ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಬೆಂಗಳೂರು, ರಾಮನಗರ, ಕನಕಪುರ ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಭಕ್ತರು ಕಾಲ್ನಡಿಗೆಯ ಮೂಲಕ ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಬೆಂಗಳೂರು, ಮಾಗಡಿ, ರಾಮನಗರ, ಚನ್ನಪಟ್ಟಣ, ಮದ್ದೂರು ಹಾಗೂ ಮಳವಳ್ಳಿಯಿಂದ ಸಾವಿರಾರು ಭಕ್ತರು ಮಾದಪ್ಪನಿಗೆ ಹರಕೆ ತೀರಿಸಲು ಪಾದಯಾತ್ರೆ ಕೈಗೊಂಡಿದ್ದಾರೆ. ಗಡಿಯಂಚಿನ ಕಾವೇರಿ ನದಿ ತೀರವು ಭಕ್ತರಿಂದ ತುಂಬಿ ತುಳುಕುತ್ತಿದೆ.

ಮಹಾಶಿವರಾತ್ರಿ ಉತ್ಸವಕ್ಕಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರು ಕನಕಪುರ ತಾಲೂಕಿನ ಸಂಗಮದ ಬಳಿ ಕಾವೇರಿ ನದಿಯನ್ನು ಅಪಾಯಕಾರಿಯಾಗಿ ದಾಟುತ್ತಿದ್ದಾರೆ. ನೀರಿನ ರಭಸವಿದ್ದರೂ ಹಗ್ಗದ ಸಹಾಯದಿಂದ ನದಿ ದಾಟುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ.

ನದಿಯನ್ನು ದಾಟಿದ ನಂತರ ಭಕ್ತರು ದಟ್ಟ ಅರಣ್ಯದ ಮೂಲಕವೇ ಸಾಗಬೇಕು. ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದರೂ, ಮಲೆ ಮಹದೇಶ್ವರನ ಮೇಲಿನ ಭಕ್ತಿಯ ಮುಂದೆ ಭಕ್ತರಿಗೆ ಕಾಡುಪ್ರಾಣಿಗಳ ಭಯವಿಲ್ಲದಂತಾಗಿದೆ.

ಕಡಿದಾದ ಬೆಟ್ಟಗಳು ಹಾಗೂ ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಿರುವ ಭಕ್ತರ ಸಂಕಲ್ಪ ಮೆಚ್ಚುವಂತದ್ದು. ಮಕ್ಕಳು, ವೃದ್ಧರು ಎನ್ನದೆ ಎಲ್ಲರೂ ಮಾದಪ್ಪ’ನ ಜಯಘೋಷ ಹಾಕುತ್ತಾ ಸಾಗುತ್ತಿದ್ದಾರೆ.

ಮಾದಪ್ಪನ ಭಕ್ತರು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಚಿತ್ರವಿರುವ ಭಾವುಟ ಹಿಡಿದು ಪಾದಯಾತ್ರೆ ನಡೆಸಿರುವುದು ಗಮನ ಸೆಳೆಯಿತು ದಾರಿಯುದ್ಧಕ್ಕೂ ರಾಜರತ್ನ ಪುನೀತ್ ಹಾಡು ಹೇಳುತ್ತ ಸಾಗಿದ ಭಕ್ತರು

ಕಾಡಿನ ಹಾದಿಯಲ್ಲಿ ವನ್ಯಜೀವಿಗಳ ದಾಳಿಯಾಗುವ ಸಂಭವವಿರುವುದರಿಂದ, ಅರಣ್ಯ ಇಲಾಖೆಯು ಭಕ್ತರಿಗೆ ವಿಶೇಷ ಸೂಚನೆ ನೀಡಿದೆ. ಕಾಡಿನೊಳಗೆ ಯಾರೂ ಒಬ್ಬೊಬ್ಬರೇ ಹೋಗಬಾರದು, ಬದಲಾಗಿ ಗುಂಪು ಗುಂಪಾಗಿ ಸಾಗಬೇಕೆಂದು ಎಚ್ಚರಿಕೆ ನೀಡಲಾಗಿದೆ.

Source link
Photos: ಮಹಾಶಿವರಾತ್ರಿ ಹಿನ್ನಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ