ಮಲೈಕಾ ಟು ಮಲ್ಲಿ! ಬಾಲಿವುಡ್ ಬ್ಯೂಟಿಗೂ, Amruthadhaare ಸುಂದರಿಗೂ ಏನಿದು ಭಾರಿ ಕನೆಕ್ಷನ್​!

ಮಲೈಕಾ ಟು ಮಲ್ಲಿ! ಬಾಲಿವುಡ್ ಬ್ಯೂಟಿಗೂ, Amruthadhaare ಸುಂದರಿಗೂ ಏನಿದು ಭಾರಿ ಕನೆಕ್ಷನ್​!

ಮಲೈಕಾ ಟು ಮಲ್ಲಿ! ಬಾಲಿವುಡ್ ಬ್ಯೂಟಿಗೂ, Amruthadhaare ಸುಂದರಿಗೂ ಏನಿದು ಭಾರಿ ಕನೆಕ್ಷನ್​!

ಬಾಲಿವುಡ್ ನಟಿ ಮಲೈಕಾ ಅರೋರಾ ತನಗಿಂತ ಕಿರಿಯ ವಯಸ್ಸಿನವರೊಂದಿಗೆ ಡೇಟಿಂಗ್​ ಮಾಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಕನ್ನಡದ ‘ಅಮೃತಧಾರೆ’ ಸೀರಿಯಲ್​ನ ನಾಯಕಿ ಮಲ್ಲಿ ಕೂಡ ಕಿರಿಯ ವಯಸ್ಸಿನ ಹುಡುಗನ ಪ್ರೀತಿಯಲ್ಲಿ ಬಿದ್ದಿದ್ದಾರೆ.

ಬಾಲಿವುಡ್​ನ ಬ್ಯೂಟಿ ಎಂದೇ ಫೇಮಸ್​ ಆಗಿರುವವರ ಪೈಕಿ ನಟಿ ಮಲೈಕಾ ಅರೋರಾ (Malaika Arora) ಟಾಪ್​ನಲ್ಲಿ ಇದ್ದಾರೆ. ಇದಕ್ಕೆ ಕಾರಣ, ವಯಸ್ಸು 52 ಆದರೂ ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಈ ವಯಸ್ಸಿನಲ್ಲಿಯೂ ಸಕತ್​ ವರ್ಕ್​ಔಟ್​ ಮಾಡುತ್ತಾರೆ, ದೇಹವನ್ನು ಫಿಟ್​ ಆಗಿ ಇಟ್ಟುಕೊಂಡಿದ್ದಾರೆ ಎನ್ನುವುದು.

ಅದಕ್ಕಿಂತಲೂ ಹೆಚ್ಚಾಗಿ ಅವರು ಫೇಮಸ್​ ಆಗಿರೋದು, 52ನೇ ವಯಸ್ಸಿನಲ್ಲಿ ಮೂರನೆಯ ಬಾಯ್​ಫ್ರೆಂಡ್​ ಪಡೆದುಕೊಂಡಿರುವುದು. ನಟ ಅರ್ಬಾಜ್​ ಖಾನ್​ ಅವರಿಗೆ ಮಗುವನ್ನು ಪಡೆದ ಬಳಿಕ, ಡಿವೋರ್ಸ್​ ಕೊಟ್ಟ ನಟಿ ಕೊನೆಗೆ ಸಂಬಂಧದಲ್ಲಿ ಇದ್ದುದು ಹತ್ತು ವರ್ಷ ಕಿರಿಯ ನಟ ಅರ್ಜುನ್​ ಕಪೂರ್​ ಜೊತೆ. ದಶಕಗಳ ಕಾಲ ಸಂಬಂಧದಲ್ಲಿದ್ದ ನಟಿ ಕೊನೆಗೆ ಬ್ರೇಕಪ್​ ಆದರು.

ಅದಾದ ಬಳಿಕ ಇದೀಗ 52ನೇ ವಯಸ್ಸಿನಲ್ಲಿ 19 ವರ್ಷದ ಕಿರಿಯ ವಜ್ರದ ಉದ್ಯಮಿ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ. ಪ್ರೇಮಕ್ಕ ವಯಸ್ಸಲ್ಲ, ಮನಸ್ಸು ಮುಖ್ಯ ಎನ್ನುವುದು ಅವರ ಧ್ಯೇಯ.

ಇದೀಗ ಮಲೈಕಾ ಅರೋರಾಗೂ ಅಮೃತಧಾರೆಯ (Amruthadhaare) ಮಲ್ಲಿಗೂ ಕನೆಕ್ಷನ್​ ಮಾಡಲಾಗುತ್ತಿದೆ. ಇದಕ್ಕೆ ಕಾರಣ, ಮಲ್ಲಿ ತನಗಿಂತ ಸಿಕ್ಕಾಪಟ್ಟೆ ಚಿಕ್ಕ ವಯಸ್ಸಿನ ಹುಡುಗನ ಜೊತೆ ಲವ್​ನಲ್ಲಿ ಬಿದ್ದಿದ್ದಾಳೆ.

ಈ ಸೀರಿಯಲ್​ನಲ್ಲಿ ಸುನಿ ಮಲ್ಲಿಯನ್ನು ಪ್ರೀತಿಸ್ತಾ ಇರೋದು ನಿಜವಾದರೂ, ಸದ್ಯ ಜೈದೇವನ ಕುತಂತ್ರದಿಂದ ಮೋಸ ಮಾಡುವ ನೆಪದಲ್ಲಿ ಪ್ರೀತಿ ಮಾಡ್ತಿರೋದಾಗಿ ಹೇಳುತ್ತಿದ್ದಾನೆ. ಆದರೆ ಮಲ್ಲಿ ಮಾತ್ರ ನಿಜವಾಗಿಯೂ ಲವ್​ನಲ್ಲಿ ಬಿದ್ದಿದ್ದಾಳೆ.

ಮಲೈಕಾ ಅರೋರಾ ಹೇಳಿದಂತೆಯೇ, ಇಲ್ಲಿ ಗೌತಮ್​ ಕೂಡ ಭೂಮಿಕಾಗೆ ಪ್ರೀತಿಗೆ ವಯಸ್ಸಲ್ಲ, ಮನಸ್ಸು ಮುಖ್ಯ ಎಂದಿದ್ದಾನೆ. ಇದೇ ಕಾರಣಕ್ಕೆ ಬಾಲಿವುಡ್​​ ಮಲೈಕಾ ಮತ್ತು ಅಮೃತಧಾರೆ ಮಲ್ಲಿಗೆ ಲಿಂಕ್​ ಮಾಡಲಾಗುತ್ತಿದೆ.

Source link

Leave a Reply

Your email address will not be published. Required fields are marked *