ಕೋಲಾರ, (ನವೆಂಬರ್ 10): ಪತ್ರದ ಆದೇಶದಂತೆ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಾಳೆ (ನವೆಂಬರ್ 11) ಕೋಲಾರದ ಟಮಕಾ ಬಳಿ ಇರುವ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮರುಮತ ಎಣಿಕೆ ಕಾರ್ಯ ನಡೆಯಲಿದೆ. ಒಟ್ಟು 18 ಸುತ್ತು ಮರುಮತ ಎಣಿಕೆ ಕಾರ್ಯ ನಡೆಯಲಿದ್ದು, ಒಂದೇ ಕೋಣೆಯಲ್ಲಿ 14 ಟೇಬಲ್ ಹಾಕಿ ಮರು ಎಣಿಕೆ ಮಾಡಲಾಗುತ್ತಿದೆ. ಇನ್ನು ಪ್ರತಿ ಟೇಬಲ್ಗೆ ಸಿಸಿಟಿವಿ, 360 ಡಿಗ್ರಿ ಕ್ಯಾಮರಾ ಅಳವಡಿಕೆ ಮಾಡಲ್ಪಟ್ಟಿದೆ, ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಒದಗಿಸಲಾಗಿದೆ. ಇನ್ನೊಂದೆಡೆ ಗೆದ್ದ ಕಾಂಗ್ರೆಸ್ ನ ನಂಜೇಗೌಡ ಹಾಗೂ ಜೆಡಿಎಸ್ನ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡಗೆ ಲಾಭ ಶುರುವಾಗಿದೆ.
2023 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಕೆ.ವೈ.ನಂಜೇಗೌಡ 248 ಮತಗಳಿಂದ ಗೆದ್ದಿದ್ದರು. ಆದರೆ, ಮತ ಎಣಿಕೆಯಲ್ಲಿ ಲೋಪವಾಗಿದೆ, ಈ ಸಂಬಂಧ ನಂಜೇಗೌಡ ಅವರಿಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈಗ ಸೂಚನೆ, ಮರು ಮತ ಎಣಿಕೆಗೆ ಆದೇಶ ನೀಡಿವೆ. ಇದೀಗ ನಾಳೆ ಮಾಲೂರು ವಿಧಾನಸಭಾ ಕ್ಷೇತ್ರದ ಮತಗಳನ್ನು ಮರು ಎಣಿಕೆ ಮಾಡಲು ಕೋಲಾರದ ಸಿದ್ದತೆ ಮಾಡಿಕೊಂಡಿದೆ. ಕೋಲಾರದ ಟಕಮದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ. ಮರು ಮತಎಣಿಕೆಗೆ ಉಪವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್. ಮೈತ್ರಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ಇನ್ನೂ ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಿಲು ತಹಶೀಲ್ದಾರ್ ಅವರನ್ನು ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಸಿದ್ದತೆಗಳನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ನಂಜೇಗೌಡಗೆ ತುಸು ರಿಲೀಫ್: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಗೆ ಸುಪ್ರೀಂ ಕೋರ್ಟ್ ಸೂಚನೆ
ನಾಳೆ ಮರು ಮತಎಣಿಕೆ ಇಂದು (ನವೆಂಬರ್ 10) ಕೋಲಾರ ಜಿಲ್ಲೆಯ ಅಧಿಕಾರಿ ಕಚೇರಿ ಬಳಿಯ ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು. ಕಳೆದ ಎರಡು ವರ್ಷದ ಹಿಂದೆ ನಡೆದ ಚುನಾವಣೆ ನಂತರದಲ್ಲಿ ಐವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿರಿಸಲಾಯಿತು. ಈಗ ನಾಳಿನ ಎಣಿಕಾ ಕಾರ್ಯಕ್ಕೆ ಸ್ಟ್ರಾಂಗ್ ರೂಂ ಓಪನ್ ಮಾಡಿ ಅಭ್ಯರ್ಥಿಗಳಿಗೆ ಇವಿಎಂ ಮತ ಯಂತ್ರಗಳನ್ನು ತೋರಿಸಲಾಗಿದೆ.
ಈ ವೇಳೆ ಬಿಜೆಪಿ ಅಭ್ಯರ್ಥಿ ಹಾಗೂ ದೂರುದಾರ ಬಿಜೆಪಿ ಮಂಜುನಾಥಗೌಡ ಅವರು ಸುಮಾರು 252 ಇವಿಎಂ ಮತಯಂತ್ರಗಳ ಬಾಕ್ಸ್ ತೆರೆಯಲಾಗಿದೆ. ಮತ ಎಣಿಕೆ ಮುಗಿದ ಮೇಲೆ ಅದರ ಇವಿಎಂ ಬಾಕ್ಸ್ ನಲ್ಲಿ ಹಾಕಿ ಸೀಲ್ ಮಾಡಬೇಕು. ಆದರೆ ಅಲ್ಲಿ ಸೀಲ್ ಮಾಡಿಲ್ಲ ಇಲ್ಲಿ ಅಧಿಕಾರಿಗಳ ನಿರ್ಲ್ಯಕ್ಷ ಇದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ನಾಳಿನ ಮತ ಎಣಿಕೆ ವೇಳೆ ನಮ್ಮ ಮನವಿಯಂತೆ ಮೊದಲು ವಿವಿ ಪ್ಯಾಟ್ ಹಾಗೂ ಇವಿಎಂಎಣಿಕೆ ಮಾಡಿ ಎರಡು ಬಾರಿ ಹೊಂದಾಣಿಕೆಯಾದ ನಂತರ ಮತ ಎಣಿಕೆ ಕಾರ್ಯ ಮಾಡಬೇಕು ಎಂದು ಬಿಜೆಪಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಸೇರಿದಂತೆ ಹಲವು ಜಿಲ್ಲಾಧಿಕಾರಿ ಎಂ.ಆರ್.ರವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಅಳವಡಿಸಲಾಗಿದೆ. ಜೊತೆಗೆ ಇಡೀ ಕೋಣೆಗೆ 360 ಡಿಗ್ರಿ ಅಳವಡಿಸಲಾಗಿದೆ. ಇದರ ಜೊತೆಗೆ ಮ್ಯಾನುಯಲ್ ಕ್ಯಾಮರಾ ಮೂಲಕವೂ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.ಇನ್ನು ಮತ ಎಣಿಕೆ ಕೇಂದ್ರದ ಸುತ್ತಲೂ 144 ಸೆಕ್ಷನ್ ಜಾರಿ ಮಾಡಿದ್ದು ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತಕೇಂದ್ರದ ಒಳಗೆ ಅಭ್ಯರ್ಥಿ ಹಾಗೂ ಅವರ ಏಜೆಂಟ್ ಗಳನ್ನು ಪಡಿಸಿ ಮತ್ಯಾರಿಗೂ ಪ್ರವೇಶವಿಲ್ಲ. ಇಡೀ ಕ್ಯಾಂಪಸ್ ಅನ್ನು ಸಿಸಿಟಿವಿ ಮತ್ತು ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿದೆ.
ಇನ್ನು ಮತ ಎಣಿಕೆ ಕೇಂದ್ರಕ್ಕೆ ಸ್ಟ್ರಾಂಗ್ ರೂಂ ನಿಂದ ಅಭ್ಯರ್ಥಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಇವಿಎಂ ಮೆಷನ್ ಗಳನ್ನು ಸಾಗಣೆ ಮಾಡಲಾಗಿದೆ. ಬಿಗಿ ಭದ್ರತೆಯಲ್ಲಿ ಜೀರೋ ಟ್ರಾಫಿಕ್ ನಲ್ಲಿ ಸಾಗಾಣೆ ಮಾಡಲಾಗಿದೆ. ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಲಿದೆ. ಈ ಸುಪ್ರೀಂ ಕೋರ್ಟ್ ಆದೇಶದ ಜೊತೆಗೆ ಮತ ಎಣಿಕೆ ಕಾರ್ಯವನ್ನು ಮಾಡಬೇಕೆಂದು ಕೋರಲಾಗಿದೆ
ಒಟ್ಟಾರೆ ಇಡೀ ದೇಶದ ಗಮನ ಸೆಳೆದಿರುವ ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆಯ ಫಲಿತಾಂಶ ಕೇವಲ ಜಿಲ್ಲೆಯಷ್ಟೇ ಅಲ್ಲಾ ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಹೀಗಾಗಿ ನಾಳೆ ನಡೆಯುವ ಮರುಎಣಿಕೆ ಫಲಿತಾಂಶ ಎಲ್ಲರ ಚಿತ್ತ ನೆಟ್ಟಿದೆ.