ಗಣಿತ (ಗಣಿತ) ಎಂದರೆ ಹೆಚ್ಚಿನವರಿಗೆ ಕಬ್ಬಿಣದ ಕಡಲೆಯಲ್ಲಿ ಆಸಕ್ತಿ, ಈ ವಿಷಯದ ಬಗ್ಗೆ ತೋರಿಸುವವರು ಕಡಿಮೆಯೇ. ಆದರೆ ಸರಿಯಾಗಿ ಗಮನಿಸಿದಾಗ ಈ ಗಣಿತ ಕಲಿಯುವುದು ಮೋಜಿನ ಸಂಗತಿ, ಗಣಿತದ ಸೂತ್ರ, ಲೆಕ್ಕವನ್ನು ಬಿಡಿಸುವ ವಸ್ತು ಬಹಳ ಆಸಕ್ತಿದಾಯಕವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮ್ಯಾಜಿಕ್ ಸ್ಕ್ವೇರ್ ಗಳಿಗೆ (ಮ್ಯಾಜಿಕ್ ಸ್ಕ್ವೇರ್) ಸಂಬಂಧ ಪಟ್ಟ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಮೋಜಿನ ಚೌಕದಲ್ಲಿ 1 ರಿಂದ 9 ಸಂಖ್ಯೆಯನ್ನು ಬರೆಯಲಾಗಿದೆ. ಪ್ರತಿ ಅಡ್ಡ ಹಾಗೂ ಲಂಬವಾಗಿ ಬರೆದ ಸಂಖ್ಯೆಯನ್ನು ಕೂಡಿಸಿದಾಗ ಉತ್ತರವು 15 ಎಂದು ಬರಬೇಕು. ಇಂತಹ ಮೋಜಿನ ಗಣಿತದ ಎಣ್ಣೆ ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.
Eliya Mohammed ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ಮ್ಯಾಜಿಕ್ ಸ್ಕ್ವೇರ್ ಬಿಡಿಸಲು ತಲೆ ಉಪಯೋಗಿಸಿದ್ದಾಳೆ. ಈ ಪುಟ್ಟ ಹುಡುಗಿಯ ಮುಂದಿದ್ದ ಸವಾಲು, ಈ ಮೋಜಿನ ಚೌಕದಲ್ಲಿ ಬರೆಯಲಾದ ಸಂಖ್ಯೆಗಳನ್ನು ಅಡ್ಡ ಹಾಗೂ ಲಂಬವಾಗಿ ಕೂಡಿಸಿದಾಗ ಉತ್ತರವು ಹದಿನೈದು ಬರಬೇಕು. ಹೀಗಾಗಿ ಈ ಮೋಜಿನ ಸ್ಕ್ವೇರ್ ಬಿಡಿಸಲು ಈ ಜಾಣೆ ಹುಡುಗಿಯೂ ಕೆಲವು ಟ್ರಿಕ್ಸ್ ಬಳಸಿದ್ದಾಳೆ.
ಮ್ಯಾಜಿಕ್ ಸ್ಕ್ವೇರ್ ವಿಡಿಯೋ ಇಲ್ಲಿದೆ
ಮ್ಯಾಜಿಕ್ ಸ್ಕ್ವೇರ್ ಬಿಡಿಸುವ ವಿಧಾನ ಇಲ್ಲಿದೆ
- ಮೊದಲ ಮೋಜಿನ ಚೌಕಗಳಲ್ಲಿ ಒಂದರಿಂದ ಒಂಭತ್ತರ ಸಂಖ್ಯೆಯನ್ನು ಕ್ರಾಸ್ ಆಗಿ ಬರೆಯಬೇಕು.
- ಈ ಚೌಕದಲ್ಲಿರುವ ಹೆಚ್ಚುವರಿ ಪೆಟ್ಟಿಗೆಗಳನ್ನು ಅಳಿಸಿ, ಅದರಲ್ಲಿರುವ ಸಂಖ್ಯೆಯನ್ನು ಖಾಲಿಯಿರುವ ಚೌಕದಲ್ಲಿ ಭರ್ತಿ ಮಾಡಬೇಕು.
- ಈ ರೀತಿ ಬರೆಯುವಾಗ ಮೋಜಿನ ಗಣಿತ ಆಟದಲ್ಲಿ ಚೌಕವು ಒಂದರಿಂದ ಒಂಬತ್ತು ಸಂಖ್ಯೆಗಳಿಂದ ಭರ್ತಿಯಾಗುತ್ತದೆ.
- ಚೌಕದಲ್ಲಿ ಭರ್ತಿ ಮಾಡಲಾದ ಅಡ್ಡ ಸಾಲಿನ ಸಂಖ್ಯೆ 276, 951 ಹಾಗೂ 438 ಆಗಿದ್ದು, ಲಂಬವಾಗಿ 295,753 ಹಾಗೂ 658 ಸಂಖ್ಯೆಯನ್ನು ಹೊಂದಿದೆ.
- ಕೊನೆಗೆ ಈ ಚೌಕದ ಅಡ್ಡ ಹಾಗೂ ಲಂಬವಾಗಿ ಪ್ರತಿ ಸಾಲಿನ ಸಂಖ್ಯೆಯನ್ನು ಕೂಡಿಸಿದಾಗ ಉತ್ತರವು ಹದಿನೈದು ಬರುತ್ತದೆ.
ಇದನ್ನೂ ಓದಿ: ಈ ಚಿತ್ರದಲ್ಲಿ ಕಲ್ಲುಗಳ ನಡುವೆ ಅಡಗಿದೆ ಕಪ್ಪೆ, ನೀವು ಈ ಉಭಯ ಜೀವಿಯನ್ನು ಹುಡುಕಬಲ್ಲಿರಿ
ಈ ವಿಡಿಯೋವನ್ನು ಇದನ್ನು ವೀಕ್ಷಿಸಿದ್ದು, ಒಬ್ಬ ಬಳಕೆದಾರ ಅದ್ಭುತವಾಗಿದೆ. ಇತರರು ಇದು ಮ್ಯಾಜಿಕ್ ಬಾಕ್ಸ್ ಪವರ್ ಈ ಎಂದು ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು ಶಿಕ್ಷಣವು ಅತ್ಯಗತ್ಯ ಆದರೆ ಜ್ಞಾನವು ಶಕ್ತಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ