪ್ರಚೋದಿಸುತ್ತದೆ. ಗ್ರಹಣದ ಅವಧಿಯಲ್ಲಿ ಮನಸ್ಸಿನ ಶಾಂತಿಗಾಗಿ ಹಣ್ಣು, ಹಾಲು ಅಥವಾ ಹಗುರವಾದ ಸಾತ್ವಿಕ ಆಹಾರವನ್ನು ಸೇವಿಸುವುದು ಅಥವಾ ಉಪವಾಸ ಇರುವುದು ಶ್ರೇಷ್ಠ ಎಂದು ಶಾಸ್ತ್ರಗಳು ಹೇಳುತ್ತವೆ.

ಚಿಕಿತ್ಸೆ ಮತ್ತು ಆರೋಗ್ಯದ ಹಿನ್ನೆಲೆ:

ಗ್ರಹಣದ ಸಮಯದಲ್ಲಿ ಮಾಂಸಾಹಾರ ತ್ಯಜಿಸಲು ಕೆಲವು ತಾರ್ಕಿಕ ಕಾರಣಗಳು ಬೇಕಾಗುತ್ತವೆ. ಗ್ರಹಣದ ವೇಳೆ ಸೂರ್ಯನ ಕಿರಣಗಳ ಕೊರತೆ ಮತ್ತು ವಾತಾವರಣದ ಬದಲಾವಣೆಯಿಂದಾಗಿ ಮನುಷ್ಯನ ಜೀರ್ಣಾಂಗ ವ್ಯೂಹವು ಸ್ವಲ್ಪ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಅತಿ ಸೂರ್ಯನ ಕಿರಣಗಳ ಅನುಪಸ್ಥಿತಿಯಲ್ಲಿ ಹೆಚ್ಚು ವೇಗವಾಗಿ ಹರಡಬಹುದು. ಮಾಂಸವು ಬೇಗನೆ ಕೆಟ್ಟು ಹೋಗುವ ಗುಣ ಹೊಂದಿರುವುದರಿಂದ, ಆರೋಗ್ಯದ ದೃಷ್ಟಿಯಿಂದ ಇದನ್ನು ತಪ್ಪಿಸುವುದು ಉತ್ತಮ ಎಂಬ ಅಭಿಪ್ರಾಯವಿದೆ.

ಆಧುನಿಕ ಕೇವಲ ವಿಜ್ಞಾನದ ಪ್ರಕಾರ, ಗ್ರಹಣವು ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯುವ ಒಂದು ನೆರಳಿನ ಆಟ. ಗ್ರಹಣದ ದಿನ ಮಾಂಸಾಹಾರ ಸೇವಿಸುವುದರಿಂದ ನೇರವಾಗಿ ದೇಹಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಬಲವಾದ ಸಾಕ್ಷ್ಯಗಳಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *