
ಸಾಮಾನ್ಯವಾಗಿ ಇಲ್ಲಿ ಭಕ್ತರು ತಮ್ಮ ಸ್ವಂತ ಮನೆ ನಿರ್ಮಾಣದ ಕನಸು ಹೊತ್ತು ಬರುತ್ತಾರೆ. ಕಾರ್ಣೀಕ ನಡೆಯುವ ಸ್ಥಳದಲ್ಲಿ ಸಿಗುವ ಸಣ್ಣ ಸಣ್ಣ ಕಲ್ಲುಗಳನ್ನು ಒಂದರ ಮೇಲೊಂದು ಜೋಡಿಸಿ, ಚಿಕ್ಕದಾದ ಮನೆಯ ಆಕೃತಿ ನಿರ್ಮಿಸುತ್ತಾರೆ. ಹೀಗೆ ಮಾಡಿದರೆ ಶೀಘ್ರದಲ್ಲೇ ಸ್ವಂತ ಮನೆ ಕಟ್ಟುವ ಯೋಗ ಕೂಡಿಬರುತ್ತದೆ ಎಂಬುದು ಪ್ರತೀತಿ. ಆದರೆ, ಈ ಬಾರಿ ಮನೆಗಿಂತಲೂ ಮದುವೆಗಾಗಿ ಬೇಡಿಕೊಂಡವರ ಸಂಖ್ಯೆಯೇ ಹೆಚ್ಚಾಗಿತ್ತು.
ಯುವಕರು ಅಲ್ಲೇ ಸಿಗುವ ಸಣ್ಣ ಗಿಡಗಳ ದಂಟು, ಕಡ್ಡಿಗಳು ಮತ್ತು ಕಲ್ಲುಗಳನ್ನು ಬಳಸಿಕೊಂಡು ಸಾಂಕೇತಿಕವಾಗಿ ‘ಮದುವೆ ಮಂಟಪ’ವನ್ನು (Wedding Canopy) ನಿರ್ಮಿಸಿದರು. ‘ನಮಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಲಿ, ಕನ್ಯೆ ಸಿಗುವಂತೆ ಮಾಡು ತಂದೆ’ ಎಂದು ಮೈಲಾರ ಲಿಂಗನಿಗೆ ಭಕ್ತಿಯಿಂದ ನಮಸ್ಕರಿಸಿದರು.