Malaika Arora: ಪಿಂಕ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಮಲೈಕಾ! ಈ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

Malaika Arora: ಪಿಂಕ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಮಲೈಕಾ! ಈ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

Malaika Arora: ಪಿಂಕ್ ಸೀರೆಯಲ್ಲಿ ದೇವತೆಯಂತೆ ಮಿಂಚಿದ ನಟಿ ಮಲೈಕಾ! ಈ ಸೀರೆ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಡೇಟಿಂಗ್ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದ ಮಲೈಕಾ ಅರೋರಾ, ಇದೀಗ ತಮ್ಮ ಸ್ಟೈಲಿಶ್ ಲುಕ್‌ನಿಂದ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಅವರು ಧರಿಸಿದ್ದ ಪಿಂಕ್ ಸೀರೆ ಮತ್ತು ಅದರ ಬೆಲೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ನಟಿ ಕೃತಿಕಾ ಕಮ್ರಾ ಮತ್ತು ಟಿವಿ ನಿರೂಪಕ ಗೌರವ್ ಕಪೂರ್ ಅವರ ವಿವಾಹ ಸಮಾರಂಭವು ಸರಳವಾಗಿ ನೆರವೇರಿತು. ಮಾರ್ಚ್ 11 ರಂದು ಮುಂಬೈನ ಬಾಂದ್ರಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.

ಈ ಸಮಾರಂಭಕ್ಕೆ ಹಲವು ಸೆಲೆಬ್ರಿಟಿಗಳು ಬಂದಿದ್ದರೂ, ಮಲೈಕಾ ಅರೋರಾ ವಿಶೇಷ ಆಕರ್ಷಣೆಯಾಗಿದ್ದರು. ತಮ್ಮ ಫ್ಯಾಷನ್ ಸೆನ್ಸ್‌ನಿಂದ ಎಲ್ಲರನ್ನೂ ಬೆರಗುಗೊಳಿಸಿದರು. ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ಅವರು ಕ್ಲಾಸಿಕ್ ಮತ್ತು ಎಲಿಗೆಂಟ್ ಆಗಿ ಕಾಣುತ್ತಿದ್ದರು.

ಮಲೈಕಾ ಧರಿಸಿದ್ದ ಈ ಸೀರೆಯನ್ನು ಖ್ಯಾತ ಡಿಸೈನರ್ ಬ್ರ್ಯಾಂಡ್ ‘ಗೌರಿ ಮತ್ತು ನಾನಿಕಾ’ ವಿನ್ಯಾಸಗೊಳಿಸಿದ್ದಾರೆ. ಈ ಸೀರೆಯ ಬೆಲೆ ಸುಮಾರು 2.79 ಲಕ್ಷ ರೂಪಾಯಿ ಎನ್ನಲಾಗಿದೆ. ಸುಮಾರು 3 ಲಕ್ಷ ರೂ. ಬೆಲೆಯ ಈ ಸೀರೆ ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಈ ಸೀರೆಯ ವಿನ್ಯಾಸ ಕೂಡ ತುಂಬಾ ಆಕರ್ಷಕವಾಗಿದೆ. ಬಾರ್ಡರ್‌ನಲ್ಲಿ ಗೋಲ್ಡ್ ಲೇಸ್ ಕಸೂತಿ ಇದ್ದು, ಇಡೀ ಸೀರೆಯ ಮೇಲೆ ಮಲ್ಟಿಕಲರ್ ವರ್ಕ್ ಮಾಡಲಾಗಿದೆ. ಸಣ್ಣ ಸೀಕ್ವಿನ್‌ಗಳು ಮತ್ತು ಹೂವಿನ ಮಣಿಗಳ ಕೆಲಸವು ಸೀರೆಗೆ ವಿಶೇಷ ಹೊಳಪನ್ನು ನೀಡಿದೆ. ಮಲೈಕಾ ಸೀರೆಯನ್ನು ಸಾಂಪ್ರದಾಯಿಕವಾಗಿ ಉಟ್ಟು, ಸೆರಗನ್ನು ಉದ್ದವಾಗಿ ಬಿಟ್ಟಿದ್ದರಿಂದ ಡಿಸೈನ್ ಇನ್ನಷ್ಟು ಹೈಲೈಟ್ ಆಗಿತ್ತು.

ಮಲೈಕಾ ಸಿಂಪಲ್ ಆದ್ರೂ ಸ್ಟೈಲಿಶ್ ಲುಕ್‌ನಲ್ಲಿದ್ದರು. ಕುಂದನ್ ಚೋಕರ್ ಮತ್ತು ಅದಕ್ಕೆ ಹೊಂದುವ ಕಿವಿಯೋಲೆಗಳನ್ನು ಧರಿಸಿದ್ದರು. ಕೈಗಳಲ್ಲಿ ಕುಂದನ್ ಬಳೆಗಳು ಮತ್ತು ಕೆಲವು ಸ್ಟೇಟ್‌ಮೆಂಟ್ ಉಂಗುರಗಳನ್ನು ಹಾಕಿಕೊಂಡಿದ್ದರು. ಕೂದಲನ್ನು ಮಧ್ಯದಲ್ಲಿ ವಿಭಜಿಸಿ ಲೋ ಬನ್ ಹಾಕಿದ್ದರು. ಸಾಫ್ಟ್ ಸ್ಮೋಕಿ ಕಣ್ಣುಗಳು, ತಿಳಿ ಬ್ಲಶ್ ಮತ್ತು ಗ್ಲೋಸಿ ಲಿಪ್ ಶೇಡ್ ಅವರ ನೋಟವನ್ನು ಇನ್ನಷ್ಟು ಆಕರ್ಷಕವಾಗಿಸಿತ್ತು.

Source link

Leave a Reply

Your email address will not be published. Required fields are marked *