ಮಹಾತ್ಮ ಗಾಂಧೀಜಿ ಅಂಕ ಪಟ್ಟಿಚಿತ್ರ ಕ್ರೆಡಿಟ್ ಮೂಲ: Twitter/ Pinterest
ಓದೋದ್ರಲ್ಲಿ ಎಲ್ಲಾ ಮಕ್ಕಳು (ಮಕ್ಕಳು) ಬುದ್ಧಿವಂತರಾಗಲಿಲ್ಲ. ಕೆಲ ಮಕ್ಕಳು ನೂರಕ್ಕೆ ನೂರು ಮಾರ್ಕ್ ತೆಗೆದುಕೊಂಡರೆ, ಇನ್ನು ಕೆಲವರು ಜಸ್ಟ್ ಪಾಸ್ ಆಗೋದು ಕಷ್ಟಕ್ಕೆ. ರಿಸಲ್ಟ್ ಬರುವ ದಿನವಂತೂ ಕೆಲ ಮಕ್ಕಳಿಗೆ ಪಾಸ್ ಆಗುತ್ತೇವೋ ಇಲ್ವೋ ಅನ್ನೋ ಭಯ ಇರುತ್ತದೆ. ಇದೀಗ ಗಾಂಧೀಜಿಯವರ ಹತ್ತನೇ ತರಗತಿಯ ಅಂಕ ಪಟ್ಟಿ ವೈರಲ್ ಆಗುತ್ತಿದೆ. ಎಷ್ಟೋ ಜನರಿಗೆ ಮಹಾತ್ಮ ಗಾಂಧೀಜಿಯವರು (ಮಹಾತ್ಮ ಗಾಂಧಿಜಿ) ಎಷ್ಟು ಅಂಕ ಪಡೆದಿದ್ದರು ಎಂಬ ಕುತೂಹಲವಿರುವುದು ಸಹಜ. ಹೌದು, ಮಹಾತ್ಮ ಗಾಂಧೀಜಿಯವರು ಹತ್ತನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 247 ಗಳಿಸಿದ್ದರು ಅಂದ್ರೆ ನಿಮಗೆ ಶಾಕ್ ಆಗಬಹುದು. ಅಂದಹಾಗೆ, ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ
ಕಾಮನ್ ಮ್ಯಾನ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಅಂಕ ಪಟ್ಟಿಯನ್ನು ಕಾಣಬಹುದು. 1887 ರಲ್ಲಿ ರಾಜ್ ಕೋಟಟ್ನ ಆಲ್ಫ್ರೆಡ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾಗ ಹತ್ತನೇ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ನೀವಿಲ್ಲಿ ಗಮನಿಸಬಹುದು. ಈ ಅಂಕಪಟ್ಟಿಯ ಪ್ರಕಾರ, ಮಹಾತ್ಮ ಗಾಂಧಿ ಅವರು ಇಂಗ್ಲಿಷ್ ವಿಷಯದಲ್ಲಿ 89 ಅಂಕಗಳನ್ನು ಗಳಿಸಿದರೆ, ದ್ವಿತೀಯ ಭಾಷೆಯಲ್ಲಿ 45 ಅಂಕಗಳು ಮತ್ತು ಗಣಿತದಲ್ಲಿ 59 ಅಂಕಗಳು, ವಿಜ್ಞಾನದಲ್ಲಿ 34 ಹಾಗೂ ಇತಿಹಾಸದಲ್ಲಿ 20 ಅಂಕಗಳನ್ನು ಪಡೆದಿರುವ ನೀವಿಲ್ಲಿ ನೋಡಬಹುದು. ಅಂದರೆ 625 ರಲ್ಲಿ ಕೇವಲ 247.5 ಅಂಕಗಳನ್ನು ಕಾಣಬಹುದು. ಸರಾಸರಿ ವಿದ್ಯಾರ್ಥಿ ಪಡೆದ ಅವರು ಶಾಲಾ ಅಂತಿಮ ಪರೀಕ್ಷೆಯಲ್ಲಿ 800 ವಿದ್ಯಾರ್ಥಿಗಳಲ್ಲಿ 404ನೇ ರ್ಯಾಂಕ್‌ಗಳು ಎನ್ನುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ.
ಪೋಸ್ಟ್ ವೈರಲ್ ಇಲ್ಲಿದೆ
ಮಹಾತ್ಮಾ ಗಾಂಧಿ ಅಂತಹ ವಿದ್ವಾಂಸರಾಗಿದ್ದರು!
ಅವರು 1887 ರಲ್ಲಿ ತಮ್ಮ ಹತ್ತನೇ ಪರೀಕ್ಷೆಯಲ್ಲಿ 625 ರಲ್ಲಿ 247.5 ಅಂಕಗಳನ್ನು ಆಲ್ಫ್ರೆಡ್ ಹೈಸ್ಕೂಲ್ನಿಂದ ಪಡೆದರು, ಅದು 40% ಕ್ಕಿಂತ ಕಡಿಮೆಯಾಗಿದೆ.
ಅವರು 800 ವಿದ್ಯಾರ್ಥಿಗಳಲ್ಲಿ 404 ನೇ ಸ್ಥಾನದಲ್ಲಿದ್ದರು
ಇಂಗ್ಲಿಷ್ – 200 ರಲ್ಲಿ 89 ಗುಜರಾತಿ – 100 ರಲ್ಲಿ 45.5 ಗಣಿತ – 175 ರಲ್ಲಿ 59… pic.twitter.com/YVQilzhVIG
— ಕಮನ್ ಮ್ಯಾನ್ (@CommanMan777589) ಏಪ್ರಿಲ್ 15, 2026
ಇದನ್ನೂ ಓದಿ: ಪುಟಾಣಿ ತೊಡಲು ನುಡಿಯಲ್ಲಿ ಬೈಯುತ್ತಿದ್ದಾರೆ ಮುಗುಳುನಗೆ ಬೀರಿದ ತಂದೆ
ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಜ್ಞಾನ ಮಾತ್ರ ಕಡಿಮೆ .ಆ ಸಮಯದಲ್ಲಿ ಬೆರಳಣಿಕೆಯಷ್ಟು ಜನರು ಶಿಕ್ಷಣ ಪಡೆದಿದ್ದರು ಮತ್ತು ಶಾಲೆಗಳ ಬಗ್ಗೆ ತಿಳಿದಿರಲಿಲ್ಲ .ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳು ತುಂಬಾ ಸಾಮಾನ್ಯವಾದಾಗ ಅವಿದ್ಯಾವಂತರು ಸಹ ಮುಖ್ಯಮಂತ್ರಿ ಮತ್ತು ಪ್ರಧಾನಿ ಸ್ಥಾನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಇತರರು, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಸಾವರ್ಕರ್ ಅವರ ಮಾರ್ಕ್‌ಶೀಟ್ ಅನ್ನು ದಯವಿಟ್ಟು ಹಂಚಿಕೊಳ್ಳಬಹುದೇ? ಎಂದು ಕೇಳಿದ್ದಾರೆ. ಮತ್ತೊಬ್ಬರು, ಇದು ನಿಜವೇ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ