ಸಿಎಂ ಉದ್ಘಾಟಿಸಿದ್ರೂ ಬಳಕೆಯಾಗದ ಐದಂತಸ್ತಿನ ಭವನ: ಮಾದಪ್ಪನ ಭಕ್ತರ ಪಾಡು ಕೇಳೋರ್‍ಯಾರು?

ಸಿಎಂ ಉದ್ಘಾಟಿಸಿದ್ರೂ ಬಳಕೆಯಾಗದ ಐದಂತಸ್ತಿನ ಭವನ: ಮಾದಪ್ಪನ ಭಕ್ತರ ಪಾಡು ಕೇಳೋರ್‍ಯಾರು?


ಚಾಮರಾಜನಗರ, ಫೆಬ್ರವರಿ 27: ಮಾದಪ್ಪನ ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಹಬ್ಬ, ಹರಿದಿನ ಸೇರಿದಂತೆ ಅಮವಾಸ್ಯೆ ಬಂದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ (ಮಲೆ ಮಹದೇಶ್ವರ ಬೆಟ್ಟ) ಕಾಲಿಡಲು ಸ್ಥಳ ಇರುವುದಿಲ್ಲ. ತಂಗುವುದಕ್ಕೂ ಸ್ಥಳವಿರಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಪ್ರಾಧಿಕಾರವು ಮುಂದಾಗಿದೆ. 376 ಕೊಠಡಿಯ ವಜ್ರ ಮಲೆ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಆದರೂ ಪ್ರಯೋಜನಕ್ಕೆ ಬಾರದ ರೀತಿಯಂತಾಗಿದೆ. ಪ್ರಾಧಿಕಾರದ ವಿಳಂಬ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಳು ಎಪ್ಪತ್ತೇಳು ಮಲೆಯ ಒಡೆಯ ಮಲೆ ಮಾದಪ್ಪನಿಗೆ ಭಕ್ತ ವೃಂದ ಅಪಾರ. ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯದಿಂದಲೂ ಮಾದಪ್ಪನ ದರ್ಶನ ಪಡೆಯಲು ಕೋಟ್ಯಂತರ ಸಂಖ್ಯೆಯಲ್ಲಿ ಬರುತ್ತಾರೆ. ಹೀಗೆ ಬರುವ ಭಕ್ತ ವೃಂದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಪ್ರಾಧಿಕಾರದ ಆದ್ಯ ಕರ್ತವ್ಯ. ಯಾವುದೇ ದೂರದಿಂದ ಬರುವ ಭಕ್ತಾದಿಗಳು ವಿಶ್ರಮಿಸಲು ಕೊಠಡಿಗಳ ಕೊರತೆ ಇರುವ ಕಾರಣ 5 ಮಹಡಿಯಲ್ಲಿ 376 ಕೊಠಡಿಗಳು ಉಳ್ಳ ವಜ್ರ ಭವನ ನಿರ್ಮಾಣ ಮಾಡಲಾಗಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಕಾರ್ಯಕ್ರಮ ಆಯೋಜಿಸಿದ್ದರು. ಆದರೂ ಈವರೆಗೆ ಭಕ್ತರ ವಾಸ್ತವಕ್ಕೆ ನೀಡದೆ ಇರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಮಲೆ ಮಹದೇಶ್ವರನಿಗೆ ಮಹಾಮೋಸ: ಸಚಿವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗುತ್ತಿಗೆದಾರರು

ಇನ್ನು ಈ ನೂತನ ವಜ್ರಮಲೆ ಭವನದಲ್ಲಿ ಬರೋಬ್ಬರಿ 8 ವಿವಿಐಪಿ ಕೊಠಡಿಗಳು, ಕೇವಲ ಈ ಕೊಠಡಿಗಳಿಗೆ ಮಾತ್ರ ಎಸಿ ಸೇರಿದಂತೆ ಮಂಚ, ಸೋಫಾ ಹಾಗೂ ಎಲ್ಲಾ ರೀತಿಯ ಫರ್ನಿಚರ್‌ಗಳನ್ನು ಅಳವಡಿಸಲಾಗಿದೆ. ಇನ್ನುಳಿದ ಸಾಮಾನ್ಯ ಕೋಣೆಗಳಿಗೆ ಇನ್ನು ಮುಂದೆ ಅಳವಡಿಕೆ ಮಾಡುವ ಕೆಲಸ ಮಾಡಲಾಗುತ್ತಿದೆ.

ಇತ್ತೀಚೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, 11 ಕೋಟಿ ರೂ. ಕಳಪೆ ಕಾಮಗಾರಿ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕಿ ಬಾತ್ ಪ್ರೇರಣೆ: ಸಿರಿಧಾನ್ಯದ ಹೋಟೆಲ್ ತೆರೆದ ಚಾಮರಾಜನಗರದ ಗೃಹಿಣಿ

ಆರಂಭ ಶೂರತ್ವದಂತೆ ಆರಂಭಿಸಿ ಬಳಿಕ ಕೆಲಸ ಆದಮೇಲೆ ಯಾರಿಗೂ ಪ್ರಯೋಜನಕ್ಕೆ ಬಾರದೆ ಇರುವ ರೀತಿ ಮಾಡಿದ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ನಡೆ ಈಗ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *