ಚಾಲಕನ ಜೊತೆ ಸ್ನೇಹ, ಗೆಳೆಯನ ಮೇಲೂ ಮೋಹ: ಅತ್ಯಾಚಾರ​ ಕತೆ ಹೇಳಿ ಸಿಕ್ಕಿಬಿದ್ದಳಾ ಯುವತಿ?

ಚಾಲಕನ ಜೊತೆ ಸ್ನೇಹ, ಗೆಳೆಯನ ಮೇಲೂ ಮೋಹ: ಅತ್ಯಾಚಾರ​ ಕತೆ ಹೇಳಿ ಸಿಕ್ಕಿಬಿದ್ದಳಾ ಯುವತಿ?


ಬೆಂಗಳೂರು, ಡಿಸೆಂಬರ್ 08: ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಂದು ಕೇರಳ ಮೂಲದ ಯುವತಿ ನೀಡಿದ ದೂರು ತನಿಖೆ ವೇಳೆ ಪೊಲೀಸರೇ ಶಾಕ್ ಆಗಿರುವ ಬೆಂಗಳೂರಿನಲ್ಲಿ ನಡೆದಿದೆ. ನಿಜವಾಗಿ ಆಕೆಯ ಮೇಲೆ ರೇಪ್ ಆಗಿದ್ಯಾ ಅಥವಾ ತನ್ನ ಬಾಯ್ ಫ್ರೆಂಡ್ ಬಳಿ ಸತ್ಯ ಮುಚ್ಚಿಡಲು ಆಕೆ ಸುಳ್ಳು ಹೇಳಿದಳಾ ಎನ್ನುವ ಅನುಮಾನವೀಗ ಖಾಕಿ ತಲೆಕೆಡಿಸಿದೆ.

ಮಡಿವಾಳ ಪೊಲೀಸ್ ಠಾಣೆಗೆ ಬಂದ ಯುವತಿಯೊಬ್ಬಳು ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದ್ದಾನೆ ಎಂದು ಆರೋಪಿಸಿದ್ದರು. ತಕ್ಷಣ ಅಲರ್ಟ್ ಆದ ನಂತರ ಎಫ್ ಐಆರ್ ದಾಖಲಿಸಿದ್ದಾರೆ. ಆದರೆ ನಡೆದ ಸ್ಥಳ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಆಗಿರುವ ಕಾರಣ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಕ್ಯಾಬ್ ಚಾಲಕ ಸರೇಶ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆತ ಬೇರೆಯದ್ದೇ ಕತೆ ಹೇಳಿದ್ದಾನೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ತಾನು ಮತ್ತು ದೂರು ನೀಡಿರುವ ಯುವತಿ ಪರಿಚಯಸ್ಥರು. ನಾನು ಅವಳ ಮೇಲೆ ಅತ್ಯಾಚಾರ ಮಾಡಿಲ್ಲ. ಈ ಹಿಂದೆ ಕ್ಯಾಬ್ ಬುಕ್ ಮಾಡಿದಾಗ ಇಬ್ಬರಿಗೂ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿತ್ತು ಎಂದು ತಿಳಿಸಿದ್ದಲ್ಲದೆ, ಇಬ್ಬರ ವಾಟ್ಸ್ಯಾಪ್ ಚಾಟ್ನ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಜೊತೆಗೆ ನಾವಿಬ್ಬರು ಒಪ್ಪಿಯೇ ದೈಹಿಕ ಸಂಪರ್ಕ ನಡೆಸಿದ್ದೇವೆ. ಈ ವೇಳೆ ನನ್ನ ಜೊತೆ ಬೇರೆ ಯಾರೂ ಇರಲಿಲ್ಲ ಎಂದು ತಿಳಿಸಿದ್ದಾನೆ. ಹೀಗಾಗಿ ಯುವತಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆಕೆ ಸಾಕಷ್ಟು ಗೊಂದಲದ ಹೇಳಿಕೆ ನೀಡಿದ್ದಾಳೆ.

ಕ್ಯಾಬ್ ಡ್ರೈವರ್ ಸಹ ಕೇರಳ ಮೂಲದವನಾಗಿದ್ದರೆ, ಇಬ್ಬರಿಗೂ ಪರಿಯವಿದ್ದ ಕಾರಣ ಇತ್ತೀಚೆಗೆ ಒಟ್ಟಾಗಿ ಪಾರ್ಟಿ ಕೂಡ ಮಾಡಿದರು. ಈ ವೇಳೆ ಯುವತಿಯ ಕುತ್ತಿಗೆ ಭಾಗಕ್ಕೆ ಸಣ್ಣ ಗಾಯವಾಗಿತ್ತು. ಆ ಬಳಿಕ ಯುವತಿ ಕೇರಳಕ್ಕೆ ತೆರಳಿದ್ದು, ಅಲ್ಲಿ ಆಕೆಯ ಬಾಯ್ ಫ್ರೆಂಡ್ ಗಾಯದ ಬಗ್ಗೆ ಕೇಳಿದ್ದಾನೆ. ಈ ವೇಳೆ ತನ್ನ ಮೇಲೆ ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಳು. ಗೆಳತಿ ಹೇಳಿದ್ದು ಸತ್ಯ ಎಂದು ತಿಳಿದ ಆಕೆ ಬಾಯ್ ಫ್ರೆಂಡ್ ಸೀದಾ ಮಡಿವಾಳ ಪೊಲೀಸ್ ಠಾಣೆಗೆ ಆಕೆಯನ್ನು ಕರೆತಂದು ಪ್ರಕರಣ ದಾಖಲಿಸಿದ್ದಾರೆ. ಆದರೆ ವಿಚಾರಣೆ ವೇಳೆ ಬೇರೆಯದ್ದೇ ಸತ್ಯ ಹೊರಬರುತ್ತದೆ. ಆರೋಪಿ ಸರೇಶ್ ನನಗೆ ಬಲವಂತವಾಗಿ ಯುವತಿ ಹೇಳಿರುವ ಹಿನ್ನಲೆಯಲ್ಲಿ ಸದ್ಯ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ತನಿಖೆ ಹಿಂದೆಯೇ ಪ್ರಕರಣದ ಅಸಲಿ ಹೊರಬರಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *