
ಇನ್ನು ಬಿಗ್ಬಾಸ್ ಮನೆಯಲ್ಲಿ ಮಲ್ಲಮ್ಮ (Bigg Boss Mallamma) ಪವಾಡ ಜೋರಾಗಿಯೇ ನಡೆದಿದೆ. ಒಂಟಿ-ಜಂಟಿ ಟಾಸ್ಕ್ ಮಲ್ಲಮ್ಮ ಅವರನ್ನು ಪೇಚಿಗೆ ಸಿಲುಕಿಸಿದೆ. ದಿನಸಿ ಸಾಮಗ್ರಿ ಪಡೆಯಲು Bigg Boss ವಿಶೇಷ ಟಾಸ್ಕ್ ನೀಡಿದ್ದರು. ತಮಗೆ ಬೇಕಾದ ದಿನಸಿ ಆಯ್ಕೆ ಮಾಡುವ ಹಕ್ಕು ಒಂಟಿಗಳಿಗೆ ಮಾತ್ರ ಇತ್ತು. ಹೀಗಾಗಿ, ಒಂಟಿ ತಂಡದ ಸದಸ್ಯರು ಒಬ್ಬೊಬ್ಬರೇ ಆಕ್ಟಿವಿಟಿ ಏರಿಯಾಗೆ ಹೋಗಿ ದಿನಸಿ ಸಾಮಗ್ರಿಗಳಿರುವ ಜೋಡಿ ಬಾಸ್ಕೆಟ್ ಪೈಕಿ ತಮ್ಮ ಇಚ್ಛೆಯ ಒಂದು ಬ್ಯಾಸ್ಕೆಟ್ ಅನ್ನು ಆಯ್ಕೆ ಮಾಡಿ ಪಕ್ಕದ ಟೇಬಲ್‌ನಲ್ಲಿ ಇರಿಸಬೇಕಿತ್ತು.
ಪ್ರತಿ ಒಂಟಿ ಸದಸ್ಯರು ಎರಡು ಬಾಸ್ಕೆಟ್ ಆಯ್ಕೆ ಮಾಡುವ ಅವಕಾಶ ಇತ್ತು. ಇದನ್ನ 30 ಸೆಕೆಂಡ್‌ಗಳಲ್ಲಿ ಮಾಡಿ ಮುಗಿಸಬೇಕಿತ್ತು. ಆಯ್ಕೆ ಮಾಡದೇ ಬಿಟ್ಟ ಬಾಸ್ಕೆಟ್ ಜಂಟಿಗಳ ಪಾಲಾಗುತ್ತಿತ್ತು. 30 ಸೆಕೆಂಡ್‌ಗಳ ಒಳಗೆ ಟೇಬಲ್ ಮೇಲೆ ಬಾಸ್ಕೆಟ್‌ಗಳು ಇಡದೇ ಇದ್ದಲ್ಲಿ, ದಿನಸಿಯನ್ನ ಬಿಗ್ ಬಾಸ್ ವಾಪಸ್ ಪಡೆಯುತ್ತಾರೆ. ಆ ದಿನಸಿ ಸಾಮಾಗ್ರಿ ಯಾರಿಗೂ ದಕ್ಕುವುದಿಲ್ಲ ಅಂತ ‘ಬಿಗ್ ಬಾಸ್’ ಘೋಷಿಸಿದ್ದರು.