ಮಾತಿನ ಮಲ್ಲಮ್ಮ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ರಿಯಾಲಿಟಿ ಶೋನಲ್ಲಿದ್ದ ಬಳಿಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಈಗ ಅವರಿಗೆ ಸಿನಿಮಾಗಳಿಂದ ಅವಕಾಶಗಳು ಸಿಗುತ್ತಿವೆ. ಧಾರಾವಾಹಿಗಳಲ್ಲಿ ನಟಿಸುವ ಆಫರ್ ಕೂಡ ಬಂದಿದೆ. ಆ ಬಗ್ಗೆ ಮಲ್ಲಮ್ಮ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘ವಿನಾಶಕಾಲೇ’ ಸಿನಿಮಾದಲ್ಲಿ ಮಲ್ಲಮ್ಮ ಅವರು ನಟಿಸುತ್ತಿದ್ದಾರೆ. ತಾಯಿಯ ಪಾತ್ರ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಶೋನಿಂದ ತಮ್ಮ ಬದುಕು ಬದಲಾಗಿದೆ ಎಂದು ಮಲ್ಲಮ್ಮ (ಮಲ್ಲಮ್ಮ) ಹೇಳಿದ್ದಾರೆ. ಈಗ ಎಲ್ಲರೂ ಅವರನ್ನು ಗುರುತಿಸುತ್ತಾರೆ. ಚಿಕ್ಕ ಮಕ್ಕಳಿಗೂ ಕೂಡ ಮಲ್ಲಮ್ಮ ಯಾರು ಎಂಬುದು ಗೊತ್ತಾಗಿದೆ. ನಟನೆಯನ್ನು ಕಲಿತು ಸಿನಿಮಾಗಳಲ್ಲಿ ನಟಿಸುವುದಾಗಿ ಮಲ್ಲಮ್ಮ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.