Headlines

ಕಪ್ಪಾದ ತಾಮ್ರದ ಪಾತ್ರೆಗಳೂ 10 ನಿಮಿಷದಲ್ಲಿ ಫುಲ್ ಶೈನ್! ಪಾತ್ರೆ ವ್ಯಾಪಾರಿ ಹಂಚಿಕೊಂಡ ಸೀಕ್ರೆಟ್ ಟಿಪ್ಸ್

ಕಪ್ಪಾದ ತಾಮ್ರದ ಪಾತ್ರೆಗಳೂ 10 ನಿಮಿಷದಲ್ಲಿ ಫುಲ್ ಶೈನ್! ಪಾತ್ರೆ ವ್ಯಾಪಾರಿ ಹಂಚಿಕೊಂಡ ಸೀಕ್ರೆಟ್ ಟಿಪ್ಸ್

ಕಪ್ಪಾದ ತಾಮ್ರದ ಪಾತ್ರೆಗಳೂ 10 ನಿಮಿಷದಲ್ಲಿ ಫುಲ್ ಶೈನ್! ಪಾತ್ರೆ ವ್ಯಾಪಾರಿ ಹಂಚಿಕೊಂಡ ಸೀಕ್ರೆಟ್ ಟಿಪ್ಸ್

Clean copper and brass utensils: ತಾಮ್ರ, ಹಿತ್ತಾಳೆಯ ಪಾತ್ರೆಗಳು ಕಪ್ಪಾಗಿದ್ದರೆ ಅವುಗಳನ್ನು ಉಜ್ಜಿ ಸುಸ್ತಾಗಬೇಡಿ. ಅಡುಗೆಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಕೇವಲ 15 ನಿಮಿಷಗಳಲ್ಲಿ ನಿಮ್ಮ ಹಳೆಯ ಪಾತ್ರೆಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುವ ಅದ್ಭುತ ಟಿಪ್ಸ್ ಇಲ್ಲಿದೆ.

ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳು ಹಳೆಯದಾದಂತೆಲ್ಲಾ ಅವುಗಳ ಹೊಳಪು ಕಡಿಮೆಯಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಇವುಗಳನ್ನು ಶುಚಿಗೊಳಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಡಿಶ್‌ವಾಶರ್ ಅಥವಾ ಕ್ಲೀನರ್‌ಗಳನ್ನು ಬಳಸಿದರೂ ಮೊದಲಿನ ಅಪ್ಪಟ ಹೊಳಪು ಬರುವುದು ಕಷ್ಟ. ಆದರೆ ಪಾತ್ರೆ ವ್ಯಾಪಾರಿಯೊಬ್ಬರು ನಿಮ್ಮ ಅಡುಗೆಮನೆಯಲ್ಲಿರುವ ಕೆಲವೇ ಪದಾರ್ಥ ಬಳಸಿ ಯಾವುದೇ ಹೆಚ್ಚಿನ ಶ್ರಮವಿಲ್ಲದೆ ಈ ಪಾತ್ರೆಗಳನ್ನು ಹೊಸದರಂತೆ ಹೊಳೆಯಲು ಸುಲಭ ಟಿಪ್ಸ್ ನೀಡಿದ್ದಾರೆ.

ಈ ಪೇಸ್ಟ್ ತಯಾರಿಸಲು ಮಾರುಕಟ್ಟೆಯಿಂದ ಯಾವುದೇ ಹೊಸ ಪದಾರ್ಥ ತರುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿರುವುದನ್ನೇ ಬಳಸಿ.2-3 ಚಮಚ ಗೋಧಿ ಹಿಟ್ಟು.ಅರ್ಧ ಚಮಚ ಅರಿಶಿನ.ಒಂದು ಚಮಚ ಉಪ್ಪು.ಒಂದು ತಾಜಾ ನಿಂಬೆಹಣ್ಣು.

ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು, ಅರಿಶಿನ ಮತ್ತು ಉಪ್ಪನ್ನು ಹಾಕಿಕೊಳ್ಳಿ. ನಂತರ ನಿಂಬೆ ರಸವನ್ನು ಅದಕ್ಕೆ ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಪೇಸ್ಟ್ ಹದಕ್ಕೆ ಬರಲು ಅಗತ್ಯವಿದ್ದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ.

ಸಿದ್ಧವಾದ ಈ ಪೇಸ್ಟ್ ಅನ್ನು ಕಪ್ಪಾಗಿರುವ ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳ ಮೇಲೆ ಪೂರ್ತಿಯಾಗಿ ಹಚ್ಚಿ. ಇದನ್ನು ಸುಮಾರು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.

ನಿಂಬೆಹಣ್ಣಿನಲ್ಲಿರುವ ಸಿಟ್ರಿಕ್ ಆಸಿಡ್ ಪಾತ್ರೆಯ ಮೇಲಿರುವ ಕಪ್ಪನ್ನು ಹೋಗಲಾಡಿಸಲು ಬಹಳ ಸಹಕಾರಿ. ಉಪ್ಪು ಮತ್ತು ಗೋಧಿ ಹಿಟ್ಟಿನ ಮಿಶ್ರಣವು ಪಾತ್ರೆಯ ಮೇಲಿರುವ ಕೊಳೆಯನ್ನು ಸಡಿಲಗೊಳಿಸುತ್ತದೆ. ಈ ನೈಸರ್ಗಿಕ ವಿಧಾನದಿಂದ ಪಾತ್ರೆಯ ಮೇಲ್ಪದರಕ್ಕಾಗಲೀ ಅಥವಾ ನಿಮ್ಮ ಕೈಗಳಿಗಾಗಲೀ ಯಾವುದೇ ಹಾನಿಯಾಗಲ್ಲ. ಕೆಮಿಕಲ್‌ನ ಭಯವಿರುವುದಿಲ್ಲ.

15 ನಿಮಿಷಗಳ ನಂತರ ಪಾತ್ರೆಯನ್ನು ಒಂದು ಬಟ್ಟೆಯಿಂದ ಒರೆಸಿ ಅಥವಾ ನೀರಿನಿಂದ ತೊಳೆದರೆ ನಿಮ್ಮ ಹಳೆಯ ಕಪ್ಪು ಪಾತ್ರೆಗಳು ಮತ್ತೆ ಹೊಸದರಂತೆ ಥಳಥಳನೆ ಹೊಳೆಯುವುದನ್ನು ನೀವು ನೋಡಬಹುದು. ಈ ವಿಧಾನವು ಸಂಪೂರ್ಣ ಸುರಕ್ಷಿತ ಮತ್ತು ಅತ್ಯಂತ ಪರಿಣಾಮಕಾರಿ.

ನಿಮ್ಮ ಪಾತ್ರೆಗಳು ದೀರ್ಘಕಾಲ ಹೊಳೆಯುತ್ತಿರಲು ಕಾಲಕಾಲಕ್ಕೆ ಈ ಮಿಶ್ರಣವನ್ನು ಬಳಸಿ ಸ್ವಚ್ಛಗೊಳಿಸುತ್ತಿರಿ. ಇದರಿಂದ ಪಾತ್ರೆಗಳು ಹಳೆಯದಾಗಿ ಕಾಣುವುದನ್ನು ತಪ್ಪಿಸಬಹುದು.

Source link

Leave a Reply

Your email address will not be published. Required fields are marked *