ಮಕರ ಸಂಕ್ರಾಂತಿ ಹಬ್ಬ: ಕೆಆರ್​ ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಮ್

ಮಕರ ಸಂಕ್ರಾಂತಿ ಹಬ್ಬ: ಕೆಆರ್​ ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಮುಂಜಾನೆಯೇ ಭಾರಿ ಟ್ರಾಫಿಕ್ ಜಾಮ್


ಬೆಂಗಳೂರು, ಜನವರಿ 14: ಬೆಂಗಳೂರಿನಲ್ಲಿ ಮಕರ ಸಂಕ್ರಾಂತಿ ಹಬ್ಬದ ಜೊತೆಗೆ ಕೆಆರ್ ಹಬ್ಬದ ಸಂಕ್ರಾಂತಿ ಭರಾಟೆ ಭರಾಟೆಯಾಗಿದೆ. ಇಂದು ಭೋಗಿ ಹಬ್ಬವಾಗಿದ್ದು, ಮಾರುಕಟ್ಟೆಗಳಲ್ಲಿ ಜನಜಂಗುಳಿ ಸೇರಿದೆ. ಕಬ್ಬು, ಎಳ್ಳು, ಬೆಲ್ಲ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವುದರಲ್ಲಿ ಜನ ನಿರತರಾಗಿದ್ದಾರೆ. ಕಳೆದ ಎರಡು ದಿನಗಳಿಂದ ವ್ಯಾಪಾರ, ವಹಿವಾಟು ತುಂಬಾ ಹೆಚ್ಚು. ಬೆಳಗ್ಗೆ 3-4 ಗಂಟೆಯಿಂದಲೇ ಜನರು ಕೆಆರ್ ಮಾರುಕಟ್ಟೆಯತ್ತ ತೆರಳುತ್ತಿದ್ದಾರೆ, ಅವೆನ್ಯೂ ರಸ್ತೆ ಸಂಪೂರ್ಣವಾಗಿ ಗ್ರಾಹಕರು ತುಂಬಿ ತುಳುಕುತ್ತಿದ್ದಾರೆ.

ಬೆಲೆಗಳು ದುಪ್ಪಟ್ಟಾಗಿದ್ದರೂ, ಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಸಲುವಾಗಿ ಜನರು ಖರೀದಿಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯ ಸುತ್ತಮುತ್ತಲಿನ ಟ್ರಾಫಿಕ್ ಇಂದು ಮತ್ತು ನಾಳೆಯೂ ಮುಂದುವರಿಯುವ ನಿರೀಕ್ಷೆಯಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *