Headlines

ಯಶ್ ಚಿತ್ರಕ್ಕೆ ಕೌಂಟರ್ ಕೊಡೋಕೆ ಬಂತು ಮತ್ತೊಂದು ‘ರಾಮಾಯಣ’; ರಾಮನ ಪಾತ್ರದಲ್ಲಿ ಸ್ಟಾರ್ ಹೀರೋ

ಯಶ್ ಚಿತ್ರಕ್ಕೆ ಕೌಂಟರ್ ಕೊಡೋಕೆ ಬಂತು ಮತ್ತೊಂದು ‘ರಾಮಾಯಣ’; ರಾಮನ ಪಾತ್ರದಲ್ಲಿ ಸ್ಟಾರ್ ಹೀರೋ


ರಣಬೀರ್ ಕಪೂರ್ (ರಣಬೀರ್ ಕಪೂರ್) ನಟನೆಯ ‘ರಾಮಾಯಣ’ ಸಿನಿಮಾ ಈ ವರ್ಷ ದೀಪಾವಳಿಗೆ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾಮಾಯಣದ ಮೇಲೆ ಸಾಕಷ್ಟು ಸಿನಿಮಾಗಳು ಬಂದು ಹೋಗಿವೆ. ಈಗ ಈ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆ ಆಗುತ್ತಿದೆ. ‘ರಾಮಾಯಣ’ ಆಧರಿಸಿ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ! ಮಹೇಶ್ ಬಾಬು ಇದಕ್ಕೆ ಹೀರೋ!

ರಾಜಮೌಳಿ ಅವರು ಮಹೇಶ್ ಬಾಬು ಜೊತೆ ‘ವಾರಣಾಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ.ಈ ಬಗ್ಗೆ ಮೊದಲೇ ಘೋಷಣೆ ಆಗಿದೆ. ಆದರೆ, ಚಿತ್ರದ ಕಥೆ ಯಾವ ರೀತಿ ಇರಲಿದೆ ಎಂಬ ಸುಳಿವನ್ನು ನಿರ್ದೇಶಕರು ನೀಡಲಿಲ್ಲ. ಈಗ ಮಹೇಶ್ ಬಾಬು ಅವರು ಈ ಬಗ್ಗೆ ದೊಡ್ಡ ವಿಷಯ ರಿವೀಲ್ ಮಾಡಿದ್ದಾರೆ. ‘ನಾನು ರಾಮನ ಪಾತ್ರ ಮಾಡುತ್ತಿದ್ದೇನೆ’ ಎಂದು ಮಹೇಶ್ ಬಾಬು ಒಪ್ಪಿಕೊಂಡಿದ್ದಾರೆ.

‘ವಾರಣಾಸಿ’ ಚಿತ್ರಕ್ಕಾಗಿ ಮಹೇಶ್ ಬಾಬು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ.ಕೇವಲ ಎರಡೇ ಎರಡು ಶಾಟ್ ಗೋಸ್ಕರ್ ಮಹೇಶ್ ಬಾಬು ಬರೋಬ್ಬರಿ ಆರು ತಿಂಗಳ ಟ್ರೇನಿಂಗ್ ಪಡೆದಿದ್ದರಂತೆ. ‘ನಾನು ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಅದಕ್ಕಾಗಿ ಕೆಲವು ಭಂಗಿಗಳನ್ನು ಕಲಿಯಬೇಕಿತ್ತು. ಆಧುನಿಕ ಪಾತ್ರಗಳಲ್ಲಿ ನಿಲ್ಲಲು ಆಗೋದಿಲ್ಲ. ಆ ತರಬೇತಿಯ ಭಾಗವಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.

‘ಜರ್ಮನಿಯಲ್ಲಿ ನಾನು ಕುಟುಂಬದ ಜೊತೆ ಪ್ರವಾಸಕ್ಕೆ ತೆರಳಿದ್ದೆ. ಈ ವೇಳೆ ಗೊತ್ತಿಲ್ಲದೆ ಒಂದು ಭಂಗಿಯಲ್ಲಿ ನಿಲ್ಲುತ್ತಿತ್ತು. ವಿದೇಶಿಯರು ನನ್ನನ್ನು ನೋಡಿ, ಈ ವ್ಯಕ್ತಿಗೆ ಏನಾಗಿದೆ ಎಂದುಕೊಳ್ಳಬಹುದು. ಆದರೆ, ಈಸಿದ್ಧತೆ ಶೂಟಿಂಗ್ ನಲ್ಲಿ ತುಂಬಾನೇ ಸಹಕಾರಿ ಆಯಿತು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವೇದಿಕೆ ಮೇಲೆ ರ್ಯಾಂಪ್ ವಾಕ್ ಮಾಡಿದ ಮಹೇಶ್ ಬಾಬು ಮಗಳು ಸಿತಾರಾ

ಮಹೇಶ್ ಬಾಬು ಅವರು ಕಳರಿಪಯಟ್ಟು ರೀತಿಯ ಕಲೆಯನ್ನು ಕಲಿತಿದ್ದಾರೆ. ಆರು ತಿಂಗಳಲ್ಲಿ ಅವರು ಕಲಿತ ವಿಷಯಗಳು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ‘ನಾನು ನಿಲ್ಲೋದು, ಕುಳಿತುಕೊಳ್ಳೋದು, ಎಲ್ಲವೂ ಬದಲಾಗಿದೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ. ಈ ಸಿನಿಮಾ ಯಾವ ರೀತಿ ಇರುತ್ತದೆ ಎಂಬ ಕುತೂಹಲ ಮೂಡಿದೆ.

‘ಆರ್ ಆರ್ ಆರ್’ ಸಿನಿಮಾದಲ್ಲಿ ಬರೋ ರಾಮ್ ಚರಣ್ ಪಾತ್ರ ‘ರಾಮಾಯಣ’ದ ರಾಮನ ಪಾತ್ರದಿಂದ ಸ್ಫೂರ್ತಿ ಪಡೆದಿದೆ ಎಂದು ಅವರು ಈ ಮೊದಲು ಹೇಳಿದ್ದರು. ಪೃಥ್ವಿರಾಜ್ ಅವರು ಕುಂಭ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *