Headlines

Krishna ಕೊನೆ ಆಸೆ ಈಡೇರಿಸಲು ಶರ್ಟ್ ಬಿಚ್ಚಲಿದ್ದಾರೆ ಮಹೇಶ್ ಬಾಬು.. ಮೊದಲ ಬಾರಿ ಪೌರಾಣಿಕ ಪಾತ್ರದಲ್ಲಿ ಪ್ರಿನ್ಸ್! | Mahesh Babu Shirtless As Lord Rama In Rajamoulis Next Film Gvd

ಗ್ಲೋಬ್ ಟ್ರಾಟರ್ ಈವೆಂಟ್‌ನಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಎಂಟ್ರಿ ತುಂಬಾ ವಿಭಿನ್ನವಾಗಿತ್ತು. ಟೀಸರ್‌ನಲ್ಲಿ ಬಂದಂತೆ, ಅಲ್ಲಿನ ಒಂದು ರಾಂಪ್ ಮೇಲೆ ಎತ್ತಿನ ಮೇಲೆ ಕುಳಿತು, ತ್ರಿಶೂಲ ಹಿಡಿದು ಮಹೇಶ್ ಬಾಬು ಎಂಟ್ರಿ ಕೊಟ್ಟರು. ಈ ದೃಶ್ಯ ನೋಡಿ ಅಭಿಮಾನಿಗಳು ಫುಲ್ ಖುಷ್ ಆದರು. ಈ ಎಂಟ್ರಿ ಬಗ್ಗೆ ಮಹೇಶ್ ಬಾಬು ಮಾತನಾಡುತ್ತಾ, ”ತುಂಬಾ ದಿನಗಳ ನಂತರ ಹೊರಗೆ ಬಂದಿದ್ದೇನೆ. ತುಂಬಾ ಹೊಸದಾಗಿ ಅನಿಸುತ್ತಿದೆ. ಸ್ಟೇಜ್ ಮೇಲೆ ಸುಮ್ಮನೆ ನಡೆದು ಬರುತ್ತೇನೆ ಎಂದೆ, ರಾಜಮೌಳಿ ಒಪ್ಪಲಿಲ್ಲ. ಸಿಂಪಲ್ ಆಗಿ ನೀಲಿ ಶರ್ಟ್ ಹಾಕಿಕೊಂಡು ಬರುತ್ತೇನೆ ಎಂದೆ, ಅದಕ್ಕೂ ಆಗಲ್ಲ ಅಂದರು. ನೋಡಿದ್ರಲ್ಲಾ ಹೇಗೆ ಸೆಟ್ ಮಾಡಿದ್ದಾರೆ. ಏನಿದು ಶರ್ಟ್‌ಗೆ ಗುಂಡಿಗಳೇ ಇಲ್ಲ, ಎರಡು ಮೂರು ಬಟನ್ ಕೊಡಿ ಅಂದೆ. ಆಗಲ್ಲ, ಅದೇ ಸ್ಟೈಲ್ ಅಂದರು. ಮುಂದೆ ಶರ್ಟ್ ಇಲ್ಲದೆ ಬರಲು ಹೇಳುತ್ತಾರೇನೋ, ನೋಡಿದರೆ ಅದೇ ಆಗುವ ಹಾಗೆ ಕಾಣುತ್ತಿದೆ” ಎಂದು ಮಹೇಶ್ ಹೇಳಿದರು. ಸೂಪರ್‌ಸ್ಟಾರ್ ಮಾತುಗಳನ್ನು ನೋಡಿದರೆ, ಈ ಸಿನಿಮಾದಲ್ಲಿ ಮಹೇಶ್ ಬಾಬು ಮೊದಲ ಬಾರಿಗೆ ಶರ್ಟ್ ಇಲ್ಲದೆ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುವುದರಿಂದ, ಆಗ ಶರ್ಟ್ ಇಲ್ಲದೆ ಮಹೇಶ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸೀನ್‌ಗಾಗಿ ಮಹೇಶ್ ಸಿಕ್ಸ್ ಪ್ಯಾಕ್ ಮಾಡಿದ್ದಾರೋ ಇಲ್ಲವೋ ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *