
ಆದಿತ್ಯ ಧರ್ (ಆದಿತ್ಯ ಧರ್) ನಿರ್ದೇಶನ ಮಾಡಿರುವ ‘ಧುರಂಧರ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಭಾಗದ ರೀತಿಯೇ ಈ ಸೀಕ್ವೆಲ್ ಕೂಡ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಪಾಕಿಸ್ತಾನದಲ್ಲಿ ‘ಧುರಂಧರ 2’ (ಧುರಂಧರ 2) ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಅಲ್ಲಿ ಜನರು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಏಕೆಂದರೆ, ಈ ಚಿತ್ರದ ಕಥೆ ನಡೆಯುವುದೇ ಪಾಕಿಸ್ತಾನದಲ್ಲಿ. ಈಗ ಪಾಕ್ (ಪಾಕಿಸ್ತಾನ) ಮಂದಿ ಒಂದು ಬೇಡಿಕೆ ಇಟ್ಟಿದ್ದಾರೆ. ಸಿನಿಮಾದ ಕಲೆಕ್ಷನ್ ನಲ್ಲಿ ಪಾಲು ಕೇಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಲಿಯಾರಿ ನಗರದ ಕೆಲವು ಯುವಕರು ಮಾಧ್ಯಮವೊಂದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ‘ಲಿಯಾರಿಗೆ 2 ಅಥವಾ 3 ಕೋಟಿ ರೂಪಾಯಿ ಸಿಗಬೇಕು. ಇಲ್ಲಿ ರಸ್ತೆ ಸರಿ ಮಾಡಲು ಹಣ ಬೇಕು’ ಎಂದು ಯುವಕನೊಬ್ಬ ಹೇಳಿದ್ದಾನೆ. ಆದರೆ ಇನ್ನೊಬ್ಬ ಯುವಕ 500 ರೂಪಾಯಿ ಬೇಕು ಎಂದಿದ್ದಾನೆ.
‘ಧುರಂಧರ 2 ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದರೆ ಲಿಯಾರಿ ಜನರಿಗೆ 500 ಕೋಟಿ ರೂಪಾಯಿ ನೀಡಿ. ಅರ್ಧ ಕಲೆಕ್ಷನ್ ಆದಿತ್ಯ ಧರ್ ಇಟ್ಟುಕೊಳ್ಳಲಿ. ಅವರು ನಮಗೆ ಕೊಡುವ ಹಣದಲ್ಲಿ ನಮ್ಮ ರಸ್ತೆ ನಿರ್ಮಾಣ ಆಗಲಿ’ ಎಂದು ಲಿಯಾರಿ ಯುವಕ ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಆದಿತ್ಯ ಧರ್ 1000 ಕೋಟಿ ಗಳಿಸುತ್ತಾರೆ ಎಂದು ಪಾಕಿಸ್ತಾನಿ ದೇಲುಲು ಆವಾಮ್ ಹೇಳುತ್ತಿದೆ #ಧುರಂಧರ್2’ದಿ ರಿವೆಂಜ್ ಅವರು 500 ಕೋಟಿಯನ್ನು ಲಿಯಾರಿಗೆ ಹಿಂತಿರುಗಿಸಬೇಕು ಏಕೆಂದರೆ ನಮಗೆ ಇಲ್ಲಿ ಉತ್ತಮ ರಸ್ತೆಗಳಿಲ್ಲ
pic.twitter.com/kBdtGYvPla
— ಚೋಟಾ ಡಾನ್ (@choga_don) ಮಾರ್ಚ್ 27, 2026
ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್‌ಪಾಲ್, ರಾಕೇಶ್ ಬೇಡಿ, ಆರ್. ಮಾಧವನ್ ಮುಂತಾದವರು ‘ಧುರಂಧರ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಲಿಯಾರಿ ಪಟ್ಟಣದಲ್ಲಿ ಇದ್ದ ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪಾಕಿಸ್ತಾನದ ಮಂದಿ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ‘ಧುರಂಧರ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಅಮೀರ್ ಖಾನ್
ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ‘ಧುರಂಧರ 2’ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನುಳಿದ ಕಡೆಗಳಲ್ಲಿ ಈ ಸಿನಿಮಾ ತೆರೆಕಂಡು ಭರ್ಜರಿ ಕಮಾಯಿ ಮಾಡುತ್ತಿದೆ. ಭಾರತದ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಒಟ್ಟು 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಎರಡನೇ ವೀಕೆಂಡ್‌ನಲ್ಲಿ ಈ ಸಿನಿಮಾದ ಸಖತ್ ಹೆಚ್ಚಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

