ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮಲ್ಲಿಕಾರ್ಜುನ ಮುತ್ಯಾನ ಬಗ್ಗೆ ಹೇಳಿದ್ದಿಷ್ಟು

ಬಾಲಕಿ‌ ಪೋಷಕರಿಂದ ವಿಡಿಯೋ ಹೇಳಿಕೆ ರಿಲೀಸ್: ಮಲ್ಲಿಕಾರ್ಜುನ ಮುತ್ಯಾನ ಬಗ್ಗೆ ಹೇಳಿದ್ದಿಷ್ಟು


ಯಾದಗಿರಿ, ಫೆಬ್ರವರಿ 26: ಮಲ್ಲಿಕಾರ್ಜುನ ಮುತ್ಯಾ (ಮಲ್ಲಿಕಾರ್ಜುನ ಮುತ್ಯಾ) ವಿರುದ್ಧ ಪೋಕ್ಸೋ ಕೇಸ್ ವಿಚಾರಕ್ಕೆ ಸದ್ಯ ಪರಾರಿಯಾಗಿರುವ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ಇತ್ತ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಪ್ರಾಪ್ತ ಬಾಲಕಿ ಪೋಷಕರಿಂದ ಕೂಡ ವಿಡಿಯೋ ಹೇಳಿಕೆ ಬಿಡುಗಡೆಯಾಗಿದೆ. ನಮ್ಮ ಕುಟುಂಬ ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರೇ ಇದ್ದೇವೆ. ಸುಮಾರು ಮೂರು ನಾಲ್ಕು ವರ್ಷದಿಂದ ಮಲ್ಲಿಕಾರ್ಜುನ ದರ್ಶನಾಶೀರ್ವಾದ ಪಡೆಯಲು ಹೋಗುತ್ತೇವೆ. ಮಗಳ ಹುಟ್ಟುಹಬ್ಬಕ್ಕೆ ಆಶೀರ್ವಾದ ಪಡೆಯಲು ಕುಟುಂಬಸ್ಥರು ಅಪ್ಪಾಜಿ ಮಠಕ್ಕೆ ಹೋಗಿದ್ದೆವು. ಆಶೀರ್ವಾದ ಕೊಟ್ಟರು. ನಾವು ಅದನ್ನು ಖುಷಿಯಾಗಿ ವಿಡಿಯೋ ಮಾಡಿದ್ದೇವೆ. ನಮ್ಮ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಆಶೀರ್ವಾದ ಅಂತ ಹಾಕಿದ್ದೇವೆ. ಆದರೆ ಕಿಡಿಗೇಡಿಗಳು ವಿಡಿಯೋ ತಿರುಚಿ ವೈರಲ್ ಮಾಡಿದ್ದಾರೆ. ಪೊಲೀಸ್ ಇಲಾಖೆ ಸೇರಿ ಎಲ್ಲಿಗೆ ಕರೆದಿದ್ದರೂ ನಾವು ಎಲ್ಲ ಕಡೆಗೆ ಹೋಗಿದ್ದೇವೆ. ಅಪ್ಪಾ ಅವರದ್ದೂ ಏನೂ ತಪ್ಪಿಲ್ಲ, ದೇವರ ಸಮಾನ ಎಂದು ಹೇಳಿದ್ದೇವೆ. ವಿಡಿಯೋ ತಿರುಚಿದವರ ಮೇಲೆ ಕ್ರಮವಾಗಬೇಕು ಎಂದು ಬಾಲಕಿಯನ್ನು ತಡೆದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *