
ಮೈಸೂರು, (ಡಿಸೆಂಬರ್ 12): ಮೈಸೂರು (ಮೈಸೂರು) ಅಂದ್ರೆ ತಟ್ಟನೆ ನೆನಪಾಗೋದು ಮೈಸೂರು ಅರಮನೆ (ಮೈಸೂರು ಅರಮನೆ). ಇಂತಹ ಅರಮನೆ ಅಪಾಯದಲ್ಲಿದೆ. ಹೌದು ಮೈಸೂರು ಅರಮನೆಯ ವರಹಾ ದ್ವಾರದ ಕಮಾನಿನ ಮೇಲ್ಚಾವಣಿಯ ಗಾರೆ ಕಿತ್ತು ಕೆಳಗೆ ಬಿದ್ದಿದೆ. ಈ ವೇಳೆ ಅಲ್ಲಿ ಯಾರು ಇಲ್ಲದ ಕಾರಣ ಅದೃಷ್ಟವಶಾತ್ ಅಪಾಯ ತಪ್ಪಿದೆ. ಆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಬೈಕ್ ನಿಲ್ಲಿಸಿದ್ದು ಬೈಕ್ ಜಖಂಗೊಂಡಿದೆ. ಅಸಲಿಗೆ ಅರಮನೆ ನಿರ್ಮಿಸಿ 113 ವರ್ಷವಾಗಿದೆ. ಶತಮಾನದ ಹಳೆಯ ಕಟ್ಟಡಕ್ಕೆ ಕಾಯಕಲ್ಪ ನೀಡಬೇಕಾಗಿದೆ. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.
ಇದೇ ರೀತಿ ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಲ್ಯಾನ್ಸಡೌನ್ ಕಟ್ಟಡ ಕುಸಿದು ಅಪಾರ ಸಾವು ನೋವು ಸಂಭವಿಸಿದೆ. ಮತ್ತೊಂದು ಕಡೆ ಮೈಸೂರು ರಾಜರು ಕಟ್ಟಿಸಿದ್ದ ದೇವರಾಜ ಮಾರುಕಟ್ಟೆಯ ಒಂದು ಭಾಗ ಸಹ ಕುಸಿದು ಬಿದ್ದಿತ್ತು. ಇದೇ ಪರಿಸ್ಥಿತಿ ಮೈಸೂರು ಅರಮನೆಗೆ ಬರಬಾರದು ಎಂದಾದರೆ ತಕ್ಷಣ ಈ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ.
ಇದನ್ನೂ ನೋಡಿ: ಮೈಸೂರು ಅರಮನೆಯ ಮುಖ್ಯದ್ವಾರದ ಮೇಲ್ಚಾವಣಿ ಕುಸಿತ: ತಪ್ಪಿದ ಅನಾಹುತ
ಮೈಸೂರು ಅರಮನೆಗಳ ನಗರ ಎಂದು ಕರೆಯುತ್ತಾರೆ. “ಮೈಸೂರು ಅರಮನೆ” ಎಂದಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳುವುದಿಲ್ಲ. ಇದು ಮೈಸೂರು ಹಿಂದಿನ ಸಂಸ್ಥಾನದ ಒಡೆಯರ್ ವಂಶದ ಅರಸರ ಹಾಗೂ ದರ್ಬಾರು ಶಾಲೆಯಾಗಿತ್ತು. ಈ ಅರಮನೆಯ ನಿರ್ಮಾಣವನ್ನು ಪ್ರಾರಂಭಿಸಿದ್ದು 1897ರಲ್ಲಿ. ಆದರೆ, ನಿರ್ಮಾಣ ಮುಗಿದಿದ್ದು 1912ರಲ್ಲಿ. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಮಾಡಿದ್ದ ಅರಮನೆ ಇತ್ತು. ಆದರೆ, ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲ್ಪಟ್ಟಿದೆ.
ಇದೀಗ ವಿಶ್ವವಿಖ್ಯಾತ ಅರಮನೆಯ ವರಾಹ ಮೈಸೂರು ಮೈಸೂರು ರಸ್ತೆ ಕುಸಿದಿರುವ ಘಟನೆ ಎಚ್ಚರಿಕೆ ಗಂಟೆಯಾಗಿದೆ. ಮುಂದೆ ಆಗಬಹುದಾದ ಅಪಾಯದ ಮುನ್ಸೂಚನೆಯಾಗಿದೆ. ಮುಂದೆ ಇದು ಹೀಗೆ ಇರುತ್ತೆ ಅಂತ ಹೇಳಕ್ಕಾಗಲ್ಲ. ಹೀಗಾಗಿ ಆದಷ್ಟು ಬೇಗ ವಿಶ್ವವಿಖ್ಯಾತ ಮೈಸೂರು ಅರಮನೆಗೆ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ