
ಬೆಂಗಳೂರು, ಜನವರಿ 14: ಸಂಕ್ರಾಂತಿ ಹಬ್ಬದಂದು (ಜನವರಿ 15) ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಗಿದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ ವರ್ಷ, ಸೂರ್ಯ ರಶ್ಮಿಗಳು ಶಿವಲಿಂಗವನ್ನು ಸ್ಪರ್ಶಿಸುವ ಅಪರೂಪದ ಸನ್ನಿವೇಶವು ಈ ವರ್ಷ ಸಂಜೆ 5:2 5:5 ರಿಂದ. ಸೂರ್ಯನ ಕಿರಣಗಳು ಶಿವಲಿಂಗದ ಪಾದದಿಂದ ಕೇಶದವರೆಗೆ ಸ್ಪರ್ಶಿಸುತ್ತವೆ. ಧನುರ್ಮಾಸದ ಪೂಜೆಯು ಇಂದು ಕೊನೆಗೊಳ್ಳಲಿದೆ, ಜನವರಿ 15 ರಂದು ವಿಶೇಷ ಅಭಿಷೇಕಗಳು ನಡೆಯಲಿವೆ. ಭಕ್ತರಿಗೆ ಸೂರ್ಯ ರಶ್ಮಿ ಸ್ಪರ್ಶದ ನೇರ ದರ್ಶನಕ್ಕಾಗಿ ಎಲ್ಇಡಿ ಪರದೆಗಳ ವ್ಯವಸ್ಥೆ ಮಾಡಲಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ