ಪೋಕ್ಸೋ ಕೇಸ್​​: ವಿಚಾರಣೆಗೆ ಹಾಜರಾಗದೆ ಹೈಕೋರ್ಟ್​​ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

ಪೋಕ್ಸೋ ಕೇಸ್​​: ವಿಚಾರಣೆಗೆ ಹಾಜರಾಗದೆ ಹೈಕೋರ್ಟ್​​ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ


ಮಲ್ಲಿಕಾರ್ಜುನ್ ಮುತ್ಯಾಚಿತ್ರದ ಕ್ರೆಡಿಟ್ ಮೂಲ: ಗೂಗಲ್

ಯಾದಗಿರಿ, ಫೆಬ್ರವರಿ 27: ಅಪ್ರಾಪ್ತ ಬಾಲಕಿಯೋರ್ವಳ ಜೊತೆ ಅನುಚಿತ ವರ್ತನೆ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ಉನ್ನತ ಮೊರೆ ಹೋಗಿದ್ದಾರೆ. ಪೋಷಕರೇ ದೂರು ನೀಡಿಲ್ಲ. ಆದ್ರೂ ಎಫ್ ಐಆರ್ ದಾಖಲಿಸಿರುವ ಕಾರಣ, ಈ ಸಂಬಂಧ ಕಲಬುರಗಿ ಉಚ್ಚ ಪೀಠದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ಈ ಅರ್ಜಿಯ ವಿಚಾರಣೆ.

ಪ್ರಕರಣ ರದ್ದು ಮಾಡುವಂತೆ ಭಕ್ತರ ಪಟ್ಟು

ಮಲ್ಲಿಕಾರ್ಜುನ ಮುತ್ಯಾ ಮೇಲೆ ಪೋಕ್ಸೋ ಕೇಸ್ ಹಿನ್ನಲೆ ಮಠದ ಪ್ರಕರಣದ ಕುರಿತು ಮುಂದಿನ ಹೋರಾಟದ ಬಗ್ಗೆ ಅಂಗಣ ಸಭೆ ನಡೆಸಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದು, ಮುಂದಿನ ಕಾನೂನು ಹೋರಾಟದ ಮಹತ್ವದ ನಿರ್ಣಯಗಳನ್ನು ಮಾಡಲಾಯಿತು. ಘಟನೆ ಸಂಬಂಧ ಅಪ್ರಾಪ್ತೆಯ ದೂರು ನೀಡಿದರೂ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಕೂಡಲೇ ಕೇಸ್ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಬಖ್ತರು ಹೋರಾಟ ನಡೆಸೋದಾಗಿ ಮಹಲ್ ರೋಜಾ ಮಠದಲ್ಲಿ ಸಭೆ ಬಳಿಕ ಬಿಜೆಪಿ ನಾಯಕಿ ಲಲಿತಾ ಹೇಳಿದ್ದಾರೆ.

ಇದನ್ನೂ ಓದಿ: ಬಾಲಕಿ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್; ಮಲ್ಲಿಕಾರ್ಜುನ ಮುತ್ಯಾನ ಬಗ್ಗೆ ಹೇಳಿದ್ದಿಷ್ಟು

ಅಪ್ರಾಪ್ತೆಯ ಹೇಳಿಕೆಯನ್ನೂ ಪಡೆಯದೆ ಎಫ್ ಐಆರ್ ದಾಖಲಿಸಲಾಗಿದೆ. ಇಲ್ಲಿ ಎಡವಿದ್ದು, ಕೇಸ್ ರದ್ದು ಮಾಡಲು ಎರಡು ದಿನ ಗಡುವು ನೀಡುತ್ತೇವೆ. ಆವೂ ರದ್ದು ಮಾಡದಿದ್ದಲ್ಲಿ ಭಕ್ತರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿದಿದ್ದಾರೆ ಎಂದು ಭಕ್ತರು ಪ್ರಶ್ನಿಸಿದ್ದಾರೆ. ಈ ನಡುವೆ ಪ್ರಕರಣ ಸಂಬಂಧ ಮಾತ್ರ ನೋಟಿಸ್ ನೀಡಿದ್ದರೂ ಮಲ್ಲಿಕಾರ್ಜುನ್ ಮುತ್ಯಾ ಈವರೆಗೂ ವಿಚಾರಣೆಗೆ ಹಾಜರಾಗಿಲ್ಲ. ಕೇಸ್ ದಾಖಲು ಬೆನ್ನಲ್ಲೇ ನಾಪತ್ತೆಯಾಗಿರುವ ಮುತ್ಯಾ ನಿನ್ನೆ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದರು. ಅತ್ತ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಪ್ರಾಪ್ತ ಬಾಲಕಿ ಪೋಷಕರಿಂದ ಕೂಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ವಿಡಿಯೋವನ್ನು ತಿರುಚಿರುವ ಆರೋಪ ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *